ದೇಶ

ಭಯೋತ್ಪಾದನೆ ಟಾರ್ಗೆಟ್ ಮಾಡಿ ಅಂದ್ರೆ ಅವರು ನನ್ನನ್ನು ಟಾರ್ಗೆಟ್ ಮಾಡಿದ್ರು: ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

Srinivas Rao BV

ಅಹ್ಮದಾಬಾದ್: ಗುಜರಾತ್ ನ ವಿಧಾನಸಭಾ ಚುನಾವಣೆಗೆ ಪ್ರಚಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಕಾಂಗ್ರೆಸ್ ವಿರುದ್ಧ ಭಯೋತ್ಪಾದನೆಗೆ ಕವಚವಾಗಿರುವ ಆರೋಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಗುಜರಾತ್ ಭಯೋತ್ಪಾದನೆಯ ಬೇಗೆಯಲ್ಲಿ ಹಲವು ವರ್ಷಗಳ ಕಾಲ ಬೆಂದಿತ್ತು. ಗುಜರಾತ್ ನಲ್ಲಿದ್ದ ಬಿಜೆಪಿ ಸರ್ಕಾರ ಭಯೋತ್ಪಾದಕರ ಸ್ಲೀಪರ್ ಸೆಲ್ ಗಳನ್ನು ನಿಗ್ರಹಿಸುವ ಮೂಲಕ ಉಗ್ರವಾದವನ್ನು ಕೊನೆಗಾಣಿಸಲು ಯತ್ನಿಸುತ್ತಿದ್ದರೆ,  ಈ ಹಿಂದೆ ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರ ಭಯೋತ್ಪಾದಕರನ್ನು ಬಿಡುಗಡೆ ಮಾಡುವ ಕೆಲಸ ಮಾಡುತ್ತಿತ್ತು ಎಂದು ಮೋದಿ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಗುಜರಾತ್ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ, ಏಕರೂಪ ನಾಗರಿಕ ಸಂಹಿತೆ ಜಾರಿ ಸೇರಿ ಹಲವು ಭರವಸೆ
 
"ನಾವು ಕಾಂಗ್ರೆಸ್ ಸರ್ಕಾರಕ್ಕೆ ಭಯೋತ್ಪಾದನೆಯನ್ನು ಟಾರ್ಗೆಟ್ ಮಾಡಿ ಎಂದು ಕೇಳಿಕೊಂಡರೆ, ಅವರು ಮೋದಿಯನ್ನು ಟಾರ್ಗೆಟ್ ಮಾಡುತ್ತಿದ್ದರು ಪರಿಣಾಮ ಭಯೋತ್ಪಾದಕರಿಗೆ ಭಯವೇ ಇಲ್ಲದಂತಾಯಿತು, ಭಯೋತ್ಪಾದನೆ ಹೆಚ್ಚಾಗಿ ಈಗ ದೊಡ್ಡ ನಗರಗಳಿಗೂ ವ್ಯಾಪಿಸಿದೆ ಎಂದು ಮೋದಿ ಸಾರ್ವಜನಿಕ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ. 

ಇದೇ ವೇಳೆ ಬಾಟ್ಲಾ ಎನ್ ಕೌಂಟರ್ ಪ್ರಕರಣವನ್ನೂ ಉಲ್ಲೇಖಿಸಿರುವ ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕರು ಭಯೋತ್ಪಾದಕರಿಗಾಗಿ ಕಣ್ಣೀರಿಟ್ಟಿದ್ದರು ಎಂದು ಸೋನಿಯಾ ಗಾಂಧಿ ಹೆಸರು ಉಲ್ಲೇಖಿಸದೇ ತಿವಿದಿದ್ದಾರೆ. 

SCROLL FOR NEXT