ದೇಶ

ಕಾಂಗ್ರೆಸ್ ನಲ್ಲಿ ಸೋನಿಯಾ ಗಾಂಧಿ ಮಾತೇ ಅಂತಿಮ, ಅದು ಹಾಗೆಯೇ ಮುಂದುವರಿಯಬಹುದು: ಅಶ್ವನಿ ಕುಮಾರ್

Sumana Upadhyaya

ನವದೆಹಲಿ: ಪಕ್ಷದ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭಾರಿ ಅಂತರದಿಂದ ಆಯ್ಕೆ ಮಾಡಿರುವುದು ಕಾಂಗ್ರೆಸ್ ಪಕ್ಷದ ಆಂತರಿಕ ರಾಜಕೀಯದಲ್ಲಿ ಸೋನಿಯಾ ಗಾಂಧಿ ಅವರ ಮಾತೇ ಕೊನೆ ಎಂಬುದನ್ನು ತೋರಿಸುತ್ತದೆ ಎಂದು ಅದೇ ಪಕ್ಷದ ಮಾಜಿ ನಾಯಕ ಅಶ್ವನಿ ಕುಮಾರ್ ಹೇಳಿಕೆ ನೀಡಿದ್ದಾರೆ. 

ಸೋನಿಯಾ ಗಾಂಧಿಯವರು ಪಕ್ಷದಲ್ಲಿ ಸಕ್ರಿಯರಾಗಿರುವವರೆಗೆ ಅವರ ಮಾತೇ ಅಂತಿಮ ಎಂಬ ಪರಿಸ್ಥಿತಿ ಇರಲಿದೆ. ಪಕ್ಷದಲ್ಲಿ ಹಲವರು ಗಾಂಧಿ ಕುಟುಂಬಕ್ಕೆ ನಿಷ್ಠೆ ತೋರಿಸಿಕೊಂಡು ಇವತ್ತಿಗೂ ಬರುತ್ತಿರುವುದೇ ಕಾರಣವಾಗಿದೆ ಎಂದಿದ್ದಾರೆ. ಖರ್ಗೆಯವರು ಸೋನಿಯಾ ಗಾಂಧಿಯವರ ಅಘೋಷಿತ ಆಯ್ಕೆಯಾಗಿದ್ದರು ಎಂಬುದು ನಿರ್ವಿವಾದವಾಗಿದೆ, ಸೋನಿಯಾ ಗಾಂಧಿಯವರು ಚುನಾವಣೆ ಬಳಸಿಕೊಂಡು ತಮ್ಮ ರಾಜಕೀಯ ನಿರ್ಣಯವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ ಎಂದರು. 

ಇದೇ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರು ಕಾಂಗ್ರೆಸ್ ಉನ್ನತ ಹುದ್ದೆಗೆ ಸ್ಪರ್ಧಿಸುವ ಸವಾಲನ್ನು ಸ್ವೀಕರಿಸಿದ್ದು ಶ್ಲಾಘನೀಯ ಅವರು ಸೋತಿಲ್ಲ ಎಂದು ಹೇಳಿದರು.

ಚುನಾವಣಾ ಪ್ರಕ್ರಿಯೆಯು ಅವರಿಗೆ ವಿಜಯವಾಗಿದೆ. ಅವರು ಮಾತಿನಂತೆ ನಡೆದುಕೊಂಡು ರಾಜಕೀಯ ಹೇಳಿಕೆಯನ್ನು ನೀಡುವಲ್ಲಿ ತಮ್ಮ ಶಕ್ತಿಯನ್ನು ತೊಡಗಿಸಿಕೊಂಡಿದ್ದಾರೆ. ಅವರು ಜಿ -23 ಗುಂಪಿನಲ್ಲಿ ತಮ್ಮ ಒಂದು ಕಾಲದ ಸಹೋದ್ಯೋಗಿಗಳನ್ನು ಸ್ಪಷ್ಟವಾಗಿ ಮೀರಿಸಿದ್ದಾರೆ ಎಂದರು.

SCROLL FOR NEXT