ಜಾನುವಾರಿಗೆ ಡಿಕ್ಕಿ ಹೊಡೆದು ಹಾನಿಗೀಡಾದ ವಂದೇ ಭಾರತ್ ಎಕ್ಸ್ ಪ್ರೆಸ್ 
ದೇಶ

ಹಳಿಗಳ ಮೇಲೆ ರೈಲು ಡಿಕ್ಕಿ ಹೊಡೆದು ಜಾನುವಾರುಗಳ ಸಾವು: ಆವರಣ ಗೋಡೆ ನಿರ್ಮಿಸಲು ರೈಲ್ವೆ ಸಚಿವಾಲಯ ಒಪ್ಪಿಗೆ

ವಂದೇ ಭಾರತ್ ರೈಲಿನಡಿಗೆ ಸಿಲುಕಿ ದನಕರುಗಳು ಇತ್ತೀಚೆಗೆ ಸಾವಿಗೀಡಾಗಿರುವ ಘಟನೆಗಳು ನಡೆದಿತ್ತು. ಭವಿಷ್ಯದಲ್ಲಿ ಇಂತಹ ಅಪಘಾತಗಳನ್ನು ತಡೆಯಲು ರೈಲು ಮಾರ್ಗದ ಪಕ್ಕದಲ್ಲಿ 1 ಸಾವಿರ ಕಿಲೋ ಮೀಟರ್ ವರೆಗೆ ಮುಂದಿನ ಆರು ತಿಂಗಳುಗಳಲ್ಲಿ ಆವರಣ ಗೋಡೆ ನಿರ್ಮಿಸಲು ರೈಲ್ವೆ ಇಲಾಖೆ ಮುಂದಾಗಿದೆ. 

ನವದೆಹಲಿ: ವಂದೇ ಭಾರತ್ ರೈಲಿನಡಿಗೆ ಸಿಲುಕಿ ದನಕರುಗಳು ಇತ್ತೀಚೆಗೆ ಸಾವಿಗೀಡಾಗಿರುವ ಘಟನೆಗಳು ನಡೆದಿತ್ತು. ಭವಿಷ್ಯದಲ್ಲಿ ಇಂತಹ ಅಪಘಾತಗಳನ್ನು ತಡೆಯಲು ರೈಲು ಮಾರ್ಗದ ಪಕ್ಕದಲ್ಲಿ 1 ಸಾವಿರ ಕಿಲೋ ಮೀಟರ್ ವರೆಗೆ ಮುಂದಿನ ಆರು ತಿಂಗಳುಗಳಲ್ಲಿ ಆವರಣ ಗೋಡೆ ನಿರ್ಮಿಸಲು ರೈಲ್ವೆ ಇಲಾಖೆ ಮುಂದಾಗಿದೆ. 

ರೈಲು ಆವರಣ ತಡೆಗೋಡೆ ನಿರ್ಮಿಸುವ ವಿಷಯದಲ್ಲಿ ನಾವು ಗಂಭೀರವಾಗಿ ಕೆಲಸ ಮಾಡುತ್ತಿದ್ದೇವೆ. ಇದಕ್ಕಾಗಿ ಎರಡು ವಿಭಿನ್ನ ವಿನ್ಯಾಸಗಳನ್ನು ಪರಿಶೀಲಿಸಲಾಗುತ್ತಿದೆ. ಇದರಲ್ಲೊಂದು ವಿನ್ಯಾಸವನ್ನು ಅನುಮೋದಿಸಲಾಗಿದ್ದು, ಈ ವಿನ್ಯಾಸದ ಗೋಡೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯಲು ಮುಂದಿನ ಐದರಿಂದ ಆರು ತಿಂಗಳುಗಳಲ್ಲಿ ವಿವಿಧ ವಿಭಾಗಗಳಲ್ಲಿ 1,000 ಕಿಮೀ ಗೋಡೆ ನಿರ್ಮಿಸಲು ಯೋಜಿಸಿದ್ದೇವೆ ಎಂದು ಕೇಂದ್ರ ಸಚಿವ ವೈಷ್ಣವ್ ಹೇಳಿದ್ದಾರೆ. 

ರೈಲ್ವೆ ಸಚಿವಾಲಯ ಅಂಕಿಅಂಶ ಪ್ರಕಾರ, ಈ ವರ್ಷ ಜಾನುವಾರು ಅಥವಾ ಮನುಷ್ಯರು ಹಳಿಗಳ ಮೇಲೆ ಬಂದು ಇಲಾಖೆಗೆ ಉಂಟಾದ ನಷ್ಟಗಳು ಹೆಚ್ಚಾಗಿವೆ. 2022ರ ಹಣಕಾಸು ವರ್ಷದಲ್ಲಿ 2,115 ರೈಲು ನಷ್ಟ ಪ್ರಕರಣಗಳು ವರದಿಯಾಗಿದ್ದರೆ, ಕಳೆದ ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ 2,650 ಪ್ರಕರಣ ವರದಿಯಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 26 ಸಾವಿರ ಜಾನುವಾರುಗಳು ಅಡ್ಡ ಬಂದ ಪ್ರಕರಣಗಳು ವರದಿಯಾಗಿವೆ ಎಂದು ರೈಲ್ವೆ ಸಚಿವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

SCROLL FOR NEXT