ಹಸಿವು ಸೂಚ್ಯಂಕ 
ದೇಶ

ಜಾಗತಿಕ ಹಸಿವು ಸೂಚ್ಯಂಕ-2022: ಪಾಕ್, ಬಾಂಗ್ಲಾಗಿಂತಲೂ ಕೆಳಗಿನ ಶ್ರೇಣಿಯಲ್ಲಿದೆ ಭಾರತ!

2022 ನೇ ಸಾಲಿನ ಜಾಗತಿಕ ಹಸಿವು ಸೂಚ್ಯಂಕ ಪ್ರಕಟವಾಗಿದ್ದು, 121 ದೇಶಗಳ ಪೈಕಿ ಭಾರತ 107 ನೇ ಸ್ಥಾನದಲ್ಲಿದೆ. 

ನವದೆಹಲಿ: 2022 ನೇ ಸಾಲಿನ ಜಾಗತಿಕ ಹಸಿವು ಸೂಚ್ಯಂಕ ಪ್ರಕಟವಾಗಿದ್ದು, 121 ದೇಶಗಳ ಪೈಕಿ ಭಾರತ 107 ನೇ ಸ್ಥಾನದಲ್ಲಿದೆ. ಭಾರತದಲ್ಲಿ ಮಕ್ಕಳಲ್ಲಿನ ಅಪೌಷ್ಟಿಕತೆ ಪ್ರಮಾಣ ಶೇ.19.3 ರಷ್ಟಿದ್ದು, ಇದು ಜಗತ್ತಿನಲ್ಲೇ ಅತಿ ಹೆಚ್ಚಿನ ಅಪೌಷ್ಟಿಕತೆಯ ಪ್ರಮಾಣವಾಗಿದೆ.
 
ಗ್ಲೋಬಲ್ ಹಂಗರ್ ಇಂಡೆಕ್ಸ್ (ಜಿಹೆಚ್ಐ) ನಲ್ಲಿ ಭಾರತಕ್ಕೆ ಶೇ.29.1 ಸ್ಕೋರ್ ನೀಡಲಾಗಿದ್ದು, ಇದು ಅತ್ಯಂತ ಗಂಭೀರವಾದ ಮಟ್ಟ ಎಂದು ಗುರುತಿಸಲಾಗಿದೆ.

 
ಏಷ್ಯಾದಲ್ಲಿ ಭಾರತಕ್ಕಿಂತಲೂ ಹಿಂದಿರುವ ರಾಷ್ಟ್ರವೆಂದರೆ ಅದು ಅಫ್ಘಾನಿಸ್ತಾನವಾಗಿದ್ದು 109 ನೇ ಸ್ಥಾನದಲ್ಲಿದೆ. ನೆರೆ ರಾಷ್ಟ್ರಗಳಾದ ಪಾಕಿಸ್ತಾನ (99) ಬಾಂಗ್ಲಾದೇಶ (84) ನೇಪಾಳ (81) ಶ್ರೀಲಂಕಾ (64) ಭಾರತಕ್ಕಿಂತಲೂ ಉತ್ತಮ ಸ್ಥಾನದಲ್ಲಿವೆ. 2021 ರಲ್ಲಿ ಭಾರತ 116 ರಾಷ್ಟ್ರಗಳ ಪೈಕಿ 101 ನೇ ಸ್ಥಾನದಲ್ಲಿತ್ತು, ಇದಕ್ಕೂ ಹಿಂದಿನ ವರ್ಷ 94 ನೇ ಸ್ಥಾನದಲ್ಲಿತ್ತು. 

ಹಸಿವಿನ ಸೂಚ್ಯಂಕ ಹೆಚ್ಚಾಗಿರುವ ದಕ್ಷಿಣ ಏಷ್ಯಾ ಪ್ರದೇಶ ಮಕ್ಕಳಲ್ಲಿ ಜಗತ್ತಿನಲ್ಲೆ ಅತಿ ಹೆಚ್ಚು ಅಪೌಷ್ಟಿಕತೆಯನ್ನು ಹೊಂದಿರುವ ಪ್ರದೇಶವೂ ಆಗಿದೆ. ಭಾರತದಲ್ಲಿನ ಮಕ್ಕಳ ಅಪೌಷ್ಟಿಕತೆ ಪ್ರಮಾಣ ಶೇ.19.3 ರಷ್ಟಿದ್ದು, ಮಕ್ಕಳಲ್ಲಿ ಅತಿ ಹೆಚ್ಚು ಅಪೌಷ್ಟಿಕತೆಯನ್ನು ಹೊಂದಿರುವ ದೇಶವಾಗಿದೆ ಎಂದು ಸೂಚ್ಯಂಕದ ವರದಿ ಮೂಲಕ ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತ್ಯ ನಿಕೇತನ ಪಿಜಿ ಕುಸಿತದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ದೆಹಲಿ ಹೈಕೋರ್ಟ್ ಆದೇಶ; ದುರಂತಕ್ಕೆ ಮಾಲೀಕನಷ್ಟೇ ಅಲ್ಲ MCD, DU ಸಹ ಹೊಣೆ!

Varanasi: ತೆಲುಗು ರಾಜ್ಯಗಳಲ್ಲಿ ಬರೋಬ್ಬರಿ 320 ಕೋಟಿಗೆ ಥಿಯೇಟ್ರಿಕಲ್ ಹಕ್ಕುಗಳ ಮಾರಾಟ? ರಾಜಮೌಳಿಗೆ ತಲೆಬಿಸಿ!

ಮೊದಲ ಬಾರಿ ಬುಕ್‌ಮೈಶೋನಲ್ಲಿ ಮೋದಿ ಕಾರ್ಯಕ್ರಮಕ್ಕೆ ಬುಕಿಂಗ್; ಒಂದೇ ಗಂಟೆಯಲ್ಲಿ ಎಲ್ಲ ಸೀಟ್ ಭರ್ತಿ! ವೇಟಿಂಗ್ ಎಷ್ಟು ಗೊತ್ತಾ?

SC/ST ಪ್ರಕರಣ; ಹಿಂದುತ್ವವಾದಿ ಸ್ವತಂತ್ರ ಭಾರದ್ವಾಜ್‌ಗೆ ಹೈಕೋರ್ಟ್ ಶಾಕ್: 14 ದಿನ ನ್ಯಾಯಾಂಗ ಬಂಧನ!

72 ವರ್ಷಗಳ ಸಂಪ್ರದಾಯಕ್ಕೆ ಬ್ರೇಕ್: ಇದೇ ಮೊದಲ ಬಾರಿಗೆ ದೆಹಲಿ ಬದಲು ಗುಜರಾತ್‌ನಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ!