ದೇಶ

ನೇಪಾಳದಲ್ಲಿ 5.4 ತೀವ್ರತೆಯ ಭೂಕಂಪ, ದೆಹಲಿ, ಎನ್ ಸಿಆರ್ ನಲ್ಲೂ ಕಂಪಿಸಿದ ಭೂಮಿ

Lingaraj Badiger

ನವದೆಹಲಿ: ನೆರೆಯ ನೇಪಾಳದಲ್ಲಿ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ 5.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶದ ಸುತ್ತಮುತ್ತಲಿನ ನಗರಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. 

ಈ ವಾರದಲ್ಲಿ ಎರಡನೇ ಭಾರಿ ಭೂಮಿ ಕಂಪಿಸಿದ್ದು, ಇಂದು ನೋಯ್ಡಾ, ಗುರುಗ್ರಾಮ್, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್‌ನ ಇತರ ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ವರದಿಯಾಗಿದೆ.

ಗಾಬರಿಗೊಂಡ ಜನ ತಮ್ಮ ಮನೆಗಳು ಮತ್ತು ಕಟ್ಟಡಗಳಿಂದ ಹೊರಗೋಡಿ ರಸ್ತೆಗೆ ಬಂದಿದ್ದಾರೆ. ಅಲ್ಲದೆ ಕೆಲವರು ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ಕಂಪನದ ಬಗ್ಗೆ ಮಾಹಿತಿ ನೀಡಿದ್ದಾರೆ.

ನೇಪಾಳ ಭೂಕಂಪನದ ಕೇಂದ್ರಬಿಂದುವಾಗಿದೆ. ರಿಕ್ಟರ್ ಮಾಪನದಲ್ಲಿ 5.4ರ ತೀವ್ರತೆಯ ಭೂಕಂಪನ ಉಂಟಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ನೇಪಾಳದಲ್ಲಿ ಭೂಮಿಯಿಂದ 10 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂರು ದಿನಗಳ ಹಿಂದಷ್ಟೇ ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪನ ಸಂಭವಿಸಿತ್ತು.

SCROLL FOR NEXT