ದೇಶ

ಕಮಲ್ ನಾಥ್ ಜನ್ಮದಿನಾಚರಣೆಗೆ ಕೇಕ್ ಕತ್ತರಿಸುವಾಗ ಹಿಂದೂ ಭಾವನೆಗಳಿಗೆ ಧಕ್ಕೆ: ಬಿಜೆಪಿ ಆರೋಪ

Srinivas Rao BV

ನವದೆಹಲಿ: ಮಧ್ಯಪ್ರದೇಶದ ಮಾಜಿ ಸಿಎಂ, ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ ಹೊಸದೊಂದು ವಿವಾದಕ್ಕೆ ಗುರಿಯಾಗಿದ್ದಾರೆ.

ತಮ್ಮ ಜನ್ಮದಿನದಂದು ದೇವಾಲಯ ಆಕಾರದ ಕೇಕ್ ಕತ್ತರಿಸಿರುವುದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಮಲ್ ನಾಥ್ ನಡೆಯಿಂದ ಕೋಟ್ಯಾಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದೆ. 

ನ.17 ರಂದು ಬಿಜೆಪಿ ಐಟಿ ಸೆಲ್ ನ ಮುಖ್ಯಸ್ಥ ಅಮಿತ್ ಮಾಲ್ವಿಯಾ ಟ್ವಿಟರ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದು, "ಮಧ್ಯಪ್ರದೇಶದ ಮಾಜಿ ಸಿಎಂ,  ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ ನಾಲ್ಕು ಚಕ್ರಗಳಿರುವ ದೇವಾಲಯದ ಆಕಾರದಲ್ಲಿರುವ, ಕೇಸರಿ ಧ್ವಜ, ಹನುಮಂತನ ವಿಗ್ರಹವನ್ನು ಹೊಂದಿದ್ದ ಕೇಕ್ ನ್ನು ಕತ್ತರಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕಮಲ್ ನಾಥ್ ತಾವು ಹನುಮಂತನ ಭಕ್ತರೆಂದು ಹೇಳಿಕೊಂಡಿದ್ದರು ಈಗ ಕೋಟ್ಯಂತರ ಮಂದಿ ಹಿಂದೂಗಳಿಗೆ ಕಮಲ್ ನಾಥ್ ನೋವುಂಟುಮಾಡಿದ್ದು ಅವರ ಆರಾಧ್ಯದೈವವನ್ನು ಅವಹೇಳನ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈ  ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಕಾಂಗ್ರೆಸ್ ನವರಿಗೆ ದೇವರ ಬಗ್ಗೆ ಭಕ್ತಿ ಇಲ್ಲ ಎಂದು ಹೇಳಿದ್ದು, ಅವರ ಪಕ್ಷ ರಾಮ ಮಂದಿರ ನಿರ್ಮಾಣಕ್ಕೂ ವಿರೋಧ ವ್ಯಕ್ತಪಡಿಸಿತ್ತು. ಈ ಅವಮಾನವನ್ನು ಯಾರೂ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

SCROLL FOR NEXT