ದೇಶ

ವಿಮಾನ ನಿಲ್ದಾಣದ ಉದ್ಘಾಟನೆಯಿಂದ ರಾಜಕೀಯ ಟೀಕಾಕಾರಿಗೆ ಕಪಾಳಮೋಕ್ಷವಾಗಿದೆ: ಪ್ರಧಾನಿ ಮೋದಿ

Manjula VN

ಇಟಾನಗರ: ವಿಮಾನ ನಿಲ್ದಾಣದ ಉದ್ಘಾಟನೆಯಿಂದ ರಾಜಕೀಯ ಟೀಕಾಕಾರರಿಗೆ ಕಪಾಳಮೋಕ್ಷವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದರು.

ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಅರುಣಾಚಲದ ಮೊದಲ “ಗ್ರೀನ್‌ಫೀಲ್ಡ್” ವಿಮಾನ ನಿಲ್ದಾಣದ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿಯವರು, ಟೀಕಾಕಾರರಿಗೆ ಚಾಟಿ ಬೀಸಿದರು.

ಸರ್ಕಾರವು ಈಶಾನ್ಯ ವಲಯಕ್ಕೆ ಸೇವೆ ಸಲ್ಲಿಸಲು ಸಮರ್ಪಿತವಾಗಿದೆ, ಪ್ರತ್ಯೇಕ ಸಚಿವಾಲಯವು ಎನ್ಇಆರ್ನ ನ್ಯಾಯವ್ಯಾಪ್ತಿಯ ಅವಶ್ಯಕತೆಗಳನ್ನು ನಿರ್ವಹಿಸುತ್ತದೆ. "ಸಂಸ್ಕೃತಿಯಿಂದ ಕೃಷಿಗೆ, ವಾಣಿಜ್ಯದಿಂದ ಸಂಪರ್ಕಕ್ಕೆ, ಈಶಾನ್ಯದ ಅಭಿವೃದ್ಧಿಯು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದರು.

ನಾವು ಶಂಕುಸ್ಥಾಪನೆ ಮಾಡಿದ ಯೋಜನೆಗಳನ್ನು ಉದ್ಘಾಟಿಸುವ ಕಾರ್ಯ ಸಂಸ್ಕೃತಿಯನ್ನು ನಾವು ತಂದಿದ್ದೇವೆ ಎಂಬುದು ನಿಮಗೆ ತಿಳಿದಿದೆ, "ಅಟ್ಕಾನಾ, ಲಟ್ಕಾನಾ, ಭಟ್ಕಾನ" ಯುಗವು ಕಳೆದುಹೋಗಿದೆ. ರಾಜ್ಯದಲ್ಲಿ ಸರ್ಕಾರದ ನೀತಿಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸಿದ್ದರ ಫಲವೇ ಇಷ್ಟೊಂದು ಜನಸ್ತೋಮ ಸೇರಿರುವುದು.

"ಇಷ್ಟು ಮುಂಜಾನೆಯೇ ಇಂತಹ ಹಬ್ಬದ ಭಾವನೆಯೊಂದಿಗೆ ಇಷ್ಟೊಂದು ಬೃಹತ್ ಜನಸ್ತೋಮ ಸೇರಿದ್ದು, ಇದು ಸರ್ಕಾರದ ಎಲ್ಲಾ ನೀತಿಗಳನ್ನು ಸಮರ್ಥವಾಗಿ ಮತ್ತು ಸಮಯಕ್ಕೆ ಸರಿಯಾಗಿ ಅನುಷ್ಠಾನಗೊಳಿಸಿದ ಪರಿಣಾಮವಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಯೋಜನೆಯನ್ನು ಸಕಾಲದಲ್ಲಿ ಪೂರ್ಣಗೊಳಿಸಿದ್ದಕ್ಕಾಗಿ ಅರುಣಾಚಲ ಪ್ರದೇಶದ ಸರ್ಕಾರವನ್ನು ಶ್ಲಾಘಿಸಿದ ಪ್ರಧಾನಿ, ಅಡಚಣೆ, ಬಾಕಿ ಮತ್ತು ತಿರುವು ತಮ್ಮ ಸರ್ಕಾರದ ಅಂಶಗಳಲ್ಲ ಎಂದರು.

"ಕೈಗೊಂಡಿರುವ ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದನ್ನು ನಾವು ಖಚಿತಪಡಿಸಿದ್ದೇವೆ. ಅಡಚಣೆ, ಬಾಕಿ ಮತ್ತು ತಿರುವು ಸರ್ಕಾರದ ಅಂಶಗಳಲ್ಲ. 2019ರಲ್ಲಿ ನಾನು ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದಾಗ ರಾಜಕೀಯ ಟೀಕಾಕಾರುರು ಇದು ಕೇವಲ ಚುನಾವಣಾ ಗಿಮಿಕ್ ಎಂದಿದ್ದರು.

2019ರಲ್ಲಿ ನಾನು ಶಂಕುಸ್ಥಾಪನೆ ಮಾಡಿದಾಗ ಚುನಾವಣೆ ನಡೆಯಬೇಕಿತ್ತು, ವಿಮಾನ ನಿಲ್ದಾಣ ನಿರ್ಮಾಣ ಆಗುತ್ತಿಲ್ಲ, ಮೋದಿ ಅವರು ಚುನಾವಣೆ ಕಾರಣಕ್ಕೆ ಅಡಿಗಲ್ಲು ಹಾಕುತ್ತಿದ್ದಾರೆ ಎಂದು ರಾಜಕೀಯ ಟೀಕಾಕಾರು ಹೇಳಿದ್ದರು. ಇಂದು ವಿಮಾನ ನಿಲ್ದಾಣದ ಉದ್ಘಾಟನೆಯಿಂದ ಆ ಟೀಕಾಕಾರಿಗೆ ಕಪಾಳಮೋಕ್ಷವಾಗಿದೆ.

ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣದ ಉದ್ಘಾಟನೆಯೊಂದಿಗೆ, ಈಶಾನ್ಯವು ಹೊಸ ಭರವಸೆಗಳು ಮತ್ತು ಅವಕಾಶಗಳ ಉದಯಕ್ಕೆ ಸಾಕ್ಷಿಯಾಗಿದೆ. ಇಂದಿನ ಈ ಸಮಾರಂಭವು ಅಭಿವೃದ್ಧಿಯ ಕಡೆಗೆ ನವ ಭಾರತದ ದೃಷ್ಟಿಕೋನಕ್ಕೆ ಉತ್ತಮ ಉದಾಹರಣೆಯಾಗಿದೆ.  ದೋನಿ ಪೋಲೋ ವಿಮಾನ ನಿಲ್ದಾಣವು ಅರುಣಾಚಲ ಪ್ರದೇಶದ ನಾಲ್ಕನೇ ಕಾರ್ಯಾಚರಣೆಯ ವಿಮಾನ ನಿಲ್ದಾಣವಾಗಿದೆ. 8 ವರ್ಷಗಳಲ್ಲಿ, ಸರ್ಕಾರವು ಏಳು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಿದೆ, ಇದು ಸಂಪರ್ಕವನ್ನು ಸುಧಾರಿಸಿದೆ ಎಂದು ತಿಳಿಸಿದರು.

ಬಳಿಕ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಉದ್ದೇಶವನ್ನು ಪುನರುಚ್ಚರಿಸಿದ ಪ್ರಧಾನಿ ಮೋದಿ ಅವರು, ಸಬ್ಕಾ ಸಾಥ್ ಸಬ್ಕಾ ವಿಕಾಸ್ ಉದ್ದೇಶದಿಂದ ಸಮಾಜದ ಎಲ್ಲಾ ವರ್ಗಗಳ ಸೇವೆಗೆ ಸರ್ಕಾರವು ಸಮರ್ಪಿತವಾಗಿದೆ ಎಂದರು.

"ಇಂದು ಈಶಾನ್ಯ ಪ್ರದೇಶದ ಅತ್ಯಂತ ದೂರದ ಮೂಲೆಗಳು ಕೂಡ ವಿದ್ಯುದ್ದೀಕರಿಸಲ್ಪಟ್ಟಿವೆ. ಆಯುಷ್ಮಾನ್ ಭಾರತ್ PM-JAY ಮೂಲಕ 5 ಲಕ್ಷ ರೂ.ವರೆಗಿನ ಚಿಕಿತ್ಸಾ ವೆಚ್ಚವನ್ನು ಎನ್ಇ ಪ್ರದೇಶಕ್ಕೆ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಹೇಳಿದರು.

ಇದೇ ವೇಳೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ರೈತರು ಪಡೆದ ಪ್ರಯೋಜನಗಳನ್ನು ಒತ್ತಿ ಹೇಳಿದ ಮೋದಿಯವರು, ಇಂದು 85 ಪ್ರತಿಶತ ಗ್ರಾಮೀಣ ಪ್ರದೇಶಗಳು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ಒಳಪಟ್ಟಿವೆ. ಈಶಾನ್ಯ ಭಾಗದ ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ಲಾಭ ಪಡೆಯುತ್ತಿದ್ದಾರೆ. "ಬಿದಿರು ಈಶಾನ್ಯದ ಜೀವನೋಪಾಯದ ಪ್ರಮುಖ ಭಾಗವಾಗಿದೆ, ಇದನ್ನು ವಸಾಹತುಶಾಹಿ ಆಳ್ವಿಕೆಯಲ್ಲಿ ನಿರ್ಬಂಧಿಸಲಾಗಿದೆ. ನಮ್ಮ ಬಿದಿರು ರೈತರಿಗೆ ಕೃಷಿ ಮಾಡಲು, ಮೌಲ್ಯವರ್ಧನೆ ಮತ್ತು ಅವರ ಉತ್ಪನ್ನಗಳನ್ನು ಮಾರಾಟ ಮಾಡಲು ಅಧಿಕಾರ ನೀಡಲು ನಾವು ಈ ನಿರ್ಬಂಧಿತ ಕಾನೂನನ್ನು ಬದಲಾಯಿಸಿದ್ದೇವೆ" ಎಂದರು.

ಬಳಿಕ ಈಶಾನ್ಯ ಪ್ರದೇಶದ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯವನ್ನು ರಚಿಸಲು ಪ್ರಯತ್ನಿಸಿದೆ ಎಂದು ಹೇಳಿದ ಪ್ರಧಾನಿ ಮೋದಿ. ಅಟಲ್ ಬಿಹಾರಿ ವಾಜಪೇಯಿ ಸರ್ಕಾರವನ್ನು ಶ್ಲಾಘಿಸಿದರು.

"ಸ್ವಾತಂತ್ರ್ಯದ ನಂತರ, ಈಶಾನ್ಯವು ವಿಭಿನ್ನ ಯುಗಕ್ಕೆ ಸಾಕ್ಷಿಯಾಯಿತು, ದಶಕಗಳಿಂದ, ಈ ಪ್ರದೇಶವು ನಿರ್ಲಕ್ಷ್ಯಕ್ಕೊಳಗಾಗಿತ್ತು... ಅಟಲ್ ಜಿ ಅವರ ಸರ್ಕಾರ ಬಂದಾಗ, ಇದನ್ನು ಮೊದಲ ಬಾರಿಗೆ ಬದಲಾಯಿಸುವ ಪ್ರಯತ್ನವಾಯಿತು. ಈಶಾನ್ಯ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ರಚಿಸಿದ ಮೊದಲ ಸರ್ಕಾರ ನಮ್ಮದಾಗಿದೆ ಎಂದರು ಹೇಳಿದರು.

ಬಳಿಕ ಪ್ರಧಾನಿ ಮೋದಿಯವರು ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರೊಂದಿಗೆ ಉಡಾನ್ (ಉದೇ ದೇಶ್ ಕಾ ಆಮ್ ನಾಗ್ರಿಕ್) ಕರಪತ್ರವೊಂದನ್ನು ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಕಿರಣ್ ರಿಜಿಜು ಅವರು, ವಿಭಿನ್ನ ವಿಮಾನ ನಿಲ್ದಾಣದ ಕನಸನ್ನು ಪ್ರಧಾನಿ ಮೋದಿ ಅವರು ಈಡೇರಿಸಿದ್ದಾರೆ. "ನಮ್ಮ ರಾಜ್ಯದ ರಾಜಧಾನಿಯಲ್ಲಿ ವಿಮಾನ ನಿಲ್ದಾಣವನ್ನು ಹೊಂದುವುದು ನಮ್ಮ ಕನಸಾಗಿತ್ತು, ಇಂದು ಪ್ರಧಾನಿ ಮೋದಿಯವರ ಪ್ರಯತ್ನದಿಂದ ಆ ಕನಸು ನನಸಾಗಿದೆ. ಅವರು ಈ ವಿಮಾನ ನಿಲ್ದಾಣವನ್ನು ನಿರ್ಮಿಸಲು ವಿಶೇಷ ನಿರ್ದೇಶನಗಳನ್ನು ನೀಡಿದ್ದಾರೆಂದು ಹೇಳಿದರು.

SCROLL FOR NEXT