ದೇಶ

ಮಹಾ ಉಪ ಚುನಾವಣೆ: ಶಿಂಧೆ ಬಣಕ್ಕೆ ಎರಡು ಕತ್ತಿ ಮತ್ತು ಗುರಾಣಿ ಚಿಹ್ನೆ ನೀಡಿದ ಚುನಾವಣಾ ಆಯೋಗ

Lingaraj Badiger

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ಮುಂಬರುವ ಅಂಧೇರಿ (ಪೂರ್ವ) ಉಪಚುನಾವಣೆಯಲ್ಲಿ ಪಕ್ಷದ ಚಿಹ್ನೆಯಾಗಿ ‘ಎರಡು ಕತ್ತಿಗಳು ಮತ್ತು ಗುರಾಣಿ’ಯನ್ನು ಸ್ವೀಕರಿಸಿದೆ ಎಂದು ಚುನಾವಣಾ ಆಯೋಗ ಮಂಗಳವಾರ ತಿಳಿಸಿದೆ. ಆಯೋಗವು ಈಗಾಗಲೇ ಅವರ ಗುಂಪಿಗೆ “ಬಾಳಾಸಾಹೆಬಂಚಿ ಶಿವಸೇನಾ” ಎಂಬ ಹೆಸರನ್ನು ಸಹ ನೀಡಿದೆ.

ಶಿಂಧೆ ಬಣ ಸೂಚಿಸಿದ “ಧಲ್ ತಲ್ವಾರ್” ಉಚಿತ ಚಿಹ್ನೆಗಳ ಪಟ್ಟಿಯಲ್ಲಿಲ್ಲ ಎಂದು ಆಯೋಗವು ತನ್ನ ಪತ್ರದಲ್ಲಿ ತಿಳಿಸಿದೆ.

ಇದು 2004 ರಲ್ಲಿ ರಾಜ್ಯ ಪಕ್ಷವೆಂದು ಗುರುತಿಸಲಾಗಿದ್ದ ‘ಪೀಪಲ್ಸ್ ಡೆಮಾಕ್ರಟಿಕ್ ಮೂವ್ ಮೆಂಟ್ ನ ಹಿಂದೆ ಕಾಯ್ದಿರಿಸಿದ ಚಿಹ್ನೆ ‘ದೋ ತಲ್ವಾರಿನ್ ಔರ್ ಏಕ್ ಧಲ್ (ಎರಡು ಕತ್ತಿಗಳು ಮತ್ತು ಗುರಾಣಿ)’ ಅನ್ನು ಹೋಲುತ್ತದೆ… ನಿಮ್ಮ ವಿನಂತಿಯನ್ನು ದಿನಾಂಕ 11.10.2022 ರಂದು ಸ್ವೀಕರಿಸಿದ ನಂತರ ‘ದೋ ತಲ್ವಾರಿನ್ ಔರ್ ಏಕ್ ಧಾಲ್ (ಎರಡು ಕತ್ತಿಗಳು ಮತ್ತು ಗುರಾಣಿ)’ ಅನ್ನು ಉಚಿತ ಚಿಹ್ನೆ ಎಂದು ಘೋಷಿಸಲು ನಿರ್ಧರಿಸಿದೆ ಮತ್ತು ವಿವಾದದಲ್ಲಿ ಅಂತಿಮ ಆದೇಶವನ್ನು ಅಂಗೀಕರಿಸುವವರೆಗೆ ಅದನ್ನು ಹಂಚಿದೆ ಎಂದು ಚುನಾವಣಾ ಆಯೋಗ ಅಧಿಸೂಚನೆಯಲ್ಲಿ ತಿಳಿಸಿದೆ.

ಏಕನಾಥ್ ಶಿಂಧೆ ಮತ್ತು ಅವರ ಎದುರಾಳಿ ಉದ್ಧವ್ ಠಾಕ್ರೆ ಅವರಿಗೆ ಚುನಾವಣಾ ಆಯೋಗ ಹೊಸ ಹೆಸರು ಮತ್ತು ಚಿಹ್ನೆಗಳನ್ನು ನೀಡಿದೆ. ನಿಜವಾದ ಸೇನೆಗಾಗಿ ಹೋರಾಡುತ್ತಿರುವ ಠಾಕ್ರೆ ಮತ್ತು ಶಿಂಧೆ ಉಪಚುನಾವಣೆಯಲ್ಲಿ ಪಕ್ಷದ ಬಿಲ್ಲು- ಬಾಣ ಚಿಹ್ನೆ ಪಡೆಯಲು ಮುಂದಾಗಿದ್ದರು. ಆದರೆ ಇದನ್ನು ಆಯೋಗ ತಡೆಹಿಡಿದಿದೆ.

SCROLL FOR NEXT