ಸಾಂದರ್ಭಿಕ ಚಿತ್ರ 
ದೇಶ

ಸೈಬರ್ ಕ್ರೈಂ ಅಪರಾಧಿಗಳ ವಿರುದ್ಧ 'ಆಪರೇಷನ್ ಚಕ್ರ':  ಬೆಂಗಳೂರು ಸೇರಿದಂತೆ ದೇಶದ 105 ಕಡೆ ಏಕಕಾಲಕ್ಕೆ ಸಿಬಿಐ ದಾಳಿ

ಸೈಬರ್ ಅಪರಾಧಿಗಳ ವಿರುದ್ಧ ಅಪರೇಷನ್ ಚಕ್ರ  ಹೆಸರಿನಡಿ ಸಿಬಿಐ ಈ ಕಾರ್ಯಾಚರಣೆ ಕೈಗೊಂಡಿದೆ. ಇದರಂತೆ ಒಟ್ಟು 300 ಅಪರಾಧಿಗಳಿಗಾಗಿ 105 ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ.

ನವದೆಹಲಿ: ಸೈಬರ್ ಅಪರಾಧಿಗಳ ವಿರುದ್ಧ ಅಪರೇಷನ್ ಚಕ್ರ  ಹೆಸರಿನಡಿ ಸಿಬಿಐ ಈ ಕಾರ್ಯಾಚರಣೆ ಕೈಗೊಂಡಿದೆ. ಇದರಂತೆ ಒಟ್ಟು 300 ಅಪರಾಧಿಗಳಿಗಾಗಿ 105 ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ.

ಇದರಲ್ಲಿ ಸುಮಾರು 87 ಪ್ರದೇಶಗಳಲ್ಲಿ ಸಿಬಿಐ ಶೋಧ ನಡೆಸಿದ್ದರೆ, ಇನ್ನುಳಿದ ಪ್ರದೇಶಗಳಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನಾಲ್ಕು ಸ್ಥಳಗಳು, ದೆಹಲಿಯಲ್ಲಿ ಐದು, ಚಂಡೀಗಢದಲ್ಲಿ ಮೂರು ಮತ್ತು ಪಂಜಾಬ್, ಕರ್ನಾಟಕ ಮತ್ತು ಅಸ್ಸಾಂನಲ್ಲಿ ತಲಾ ಎರಡು ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ವರದಿಯಾಗಿದೆ.

ಇದನ್ನು ಹೊರತುಪಡಿಸಿ, ಪುಣೆ ಮತ್ತು ಅಹಮದಾಬಾದ್‌ನಲ್ಲಿ ಅಮೆರಿಕದ ಪ್ರಜೆಗಳನ್ನು ಗುರಿಯಾಗಿಸಿಕೊಂಡ ಎರಡು ಕಾಲ್ ಸೆಂಟರ್‌ಗಳ ಮೇಲೆ ದಾಳಿ ನಡೆದಿದೆ.

ಈ ಶೋಧದ ವೇಳೆ ಅಪಾರ ಪ್ರಮಾಣದ ಡಿಜಿಟಲ್ ಸಾಕ್ಷ್ಯಗಳು, 1.5 ಕೋಟಿ ರೂ. ನಗದು ಮತ್ತು 1.5 ಕೆಜಿ ಚಿನ್ನ ಪತ್ತೆಯಾಗಿದೆ ಎಂದು ವರದಿಯಾಗಿದೆ. ಸಿಬಿಐ ತಂಡವು 87 ಕಡೆಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಪಡೆಗಳು 18 ಕಡೆಗಳಲ್ಲಿ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ.

ಡಾರ್ಕ್ ವೆಬ್‌ನಲ್ಲಿನ ಹಣಕಾಸಿನ ವಹಿವಾಟುಗಳು ಮತ್ತು ಸೈಬರ್‌ಕ್ರೈಮ್ ಚಟುವಟಿಕೆಗಳ ವಿವರಗಳನ್ನು ಒಳಗೊಂಡಿರುವ ಬೃಹತ್ ಡಿಜಿಟಲ್ ಪುರಾವೆಗಳನ್ನು ಸಹ ಸಂಸ್ಥೆ ವಶಪಡಿಸಿಕೊಂಡಿರುವುದಾಗಿ ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT