ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಗೋವಾದಲ್ಲಿ ಐಶಾರಾಮಿ ಬಂಗಲೆ: ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಗೆ ಸರ್ಕಾರದಿಂದ ನೋಟಿಸ್ ಜಾರಿ

ಗೋವಾದ ಮೊರ್ಜಿಮ್ ನಲ್ಲಿರುವ ಐಶಾರಾಮಿ ವಿಲ್ಲಾವನ್ನು ರಾಜ್ಯದ ಸಂಬಂಧಿತ ಅಧಿಕಾರಿಗಳಲ್ಲಿ ನೋಂದಾಯಿಸದೆ ಆನ್ ಲೈನ್ ನಲ್ಲಿ ಹೋಮ್ ಸ್ಟೇ ಎಂದು ಹಾಕಿರುವುದಕ್ಕೆ ಗೋವಾ ಪ್ರವಾಸೋದ್ಯಮ ಇಲಾಖೆ ಕ್ರಿಕೆಟಿಗ ಯುವರಾಜ್ ಸಿಂಗ್ ಗೆ ನೋಟಿಸ್ ಜಾರಿ ಮಾಡಿದೆ .

ಯುವರಾಜ್ ಸಿಂಗ್ ಐಶಾರಾಮಿ ಬಂಗಲೆ
Nagaraja AB
Updated On : 22 Nov 2022, 8:24 pm

ಪಣಜಿ: ಗೋವಾದ ಮೊರ್ಜಿಮ್ ನಲ್ಲಿರುವ ಐಶಾರಾಮಿ ವಿಲ್ಲಾವನ್ನು  ರಾಜ್ಯದ ಸಂಬಂಧಿತ ಅಧಿಕಾರಿಗಳಲ್ಲಿ ನೋಂದಾಯಿಸದೆ ಆನ್ ಲೈನ್ ನಲ್ಲಿ ಹೋಮ್ ಸ್ಟೇ ಎಂದು ಹಾಕಿರುವುದಕ್ಕೆ ಗೋವಾ ಪ್ರವಾಸೋದ್ಯಮ ಇಲಾಖೆ ಕ್ರಿಕೆಟಿಗ ಯುವರಾಜ್ ಸಿಂಗ್ ಗೆ ನೋಟಿಸ್ ಜಾರಿ ಮಾಡಿದೆ .

ಡಿಸೆಂಬರ್ 8 ರಂದು ಅವರನ್ನು ವಿಚಾರಣೆಗೆ ಕರೆದಿದೆ. ಗೋವಾ ಪ್ರವಾಸಿ ವ್ಯಾಪಾರದ ನೋಂದಣಿ ಕಾಯಿದೆ 1982 ರ ಅಡಿಯಲ್ಲಿ ಹೋಮ್ ಸ್ಟೇ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ. 

ಉತ್ತರ ಗೋವಾದ ಮೊರ್ಜಿಮ್ ನಲ್ಲಿರುವ ಐಶಾರಾಮಿ ವಿಲ್ಲಾ ಕಾಸಾ ವಿಳಾಸಕ್ಕೆ ಪ್ರವಾಸೋದ್ಯಮ ಇಲಾಕೆ ಉಪ ನಿರ್ದೇಶಕ ರಾಜೀಶ್ ಕಾಳೆ ಅವರು ನವೆಂಬರ್ 18 ರಂದು ನೋಟಿಸ್ ಕಳುಹಿಸಿದ್ದು,  ವೈಯಕ್ತಿಕ ವಿಚಾರಣೆಗಾಗಿ ಡಿಸೆಂಬರ್ 8 ರಂದು ಬೆಳಿಗ್ಗೆ 11 ಗಂಟೆಗೆ ತಮ್ಮ ಮುಂದೆ ಹಾಜರಾಗುವಂತೆ ಅದರ ಮಾಲೀಕರಾಗಿರುವ ಯುವರಾಜ್ ಸಿಂಗ್ ಅವರಿಗೆ ಸೂಚಿಸಿದ್ದಾರೆ.

Advertisement

Advertisement

 ನಿಮ್ಮ ವಿಲ್ಲಾದಲ್ಲಿ ಅಕ್ರಮವಾಗಿ ಹೋಮ್ ಸ್ಟೇಯಾಗಿ ಕಾರ್ಯನಿರ್ವಹಿಸುತ್ತಿದೆ. ಇದನ್ನು  Airbnb ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಗುರುತಿಸಲಾಗುತ್ತಿದೆ ಎಂದು ನೋಟಿಸ್ ನಲ್ಲಿ ಹೇಳಲಾಗಿದೆ. 

ಗೋವಾದ ಐಶಾರಾಮಿ ಬಂಗಲೆಯಲ್ಲಿ  @Airbnb ಮೂಲಕ ಬರುವ ಆರು ಜನರ ಗುಂಪಿಗೆ ವಿಶೇಷ ವಾಸ್ತವ್ಯವನ್ನು ಆಯೋಜಿಸುವುದಾಗಿ ಯುವರಾಜ್ ಸಿಂಗ್ ಹೇಳಿರುವ ಟ್ವೀಟ್ ನ್ನು ಕೂಡಾ ಇಲಾಖೆ ಉಲ್ಲೇಖಿಸಿದೆ. 
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments