ದೇಶ

ಕುಲಪತಿ ಹುದ್ದೆಯಿಂದ ರಾಜ್ಯಪಾಲರ ವಜಾ ಸುಗ್ರೀವಾಜ್ಞೆಯನ್ನು ರಾಜ್ಯಪಾಲರಿಗೇ ಕಳುಹಿಸಿದ ಕೇರಳ ಸರ್ಕಾರ! 

Srinivas Rao BV

ತಿರುವನಂತಪುರಂ: ಕೇರಳದಲ್ಲಿ ಸಿಪಿಐ ಮಾರ್ಕ್ಸಿಸ್ಟ್ ನೇತೃತ್ವದ ಸರ್ಕಾರ, ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಯಿಂದ ರಾಜ್ಯಪಾಲರನ್ನು ವಜಾಗೊಳಿಸುವುದಕ್ಕಾಗಿ ಪ್ರಕಟಿಸಿರುವ ಸುಗ್ರೀವಾಜ್ಞೆಯನ್ನು ರಾಜ್ಯಪಾಲರಿಗೇ ಕಳುಹಿಸಿದೆ.

ಸುಗ್ರೀವಾಜ್ಞೆಯನ್ನು ಅನುಮೋದನೆಗಾಗಿ ಸರ್ಕಾರ ಅದನ್ನು ರಾಜಭವನಕ್ಕೆ ಕಳುಹಿಸಿಕೊಟ್ಟಿದ್ದು, ಈ ಸಂಬಂಧ ಇತ್ತೀಚೆಗಷ್ಟೇ ಸಚಿವ ಸಂಪುಟ ನಿರ್ಧಾರ ಕೈಗೊಂಡಿತ್ತು.

ಇದನ್ನೂ ಓದಿ: ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ: ಕೇರಳ ರಾಜ್ಯಪಾಲರ ಇಬ್ಬರು ಕಾನೂನು ಸಲಹೆಗಾರರ ರಾಜೀನಾಮೆ
 
ರಾಜಭವನವೂ ಸರ್ಕಾರದ ಸುಗ್ರೀವಾಜ್ಞೆ ತಲುಪಿರುವುದನ್ನು ದೃಢಪಡಿಸಿದೆ. ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಆಗಾಗ್ಗೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ತಿಕ್ಕಾಟ ಇರುವುದರಿಂದ ಸರ್ಕಾರದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಶೀಘ್ರವೇ ಅಂಕಿತ ಹಾಕುವುದು ಅನುಮಾನವಾಗಿದೆ. 

ಪಿಣರಾಯಿ ವಿಜಯನ್ ಪಕ್ಷದ ನಡೆಯನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ತೀವ್ರವಾಗಿ ಖಂಡಿಸಿವೆ. ವಿಪಕ್ಷಗಳು ಸಚಿವ ಸಂಪುಟದ ನಿರ್ಧಾರವನ್ನು ಕೇರಳದ ವಿವಿಗಳನ್ನು ಕಮ್ಯುನಿಸ್ಟ್ ಕೇಂದ್ರಗಳನ್ನಾಗಿ ಮಾರ್ಪಡಿಸುವ ಯತ್ನ ಎಂದು ಆರೋಪಿಸಿವೆ. 

SCROLL FOR NEXT