ದೇಶ

ಜಮ್ಮು-ಕಾಶ್ಮೀರದಲ್ಲಿ ಅಗ್ನಿಪಥ್ ನೇಮಕಾತಿಗೆ ಭಾರಿ ಬೇಡಿಕೆ; ಸರತಿ ಸಾಲಿನಲ್ಲಿ ನಿಂತ ಸಾವಿರಾರು ಯುವಕರು 

Srinivas Rao BV

ಶ್ರೀನಗರ: ಭಾರತೀಯ ಸೇನೆಯ ಅಗ್ನಿಪಥ್ ನೇಮಕಾತಿ ಜಮ್ಮುವಿನ ಸಾಂಬ ಜಿಲ್ಲೆಯಲ್ಲಿ ಅ.7 ರಂದು ಪ್ರಾರಾಂಭವಾಗಿದ್ದು ಸಾವಿರಾರು ಅಭ್ಯರ್ಥಿಗಳು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. 

ಅಗ್ನಿವೀರ್ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಅಭ್ಯರ್ಥಿ ರೋಹಿತ್ ಸಿಂಗ್ ಮಾತನಾಡಿ, ಯಾರು ಚೆನ್ನಾಗಿ ಅಭ್ಯಾಸ ಮಾಡಿದ್ದಾರೋ ಅವರನ್ನು ಆಯ್ಕೆ ಮಾಡಲಾಗಿದೆ. ನಾನು ದೇಶ ಸೇವೆ ಮಾಡುವುದಕ್ಕೆ ಉತ್ಸುಕನಾಗಿದ್ದೆನೆ, ಆದ್ದರಿಂದ ಸೇನೆಗೆ ಸೇರುತ್ತಿದ್ದೇನೆ ಎಂದು ಹೇಳಿದ್ದಾರೆ. ಕೇಂದ್ರ ಸಚಿವ ಸಂಪುಟ ಜೂ.14 ರಂದು ಭಾರತೀಯ ಯುವಕರಿಗೆ ಸೇನೆಗೆ ಸೇರಲು ಅಗ್ನಿಪಥ್ ಹೆಸರಿನ ನೇಮಕಾತಿ ಯೋಜನೆಯನ್ನು ಜಾರಿಗೆ ತಂದಿತ್ತು, ಈ ಯೋಜನೆಯ ಮೂಲಕ ಆಯ್ಕೆಯಾದ ಯುವಕರನ್ನು ಅಗ್ನಿವೀರರು ಎನ್ನಲಾಗುತ್ತದೆ.

ಈ ಯೋಜನೆಯ ಪ್ರಕಾರ ಯುವಕರಿಗೆ ಸೇನೆಯಲ್ಲಿ ಸೇವೆ ಸಲ್ಲಿಸಲು 4 ವರ್ಷಗಳ ಕಾಲ ಅವಕಾಶ ಕಲ್ಪಿಸಲಾಗುತ್ತದೆ.

SCROLL FOR NEXT