ದೇಶ

ಕರ್ನಾಟಕದ ರಸ್ತೆಗಳ ಸ್ಥಿತಿ ಅತ್ಯಂತ ಕೆಟ್ಟದಾಗಿದೆ: ಗೋವಾ ಸಿಎಂ ಸಾವಂತ್

Lingaraj Badiger

ಪಣಜಿ: ರಾಜ್ಯದ ರಸ್ತೆಗಳ ಸ್ಥಿತಿ ಬಗ್ಗೆ ತೀವ್ರ ಜನಾಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಗೋವಾ ಬಿಜೆಪಿ ಸರ್ಕಾರ ಸಹ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಬೊಮ್ಮಾಯಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಬೆಳಗಾವಿ ಜಿಲ್ಲೆಯ ರಸ್ತೆಗಳ ದುಃಸ್ಥಿತಿಗೆ ಸಂಬಂಧಿಸಿದಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು, ಗೋವಾ ಮತ್ತು ಬೆಳಗಾವಿ ನಡುವೆ ಎಲೆಕ್ಟ್ರಿಕ್ ಶಟಲ್ ಬಸ್‌ಗಳನ್ನು ಪ್ರಾರಂಭಿಸಲು"ಕರ್ನಾಟಕದ ರಸ್ತೆಗಳು ಉತ್ತಮ ಸ್ಥಿತಿಯಲ್ಲಿಲ್ಲ ಎಂದಿದ್ದಾರೆ.

ಪಣಜಿಯಲ್ಲಿ ನಡೆದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಾವಂತ್, ಕರ್ನಾಟಕದ ಭಾಗ, ಗೋವಾ-ರಾಯಚೂರು ರಾಜ್ಯ ಹೆದ್ದಾರಿ ಸಂಖ್ಯೆ 4Aನಲ್ಲಿ ಬೆಳಗಾವಿಯವರೆಗೂ ಎಲೆಕ್ಟ್ರಿಕ್ ಸಂಚರಿಸಲು ಯೋಗ್ಯವಾಗಿಲ್ಲ ಎಂದಿದ್ದಾರೆ.

ಕರ್ನಾಟಕದ ರಸ್ತೆಗಳ ಸ್ಥಿತಿ ಅತ್ಯಂತ ಕೆಟ್ಟದಾಗಿದೆ ಎಂದ ಸಾವಂತ್, ಈ ಸಮಸ್ಯೆಯನ್ನು ಇತ್ತೀಚೆಗೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದಿದ್ದೇನೆ. ಮಳೆಗಾಲ ಮುಗಿದ ನಂತರ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಇಂಧನ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ಬಸ್ ಬಳಸುವ ತಮ್ಮ ಕ್ರಮವನ್ನು ಬೊಮ್ಮಾಯಿ ಶ್ಲಾಘಿಸಿದರು ಎಂದು ಸಾವಂತ್ ತಿಳಿಸಿದ್ದಾರೆ.

ಈ ಸಂಬಂಧ ಬೊಮ್ಮಾಯಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಿಪಕ್ಷ ಕಾಂಗ್ರೆಸ್, ಹೈಕೋರ್ಟ್ ಆಯ್ತು, ಜನತೆ ಆಯ್ತು, ಈಗ ಗೋವಾ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳೇ ಕರ್ನಾಟಕದ ರಸ್ತೆಗಳನ್ನು ಟೀಕಿಸುತ್ತಿದ್ದಾರೆ!

#PayCM ಅವರೇ, ಗೋವಾ ಸಿಎಂಗೆ ಪ್ರತಿಕ್ರಿಯೆ ನೀಡಿ #SayCM ಆಗುವುದು ಯಾವಾಗ?
ಇದು ಅತ್ಯಂತ ನಾಚಿಕೆಗೇಡು ಅಲ್ಲವೇ?

#40ಪರ್ಸೆಂಟ್ ಸರ್ಕಾರಕ್ಕೆ ಬಿಜೆಪಿಗರೇ ನೀಡಿದ ಸರ್ಟಿಫಿಕೇಟ್‌ಗೆ ಏನಂತೀರಿ ಎಂದು ಟ್ವೀಟ್ ಮಾಡಿದೆ.

SCROLL FOR NEXT