ನವೆಂಬರ್ 11, 2022 ರಂದು ಹೈದರಾಬಾದ್‌ನ ಬೇಗಂಪೇಟೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. (ಫೋಟೋ | ವಿನಯ್ ಮಡಪು, ಇಪಿಎಸ್) 
ದೇಶ

ತೆಲಂಗಾಣದಲ್ಲಿ ಎಲ್ಲೆಲ್ಲೂ ಕಮಲ ಅರಳಲಿದೆ: ಪ್ರಧಾನಿ ನರೇಂದ್ರ ಮೋದಿ

ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್‌ಎಸ್ ಜನರಿಗೆ ದ್ರೋಹ ಮಾಡಿದೆ ಎಂದು ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಎಲ್ಲೆಲ್ಲೂ ಕಮಲ ಅರಳಲಿದೆ ಎಂದು ಪ್ರತಿಪಾದಿಸಿದ್ದಾರೆ.

ಹೈದರಾಬಾದ್: ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್‌ಎಸ್ ಜನರಿಗೆ ದ್ರೋಹ ಮಾಡಿದೆ ಎಂದು ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಎಲ್ಲೆಲ್ಲೂ ಕಮಲ ಅರಳಲಿದೆ ಎಂದು ಪ್ರತಿಪಾದಿಸಿದ್ದಾರೆ.

ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುನ್ನ ಪ್ರಧಾನಿ ಹೇಳಿಕೆ ನೀಡಿದ್ದು, ಕೆ.ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್‌ಎಸ್ಗೆ ಸವಾಲು ಹಾಕಲು ಬಿಜೆಪಿ ಮುಂದಾಗಿದೆ.

ತೆಲಂಗಾಣದಲ್ಲಿ ಅಪಾರ ನಂಬಿಕೆ ಇಟ್ಟಿರುವ ರಾಜಕೀಯ ಪಕ್ಷವು ಜನರಿಗೆ ದ್ರೋಹ ಬಗೆದಿದೆ. ಇದು ರಾಜ್ಯದಲ್ಲಿ ಕಮಲ ಅರಳಲಿದೆ ಎನ್ನುವುದನ್ನು ಸೂಚಿಸುತ್ತಿದೆ ಎಂದು ಮೋದಿ ಟಿಆರ್‌ಎಸ್ ಹೆಸರು ಹೇಳದೆಯೇ ಹೇಳಿದರು.

ರಾಜ್ಯದ ರಾಮಗುಂಡಂನಲ್ಲಿ ರಸಗೊಬ್ಬರ ಕಾರ್ಖಾನೆಯನ್ನು ಉದ್ಧಾಟಿಸಲು ಇಂದು ಮಧ್ಯಾಹ್ನ ಮೋದಿ ಇಲ್ಲಿದೆ ಬಂದಿಳಿದರು. ಜೊತೆಗೆ ಅನೇಕ ಅಭಿವೃದ್ಧಿ ಯೋಜನೆಗಳಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.

'ಇತ್ತೀಚಿನ ದಿನಗಳಲ್ಲಿ ಯಾವುದೇ ಉಪಚುನಾವಣೆ ನಡೆದರೂ ಸೂರ್ಯೋದಯ ದೂರವಿಲ್ಲ ಎಂಬ ಸಂದೇಶ ಸ್ಪಷ್ಟ ಮತ್ತು ಜೋರಾಗಿ ಕೇಳಿಸುತ್ತಿದೆ. ಕತ್ತಲೆ ಮಾಯವಾಗುತ್ತಿದೆ. ತೆಲಂಗಾಣದಲ್ಲಿ ಎಲ್ಲೆಲ್ಲಿಯೂ ಕಮಲ ಅರಳಲಿದೆ. ತೆಲಂಗಾಣದ ಜನತೆ ಯಾವ ಪಕ್ಷದ ಮೇಲೆ ಅಪಾರ ನಂಬಿಕೆ ಇಟ್ಟಿದ್ದರೋ ಅದೇ ಪಕ್ಷ ತೆಲಂಗಾಣಕ್ಕೆ ದ್ರೋಹ ಬಗೆದಿದೆ. ಆದರೆ ಸ್ನೇಹಿತರೇ,  ಕತ್ತಲು ಯಾವಾಗ ನಾಲ್ಕು ಕಡೆಯೂ ಆವರಿಸುತ್ತದೆಯೋ ಆಗ ಕಮಲ ಅರಳಲು ಆರಂಭಿಸುತ್ತದೆ' ಎಂದು ಮೋದಿ ಹೇಳಿದರು.

'ಈಗ ತೆಲಂಗಾಣ ಜನರು ಕೇವಲ ಒಂದು ಕುಟುಂಬದ ಬದಲು ರಾಜ್ಯದ ಎಲ್ಲಾ ಕುಟುಂಬಗಳಿಗೆ ಕೆಲಸ ಮಾಡುವ ಸರ್ಕಾರವನ್ನು ಬಯಸುತ್ತಿದ್ದಾರೆ ಎಂದು ಮೋದಿ ಪರೋಕ್ಷವಾಗಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರನ್ನು ಉಲ್ಲೇಖಿಸಿ ಹೇಳಿದರು. ಅಲ್ಲದೆ, ವಿವಿಧ ಉಪಚುನಾವಣೆಗಳಲ್ಲಿನ ಫಲಿತಾಂಶವನ್ನು ಉಲ್ಲೇಖಿಸಿದ ಅವರು, ತೆಲಂಗಾಣದಲ್ಲಿ ಕಮಲ ಅರಳುತ್ತಿರುವುದನ್ನು ನೋಡಬಹುದು ಎಂದು ಹೇಳಿದರು.

ಹಿಂದಿನ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಹೆಚ್ಎಂಸಿ) ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡುವುದರ ಜೊತೆಗೆ ಕಳೆದ ಎರಡು ವರ್ಷಗಳಲ್ಲಿ ಬಿಜೆಪಿ ಎರಡು ವಿಧಾನಸಭಾ ಉಪಚುನಾವಣೆಗಳನ್ನು ಗೆದ್ದಿದೆ.

'ಮಾಹಿತಿ ತಂತ್ರಜ್ಞಾನದ ಅಸ್ತಿತ್ವಕ್ಕೆ ಹೆಸರಾದ ನಗರದಲ್ಲಿ ಮೂಢನಂಬಿಕೆಗಳು ನಡೆಯುತ್ತಿವೆ. ಮೂಢನಂಬಿಕೆಗಳೇ ಆಡಳಿತವನ್ನು ನಿರ್ಧರಿಸುತ್ತವೆ. ರಾಜ್ಯ ಸರ್ಕಾರ ಮತ್ತು ಇಲ್ಲಿನ ನಾಯಕರು ತೆಲಂಗಾಣದ ಸಾಮರ್ಥ್ಯ ಮತ್ತು ಜನರ ಪ್ರತಿಭೆಗೆ ಅನ್ಯಾಯ ಮಾಡುತ್ತಲೇ ಇದ್ದಾರೆ ಎಂದು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT