ದೇಶ

ಎಐಸಿಸಿ ಅಧ್ಯಕ್ಷೀಯ ಚುನಾವಣೆ: ದಯವಿಟ್ಟು ನೇತಾಗಿರಿ ಬೇಡ, ಖರ್ಗೆ ಬಣಕ್ಕೆ ಶಶಿ ತರೂರ್ ಕಿವಿಮಾತು

Nagaraja AB

ಲಖನೌ: ಎಐಸಿಸಿ ಅಧ್ಯಕ್ಷೀಯ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಮಲ್ಲಿಕಾರ್ಜುನ ಖರ್ಗೆಅವರ  ಗುಂಪಿನ ವಿರುದ್ಧ ಶಶಿ ತರೂರ್ ಭಾನುವಾರ ಮುಸುಕಿನ ಗುದ್ದಾಟ ನಡೆಸಿದ್ದಾರೆ.

ಕೆಲವು ಸಹೋದ್ಯೋಗಿಗಳು ನೇತಾಗಿರಿಯಲ್ಲಿ ತೊಡಗಿದ್ದು, ಸೋನಿಯಾ ಗಾಂಧಿ ಯಾರನ್ನು ಆಯ್ಕೆ ಮಾಡಲು ಬಯಸಿದ್ದಾರೆ ಎಂಬುದು ಗೊತ್ತಿದೆ ಎಂದು ಪಕ್ಷದ ಕಾರ್ಯಕರ್ತರಲ್ಲಿ ಹೇಳುತ್ತಿದ್ದಾರೆ. ಯಾರಿಗಾದರೂ 'ಭಯ ಅಥವಾ ಅನುಮಾನ' ಇದ್ದರೆ, ಅದು ರಹಸ್ಯ ಮತದಾನವಾಗಿರುತ್ತದೆ ಎಂದು ಪಕ್ಷವು ಸ್ಪಷ್ಟಪಡಿಸಿದ್ದು, ಹೊಸ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡಲು ಮತ ಚಲಾಯಿಸುವಾಗ ಕಾಂಗ್ರೆಸ್ ಪ್ರತಿನಿಧಿಗಳು ತಮ್ಮ ಹೃದಯವನ್ನು ಕೇಳಬೇಕು ಎಂದು ಒತ್ತಾಯಿಸಿದ್ದಾರೆ. 

ಚುನಾವಣೆಯನ್ನು ಯಾವ ರೀತಿಯಲ್ಲಿ ನೋಡುವಿರಿ ಎಂದು ಸೋನಿಯಾ ಗಾಂಧಿ ಅವರನ್ನು ಕೇಳಿದಾಗ, ಪಕ್ಷಕ್ಕೆ ಇದು ಅತ್ಯುತ್ತಮವಾಗಿದೆ. ನೀವು ಧೈರ್ಯದಿಂದ ಹೋರಾಡಿ, ನಾವು ತಟಸ್ಠರಾಗಿರುತ್ತೇವೆ. ನಮ್ಮ ಕಡೆಯಿಂದ ಅಧಿಕೃತ ಅಭ್ಯರ್ಥಿ ಇರಲ್ಲ ಎಂದು  ಸೋನಿಯಾ ಗಾಂಧಿ ಹೇಳಿರುವುದಾಗಿ ಅವರು ಉತ್ತರ ಪ್ರದೇಶ ಕಾಂಗ್ರೆಸ್ ಕಚೇರಿ ಬಳಿ ಅವರು ಸುದ್ದಿಗಾರರಿಗೆ ತಿಳಿಸಿದರು. 

ಕಾಂಗ್ರೆಸ್ ನಲ್ಲಿ 'ವಿಕೇಂದ್ರೀಕರಣ'ಕ್ಕೆ ಒತ್ತು ನೀಡಿದ್ದರಿಂದ 'ಎಲ್ಲ ನಿರ್ಧಾರಗಳನ್ನು ದೆಹಲಿಯಲ್ಲಿ ತೆಗೆದುಕೊಳ್ಳಲಾಗುವುದಿಲ್ಲ, ಈ ಚುನಾವಣೆಯಲ್ಲಿ ಯಾರೋ ಒಬ್ಬರು ಗೆಲ್ಲುತ್ತಾರೆ, ಯಾರಾದರೂ ಸೋಲುತ್ತಾರೆ. ಖರ್ಗೆ ಸಾಹೇಬರು ಗೆಲ್ಲಲಿ ಅಥವಾ ನಾನು ಗೆದ್ದರೂ ಕಾಂಗ್ರೆಸ್ ಜಯಶಾಲಿಯಾಗಬೇಕು. 'ಒಬ್ಬ ವ್ಯಕ್ತಿ, ಒಂದು ಹುದ್ದೆ' ತತ್ವ ಸೇರಿದಂತೆ ಪಕ್ಷದ ಉದಯಪುರ ಘೋಷಣೆಯ ಅನುಷ್ಠಾನದ ಬಗ್ಗೆ ತರೂರ್ ಒತ್ತಿ ಹೇಳಿದರು. "ಪಕ್ಷದಲ್ಲಿ ವಿಕೇಂದ್ರೀಕರಣ ಇರಬೇಕು, ಆದ್ದರಿಂದ ಎಲ್ಲಾ ನಿರ್ಧಾರಗಳನ್ನು ದೆಹಲಿಯಲ್ಲಿ ತೆಗೆದುಕೊಳ್ಳಲಾಗುವುದಿಲ್ಲ ಎಂದು ಅವರು ಹೇಳಿದರು. 

ಖರ್ಗೆ ಪಾಳಯವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಅವರು, ನನ್ನ ಕೆಲವು ಸಹೋದ್ಯೋಗಿಗಳು ನೇತಾಗಿರಿಯಲ್ಲಿ  ತೊಡಗಿರುವುದು ನನಗೆ ತಿಳಿದಿದೆ ಮತ್ತು ಸೋನಿಯಾ ಗಾಂಧಿ ಅವರಿಗೆ ಏನು ಬೇಕು ಮತ್ತು ಯಾರನ್ನು ಬಯಸುತ್ತಾರೆ ಎಂಬುದು ಅವರಿಗೆ ತಿಳಿದಿದೆ ಎಂದು ಪಕ್ಷದ ಕಾರ್ಯಕರ್ತರಿಗೆ ಹೇಳುತ್ತಿದ್ದಾರೆ. ಈ ರೀತಿಯ ನೇತಾಗಿರಿ ಈ ರಾಜ್ಯಕ್ಕೆ ಸೀಮಿತವಾಗಿಲ್ಲ, ಇದು ಹಲವು ರಾಜ್ಯಗಳಲ್ಲಿತ್ತು, ನಮ್ಮ ಪಕ್ಷವನ್ನು ನಡೆಸುತ್ತಿರುವ ಸೋನಿಯಾ ಗಾಂಧಿಯವರ ಮಾತಿನಲ್ಲಿ ಪಕ್ಷದ ಕಾರ್ಯಕರ್ತರಿಗೆ) ನಂಬಿಕೆ ಇಲ್ಲವೇ? ಚುನಾವಣೆಯಲ್ಲಿ ಗಾಂಧಿ ಕುಟುಂಬ ತಟಸ್ಥವಾಗಿ ಉಳಿಯುವುದಾಗಿ ಸೋನಿಯಾ ಗಾಂಧಿ ಹೇಳಿರುವುದಾಗಿ ಶಶಿ ತರೂರ್ ಸ್ಪಷ್ಟಪಡಿಸಿದರು. 

SCROLL FOR NEXT