ದೇಶ

ಟಿಎಂಸಿ ಸಚಿವ ಗಿರಿ ಹೇಳಿಕೆ ಖಂಡಿಸಿ, ರಾಷ್ಟ್ರಪತಿಗಳ ಕ್ಷಮೆಯಾಚಿಸಿದ ಮಮತಾ

Lingaraj Badiger

ಕೋಲ್ಕತಾ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತು ಪಶ್ಚಿಮ ಬಂಗಾಳ ಸಚಿವ ಅಖಿಲ್ ಗಿರಿ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು  ಸೋಮವಾರ ಖಂಡಿಸಿದ್ದು, ಟಿಎಂಸಿ ಪರವಾಗಿ ಕ್ಷಮೆಯಾಚಿಸಿದ್ದಾರೆ.

ರಾಷ್ಟ್ರಪತಿಗಳ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದು, ಭವಿಷ್ಯದಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ತಮ್ಮ ಪಕ್ಷ ಗಿರಿ ಅವರಿಗೆ ಎಚ್ಚರಿಕೆ ನೀಡಿದೆ ಎಂದು ತಿಳಿಸಿದ್ದಾರೆ.

"ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತ ಅಖಿಲ್ ಗಿರಿ ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಅಖಿಲ್ ಮಾಡಿರುವುದು ತಪ್ಪು. ಅಂತಹ ಹೇಳಿಕೆಯನ್ನು ನಾವು ಬೆಂಬಲಿಸುವುದಿಲ್ಲ. ಅವರು ನನ್ನ ಪಕ್ಷದ ಸಹೋದ್ಯೋಗಿಯಾಗಿರುವುದರಿಂದ ನಾನು ನನ್ನ ಪಕ್ಷದ ಪರವಾಗಿ ಕ್ಷಮೆಯಾಚಿಸುತ್ತೇನೆ. ಪಕ್ಷವು ಈಗಾಗಲೇ ಅಖಿಲ್ ಗಿರಿಗೆ ಎಚ್ಚರಿಕೆ ನೀಡಿದೆ" ಬ್ಯಾನರ್ಜಿ ಅವರು ರಾಜ್ಯ ಸಚಿವಾಲಯದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಹಿಂದೆ ಗಿರಿ ಅವರನ್ನು ಕಾಗೆ ಎಂದು ಕರೆಯುತ್ತಿದ್ದುದನ್ನು ನೆನಪಿಸಿಕೊಂಡ ಸಿಎಂ ಮಮತಾ, ನೇರವಾಗಿ ಯಾರ ಹೆಸರನ್ನು ಪ್ರಸ್ತಾಪಿಸಲಿಲ್ಲ.

SCROLL FOR NEXT