ದೇಶ

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸ್ಥಾನಕ್ಕೆ ಭಾರತದ ಸೌಮ್ಯ ಸ್ವಾಮಿನಾಥನ್ ರಾಜೀನಾಮೆ

Lingaraj Badiger

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ಯ ಮುಖ್ಯ ವಿಜ್ಞಾನಿ ಭಾರತದ ಸೌಮ್ಯ ಸ್ವಾಮಿನಾಥನ್ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ನಿವೃತ್ತಿಯಾಗಲು ಇನ್ನೂ ಎರಡು ವರ್ಷ ಇರುವಾಗಲೇ 63 ವರ್ಷದ ಸೌಮ್ಯ ಸ್ವಾಮಿನಾಥನ್ ಅವರು ವಿಶ್ವ ಆರೋಗ್ಯ ಸಂಸ್ಥೆಯಿಂದ ನಿರ್ಗಮಿಸುವುದಾಗಿ ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ.

ವರದಿಯೊಂದರ ಪ್ರಕಾರ, ವಿಶ್ವ ಆರೋಗ್ಯ ಸಂಸ್ಥೆಯಲ್ಲಿರುವ ಇತರ ವ್ಯಕ್ತಿಗಳು ಸಹ ಶೀಘ್ರದಲ್ಲೇ ತಮ್ಮ ಸ್ಥಾನಗಳನ್ನು ತ್ಯಜಿಸುವ ನಿರೀಕ್ಷೆಯಿದೆ. ಆದರೆ ಕಾರಣ ಇನ್ನೂ ತಿಳಿದು ಬಂದಿಲ್ಲ.

ಕೋವಿಡ್ ನಂತರದ ಭವಿಷ್ಯಕ್ಕಾಗಿ ತಯಾರಿ ನಡೆಸುತ್ತಿರುವಾಗ ಜಾಗತಿಕ ಆರೋಗ್ಯ ಸಂಸ್ಥೆಯ ನಿರೀಕ್ಷಿತ ಉನ್ನತ ಅಧಿಕಾರಿಗಳ ನಿರ್ಗಮನ ಸರಣಿಯಲ್ಲಿ ಇದು ಮೊದಲನೆಯದು ಎಂದು ವರದಿಯೊಂದು ತಿಳಿಸಿದೆ.

SCROLL FOR NEXT