ದೇಶ

ದೇಶ ಮತ್ತು ಕಾಂಗ್ರೆಸ್‌ನ ಒಳಿತಿಗಾಗಿ ತರೂರ್‌ ವಿರುದ್ಧ ಸ್ಪರ್ಧೆ: ಮಲ್ಲಿಕಾರ್ಜುನ ಖರ್ಗೆ

Lingaraj Badiger

ಶ್ರೀನಗರ: ದೇಶ ಮತ್ತು ಪಕ್ಷದ ಒಳಿತಿಗಾಗಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಶಶಿ ತರೂರ್ ಅವರ ವಿರುದ್ಧ ಸ್ಪರ್ಧಿಸಿರುವುದಾಗಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷೀಯ ಚುನಾವಣೆ ಪ್ರಚಾರದಲ್ಲಿರುವ ಖರ್ಗೆ ಅವರು ಇಂದು ಶ್ರೀನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಪಕ್ಷದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ನಂತರ ಈ ವಿಷಯ ತಿಳಿಸಿದರು.

ಇದು ಆಂತರಿಕ ಚುನಾವಣೆಯಾಗಿದ್ದು, ಮನೆಯಲ್ಲಿ ಇಬ್ಬರು ಸಹೋದರರು ಜಗಳವಾಡದೆ ತಮ್ಮ ದೃಷ್ಟಿಕೋನವನ್ನು ಮುಂದಿಟ್ಟುಕೊಂಡು ಪರಸ್ಪರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಚುನಾವಣಾ ಪ್ರಚಾರವು ನಿರ್ದಿಷ್ಟ ಅಭ್ಯರ್ಥಿಯು ಪಕ್ಷದ ಅಧ್ಯಕ್ಷರಾದರೆ ಏನು ಮಾಡುತ್ತಾರೆ ಎಂಬುದರ ಬಗ್ಗೆ ಅಲ್ಲ, ಆದರೆ ಅವರು ಒಟ್ಟಾಗಿ ಏನು ಮಾಡಬಹುದು ಎಂಬುದು ಮುಖ್ಯ ಎಂದು ಕಾಂಗ್ರೆಸ್ ಹಿರಿಯ ನಾಯಕ ತಿಳಿಸಿದರು.

ನಾನು ಇದನ್ನು ಮಾಡುತ್ತೇನೆ ಅಥವಾ ಅದನ್ನು ಮಾಡುತ್ತೇನೆ ಎಂದು ಹೇಳುವುದು ಬೇಡ ಮತ್ತು ಬೇರೆಯವರ ಬಗ್ಗೆ ಮಾತನಾಡುವುದು ಬೇಡ. ನೀವು(ಪಕ್ಷದ ಕಾರ್ಯಕರ್ತರು) ಮತ್ತು ನಾನು ಒಟ್ಟಾಗಿ ಪಕ್ಷವನ್ನು ಹೇಗೆ ಬಲಪಡಿಸುತ್ತೀರಿ, ದೇಶದ ಸಂವಿಧಾನ ಮತ್ತು ಅದರ ಪ್ರಜಾಪ್ರಭುತ್ವವನ್ನು ಹೇಗೆ ಉಳಿಸುತ್ತೀರಿ ಎಂಬುದು ಮುಖ್ಯ ಎಂದರು.

ಇಂದು ದೇಶದ ವಾತಾವರಣ ಹದಗೆಡುತ್ತಿದ್ದು, ಶಾಂತಿ ಮತ್ತು ಒಗ್ಗಟ್ಟಿನಿಂದ ಗಟ್ಟಿಯಾಗಿ ಹೋರಾಡಬೇಕು. ಅದಕ್ಕಾಗಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ ಎಂದು 80ರ ಹರೆಯದ ಖರ್ಗೆ ಅವರು ಹೇಳಿದ್ದಾರೆ.

SCROLL FOR NEXT