ದೇಶ

ನಾಲ್ಕು ರಾಜ್ಯಗಳ ಶೇ.39 ಮಂದಿಗೆ ಕೋವಿಡ್ ಸಮಯದಲ್ಲಿ ನರೇಗಾ ಯೋಜನೆಯಡಿ ಒಂದು ದಿನವೂ ಕೆಲಸ ಸಿಕ್ಕಿಲ್ಲ!

Sumana Upadhyaya

ನವದೆಹಲಿ: ಭಾರತದ ನಾಲ್ಕು ರಾಜ್ಯಗಳಲ್ಲಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ 2020-21 ಅವಧಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ 2005(MGNREA) ರ ಅಡಿಯಲ್ಲಿ ನೋಂದಾಯಿಸಲಾದ ಎಲ್ಲಾ ಉದ್ಯೋಗ ಕಾರ್ಡು(Job Card) ಹೊಂದಿರುವ ಸುಮಾರು ಶೇಕಡಾ 39ರಷ್ಟು ಕುಟುಂಬಗಳಿಗೆ ಒಂದು ದಿನವೂ ಕೆಲಸ ನೀಡಲಾಗಿಲ್ಲ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ. 

ಬಿಹಾರ (ಆಗ NDA ಮೈತ್ರಿಕೂಟದ ಆಡಳಿತ ) ಮತ್ತು ಕರ್ನಾಟಕ (ಈಗ ಬಿಜೆಪಿ ಆಡಳಿತ) ರಾಜ್ಯಗಳು ಕೂಡ ಸೇರಿವೆ. ವಾಸ್ತವವಾಗಿ, ಜಾಬ್-ಕಾರ್ಡ್ ಹೊಂದಿರುವ ಶೇಕಡಾ 39ರಷ್ಟು ಕುಟುಂಬಗಳು ಸರಾಸರಿ 77 ದಿನಗಳ ಕೆಲಸದ ಬೇಡಿಕೆಯನ್ನಿಟ್ಟಿದ್ದರು. ಆದರೆ ಅವರಿಗೆ ಒಂದು ದಿನವೂ ಕೆಲಸ ಸಿಗಲಿಲ್ಲ.

ರಾಷ್ಟ್ರೀಯ ನಾಗರಿಕ ಸಂಸ್ಥೆಗಳು ಮತ್ತು ಸಹಯೋಗದ ಸಂಶೋಧನೆ ಮತ್ತು ಪ್ರಸರಣ (CORD) ಸಹಭಾಗಿತ್ವದಲ್ಲಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ದೇಶದ ನಾಲ್ಕು ರಾಜ್ಯಗಳ ವಿವಿಧ ಬ್ಲಾಕ್‌ಗಳಲ್ಲಿ MGNREGA ಮೇಲೆ 'ಕೋವಿಡ್-19 ಸಾಂಕ್ರಾಮಿಕ'ದ ಪ್ರಭಾವದ ಕುರಿತು ನಡೆಸಿದ ಸಮೀಕ್ಷೆಯಿಂದ ಬೆಚ್ಚಿಬೀಳಿಸುವ ಸಂಗತಿಗಳು ಹೊರಬಂದಿವೆ. 

ಈ ಎಲ್ಲಾ ನ್ಯೂನತೆಗಳ ಹೊರತಾಗಿಯೂ, ಸಾಂಕ್ರಾಮಿಕ ಸಮಯದಲ್ಲಿ MGNREGA ಗಮನಾರ್ಹ ವ್ಯತ್ಯಾಸವನ್ನು ಬಡ ಕೂಲಿಕಾರ್ಮಿಕರ ಬದುಕಿನಲ್ಲಿ ಮಾಡಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಕಳೆದ ತಿಂಗಳು ಹೈದರಾಬಾದ್ ನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕಳೆದ ಎಂಟು ವರ್ಷಗಳಲ್ಲಿ ಕೇಂದ್ರವು MGNREGA ಯೋಜನೆಗೆ 5 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ, ಅದರಲ್ಲಿ 20 ಪ್ರತಿಶತವನ್ನು COVID-19 ಸಾಂಕ್ರಾಮಿಕ ಸಮಯದಲ್ಲಿ ಖರ್ಚು ಮಾಡಲಾಗಿದೆ ಎಂದು ಹೇಳಿದ್ದರು.

SCROLL FOR NEXT