ದೇಶ

ಭಾರತ್ ಜೋಡೋ ಯಾತ್ರೆ ಮೂಲಕ ಕಾಂಗ್ರೆಸ್ ದೇಶವನ್ನು ಒಡೆಯಬಹುದು, ಒಗ್ಗೂಡಿಸಲು ಸಾಧ್ಯವಿಲ್ಲ: ಜೆಪಿ ನಡ್ಡಾ

Ramyashree GN

ನವಸಾರಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಜೆಪಿ ನಡ್ಡಾ ಅವರು ಶುಕ್ರವಾರ ಭಾರತ್ ಜೋಡೋ ಯಾತ್ರೆಯ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆದಿದ್ದು, ವಿರೋಧ ಪಕ್ಷವು ದೇಶವನ್ನು ಒಡೆಯಬಹುದು ಹೊರತು ಅದು ಒಗ್ಗೂಡಿಸಲು ಸಾಧ್ಯವಿಲ್ಲ ಎಂದು ಆರೋಪಿಸಿದ್ದಾರೆ.

ದಕ್ಷಿಣ ಗುಜರಾತ್‌ನ ನವಸಾರಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ರಾಕೇಶ್ ದೇಸಾಯಿ ಪರ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದರು.

'ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಮಾಡುತ್ತಿದೆಯೋ ಅಥವಾ ಭಾರತ್ ತೋಡೋ ಯಾತ್ರೆ ಕೈಗೊಂಡಿದೆಯೇ ಎಂಬುದು ತಿಳಿಯುತ್ತಿಲ್ಲ. ಪಕ್ಷದ ನಾಯಕರು ಭಾರತವನ್ನು ಒಗ್ಗೂಡಿಸಿ ಎನ್ನುತ್ತಿದ್ದಾರೆ. ಆದರೆ, ನಿಜ ಜೀವನದಲ್ಲಿ ಅವರು ಏನು ಮಾಡುತ್ತಿದ್ದಾರೆ? ಅವರ ನಾಯಕ ರಾಹುಲ್ ಗಾಂಧಿ ದೆಹಲಿಯ ಜೆಎನ್‌ಯುಗೆ ಹೋದರು ಮತ್ತು ಸಂಸತ್ತಿನ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಅಫ್ಜಲ್ ಗುರು ಪರವಾಗಿ ಘೋಷಣೆ ಕೂಗುವವರನ್ನು ಬೆಂಬಲಿಸಿದರು' ಎಂದು ನಡ್ಡಾ ಹೇಳಿದರು.

'ರಾಹುಲ್ ಗಾಂಧಿ ಅವರು ಜೆಎನ್‌ಯುನಲ್ಲಿದ್ದಾಗಲೂ ಕೆಲವರು ‘ಭಾರತ್ ತೇರೆ ತುಕ್ಡೆ ಹೊಂಗೆ, ಇನ್ಶಾ ಅಲ್ಲಾ ಇನ್ಶಾ ಅಲ್ಲಾ’ ಎಂಬ ಘೋಷಣೆಯನ್ನೂ ಕೂಗಿದ್ದರು. ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಬಗ್ಗೆ ನಿನ್ನೆಯ ನಿಮ್ಮ (ರಾಹುಲ್ ಗಾಂಧಿ) ಹೇಳಿಕೆ ಖಂಡನೀಯ. ಅವರು (ಕಾಂಗ್ರೆಸ್) ದೇಶವನ್ನು ಒಡೆಯಬಹುದು ಹೊರತು, ಒಗ್ಗೂಡಿಸಲು ಸಾಧ್ಯವಿಲ್ಲ ಎಂಬುದನ್ನು ಇದು ತೋರಿಸುತ್ತದೆ' ಎಂದು ಅವರು ಆರೋಪಿಸಿದ್ದಾರೆ.

'ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು (ಎಎಪಿ) ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 350 ಸ್ಥಾನಗಳ ಪೈಕಿ 349 ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಿದೆ. ಅವರು ಇನ್ನಷ್ಟೇ ನಡೆಯಬೇಕಿರುವ ಹಿಮಾಚಲ ಪ್ರದೇಶದ ಚುನಾವಣೆಯಲ್ಲಿಯೂ ಸ್ಪರ್ಧಿಸಿದ ಎಲ್ಲಾ 67 ಸ್ಥಾನಗಳಲ್ಲಿ ತಮ್ಮ ಠೇವಣಿ ಕಳೆದುಕೊಳ್ಳಲಿದ್ದಾರೆ' ಎಂದರು.

ಬಿಜೆಪಿಯು "ಮಿಷನ್" ಮೋಡ್‌ನಲ್ಲಿ (ಅಭಿವೃದ್ಧಿಗಾಗಿ) ಕೆಲಸ ಮಾಡಿದೆ ಎಂದು ಪ್ರತಿಪಾದಿಸಿದ ನಡ್ಡಾ, ಆದರೆ, ಇತರ ಪಕ್ಷಗಳು "ಕಮಿಷನ್" (ಕಿಕ್‌ಬ್ಯಾಕ್‌ಗಳು) ಗಾಗಿ ಕೆಲಸ ಮಾಡಿವೆ ಎಂದು ದೂರಿದರು.

ಕೊರೊನಾವೈರಸ್ ಸಾಂಕ್ರಾಮಿಕ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ ನಡ್ಡಾ, ಭಾರತವು ಕೇವಲ ಒಂಬತ್ತು ತಿಂಗಳಲ್ಲಿ ಎರಡು ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಯಿತು ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ಇಡೀ ಜನಸಂಖ್ಯೆಯನ್ನು ಸುರಕ್ಷಿತಗೊಳಿಸಿದೆ. ನಾವು 38 ದೇಶಗಳಿಗೆ ಉಚಿತವಾಗಿ ಸೇರಿದಂತೆ ಸುಮಾರು 00 ದೇಶಗಳಿಗೆ ಲಸಿಕೆಗಳನ್ನು ಕಳುಹಿಸಿದ್ದೇವೆ. ಭಾರತ ಈಗ ಕೂಡುವ ದೇಶವಾಗಿದೆ ಮತ್ತು ತೆಗೆದುಕೊಳ್ಳುವುದಲ್ಲ' ಎಂದು ಅವರು ಹೇಳಿದರು.

ಗುಜರಾತ್‌ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.

SCROLL FOR NEXT