ದೇಶ

ರಾಹುಲ್ ಗಾಂಧಿ ಕೈಗೊಂಡಿರುವ ಭಾರತ ಜೋಡೋ ಯಾತ್ರೆ ರಾಮನ ಪಾದಯಾತ್ರೆಗಿಂತಲೂ ದೊಡ್ಡದು: ರಾಜಸ್ಥಾನ ಸಚಿವ

Ramyashree GN

ಜೈಪುರ: ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯನ್ನು 'ವಿಶಿಷ್ಟ ಮತ್ತು ಐತಿಹಾಸಿಕ' ಚಳುವಳಿ ಎಂದು ಕರೆದಿರುವ ರಾಜಸ್ಥಾನದ ಆರೋಗ್ಯ ಸಚಿವ ಪರ್ಸಾದಿ ಲಾಲ್ ಮೀನಾ, ಅಯೋಧ್ಯೆಯಿಂದ ಶ್ರೀಲಂಕಾದವರೆಗೆ ಕೈಗೊಂಡಿದ್ದ ಭಗವಾನ್ ರಾಮನ ಪಾದಯಾತ್ರೆಗಿಂತ ರಾಹುಲ್ ಗಾಂಧಿ ಅವರ ಪಾದಯಾತ್ರೆ ದೊಡ್ಡದು ಎಂದು ಹೇಳಿದರು.

ಮೀನಾ ಅವರ ಹೇಳಿಕೆಗೆ ವ್ಯಂಗ್ಯವಾಡಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ), ಕಾಂಗ್ರೆಸ್ ನಾಯಕರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು 'ಮುಖಸ್ತುತಿ'ಯನ್ನು ಆಶ್ರಯಿಸಿದ್ದಾರೆ ಎಂದು ಹೇಳಿದೆ.

'ಭಗವಾನ್ ರಾಮನು ಅಯೋಧ್ಯೆಯಿಂದ ಶ್ರೀಲಂಕಾದವರೆಗೆ ಕಾಲ್ನಡಿಗೆಯಲ್ಲಿ ಪ್ರಯಾಣಿಸಿದ್ದಾನೆ. ಆದರೆ ಈಗ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಇನ್ನೂ ಹೆಚ್ಚು ನಡೆಯಲಿದ್ದಾರೆ' ಎಂದು ಮೀನಾ ಸೋಮವಾರ ಕಾರ್ಯಕ್ರಮವೊಂದರಲ್ಲಿ ತಿಳಿಸಿದರು.

ಕಾಂಗ್ರೆಸ್ ತನ್ನ 3,500 ಕಿಮೀ ಉದ್ದದ 150 ದಿನಗಳ ಭಾರತ್ ಜೋಡೋ ಯಾತ್ರೆಯನ್ನು ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭಿಸಿತ್ತು. ಸುಮಾರು ಐದು ತಿಂಗಳು ನಡೆಯಸಿಕುವ ಯಾತ್ರೆಯಲ್ಲಿ 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾತ್ರೆಯು ಸಂಚರಿಸಲಿದೆ.

'ಬಿಜೆಪಿ ದೇಶದ ವಾತಾವರಣವನ್ನು ಹಾಳು ಮಾಡಿದೆ. ದೇಶದ ವಾತಾವರಣವನ್ನು ಸರಿಪಡಿಸಲು, ಶಾಂತಿ ಮತ್ತು ಸೌಹಾರ್ದತೆಯನ್ನು ಮರುಸ್ಥಾಪಿಸಲು ರಾಹುಲ್ ಗಾಂಧಿ ಈ ಯಾತ್ರೆಯನ್ನು ಕೈಗೊಂಡಿದ್ದಾರೆ. ಇಂತಹ ಪಾದಯಾತ್ರೆಯನ್ನು ಯಾರೂ ನೋಡಿಲ್ಲ ಅಥವಾ ಮಾಡಲು ಸಾಧ್ಯವಾಗುವುದಿಲ್ಲ' ಎಂದು ಹೇಳಿದರು.

ಈ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯ ವಕ್ತಾರ ಮತ್ತು ಶಾಸಕ ರಾಮಲಾಲ್ ಶರ್ಮಾ, ಕಾಂಗ್ರೆಸ್, ಭಗವಾನ್ ರಾಮನ ಅಸ್ತಿತ್ವವನ್ನು ಒಪ್ಪಿಕೊಳ್ಳಲಿಲ್ಲ ಮತ್ತು ಈಗ ಅವರು ತಮ್ಮ ಪಾದಯಾತ್ರೆಯನ್ನು ಅಕ್ಕಪಕ್ಕದಲ್ಲಿ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಪಕ್ಷವು ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿತು. ಈಗ ಕಾಂಗ್ರೆಸ್ ನಾಯಕರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮುಖಸ್ತುತಿ ಮಾಡುತ್ತಿದ್ದಾರೆ. ಆದರೆ, ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಮತ್ತು ಸರಿಯಾದ ಸಮಯದಲ್ಲಿ ಕಾಂಗ್ರೆಸ್ ಲೆಕ್ಕವನ್ನು ಮನ್ನಾ ಮಾಡುತ್ತಾರೆ' ಎಂದು ಹೇಳಿದೆ.

SCROLL FOR NEXT