ದೇಶ

ಅಕ್ರಮ ಗಣಿಗಾರಿಕೆ ಪ್ರಕರಣ: ನನ್ನ ವಿರುದ್ಧದ ಆರೋಪ ನಿರಾಧಾರ ಎಂದ ಜಾರ್ಖಾಂಡ್ ಸಿಎಂ ಹೇಮಂತ್ ಸೋರೆನ್

Manjula VN

ರಾಂಚಿ: ನನ್ನ ವಿರುದ್ಧ ಕೇಳಿಬಂದಿರುವ ಆರೋಪ ನಿರಾಧಾರ ಎಂದು ಜಾರ್ಖಾಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರು ಗುರುವಾರ ಹೇಳಿದ್ದಾರೆ.

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಗುರುವಾರ ರಾಂಚಿಯಲ್ಲಿರುವ ಜಾರಿ ನಿರ್ದೇಶನಾಲಯ (ಇಡಿ) ಕಚೇರಿಗೆ ತೆರಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಗಣಿಗಾರಿಕೆ ಗುತ್ತಿಗೆ ಪ್ರಕರಣದಲ್ಲಿ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳು ಆಧಾರರಹಿತವಾಗಿವೆ ಎಂದು ಹೇಳಿದರು.

ಪ್ರತಿಪಕ್ಷಗಳ ಷಡ್ಯಂತ್ರಕ್ಕೆ ನಾನು ಬಲಿಯಾಗಿದ್ದೇನೆ. ಪ್ರಕರಣ ಸಂಬಂಧ ವಿವರವಾದ ತನಿಖೆಯ ಬಳಿಕ ಅಧಿಕಾರಿಗಳು ನನ್ನ ಮೇಲೆ ಆರೋಪ ಹೊರಿಸಬೇಕು. ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಇದುವರೆಗೆ 1,000 ಕೋಟಿ ರೂಪಾಯಿಗಳ ಅಕ್ರಮ ಆದಾಯವನ್ನು ಗುರುತಿಸಲಾಗಿದೆ ಎಂದು ಇಡಿ ಹೇಳಿದೆ. ಗಣಿ ಮತ್ತು ಖನಿಜಗಳಿಂದ ವಾರ್ಷಿಕ ಆದಾಯವನ್ನು ಲೆಕ್ಕ ಹಾಕಿದರೆ ಅದು 1000 ಕೋಟಿ ರೂಪಾಯಿಗಳನ್ನು ಮುಟ್ಟುವುದಿಲ್ಲ ಎಂದು ತಿಳಿಸಿದ್ದಾರೆ.

ಇದೀಗ ನಾನು ಇಡಿ ಕಚೇರಿಗೆ ಹೋಗುತ್ತಿದ್ದೇನೆ. ಇಷ್ಟೊಂದು ದೊಡ್ಡ ಮಟ್ಟದ ಅಕ್ರಮ ಹಣವನ್ನು ಹೇಗೆ ಗುರುತಿಸಲಾಯಿತು ಎಂಬುದನ್ನು ತಿಳಿದುಕೊಳ್ಳುತ್ತೇನೆಂದು ಹೇಳಿದರು.

ಹೇಮಂತ್ ಸೋರೆನ್ ಅವರು ಇಡಿ ಕಚೇರಿಗೆ ಹಾಜರಾಗಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಇಡಿ ಕಚೇರಿಯ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ.

SCROLL FOR NEXT