ಮುಂಬೈ: ರನ್‌ವೇ ನಿರ್ವಹಣೆ ಕೆಲಸದಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ನಾಳೆ ಆರು ಗಂಟೆಗಳ ಕಾಲ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ಮುಂಬೈ ವಿಮಾನ ನಿಲ್ದಾಣವು ಎರಡು ಛೇದಿಸುವ ರನ್‌ವೇಗಳನ್ನು ಹೊಂದಿದೆ. ಮುಖ್ಯ ರನ್‌ವೇ 9/27 ಮತ್ತು ಸೆಕೆಂಡರಿ ರನ್‌ವೇ 14/32, ಇದು ದಿನಕ್ಕೆ ಸುಮಾರು 800 ವಿಮಾನಗಳನ್ನು ನಿರ್ವಹಿಸುತ್ತದೆ. ಇದು ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಎರಡನೇ ಅತ್ಯಂತ ಜನನಿಬಿಡ ಏರೋಡ್ರೋಮ್ ಆಗಿದೆ.
ಎರಡೂ ರನ್‌ವೇಗಳ ದುರಸ್ತಿ ಮತ್ತು ನಿರ್ವಹಣೆಗಾಗಿ ಅಕ್ಟೋಬರ್ 18 ರಂದು ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ರನ್‌ವೇ ಮುಚ್ಚಲು ಯೋಜಿಸಲಾಗಿದೆ ಎಂದು ಆಪರೇಟರ್ ಅದಾನಿ ಗ್ರೂಪ್ ತಿಳಿಸಿದೆ. ಮುಂಬೈ ವಿಮಾನ ನಿಲ್ದಾಣ ನಿರ್ವಹಣೆಯಲ್ಲಿ ಅದಾನಿ ಗ್ರೂಪ್ ಶೇಕಡಾ 74 ರಷ್ಟು ಪಾಲನ್ನು ಹೊಂದಿದೆ.
ವಿಮಾನ ನಿಲ್ದಾಣ ಮುಚ್ಚಿದ ಅವಧಿಯಲ್ಲಿ ರನ್ ವೇ 14/32 ಗಾಗಿ ಅಂಚಿನ ದೀಪಗಳು, ಏರೋನಾಟಿಕಲ್ ಗ್ರೌಂಡ್ ಲೈಟ್ ಗಳ ಉನ್ನತೀಕರಣದಂತಹ ಪ್ರಮುಖ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಅದು ಹೇಳಿದೆ.