ದೇಶ

ತೆಲಂಗಾಣ: ಇಬ್ಬರು ಮುಖಂಡರು ಟಿಆರ್ ಎಸ್ ಗೆ ವಾಪಸ್, ಬಿಜೆಪಿಗೆ ಹಿನ್ನಡೆ

Nagaraja AB

ಹೈದ್ರಾಬಾದ್: ಮುನುಗೋಡು ವಿಧಾನಸಭಾ ಉಪಚುನಾವಣೆಗೂ ಮುನ್ನ ಇಬ್ಬರು ಮುಖಂಡರಾದ  ಕೆ ಸ್ವಾಮಿ ಗೌಡ್ ಮತ್ತು ಶ್ರವಣ್ ದಾಸೋಜು ಅವರು ಶುಕ್ರವಾರ ಟಿಆರ್ ಎಸ್ ಪಕ್ಷಕ್ಕೆ ವಾಪಸ್ಸಾಗಿದ್ದಾರೆ. ಇದರಿಂದಾಗಿ ಭಾರತೀಯ ಜನತಾ ಪಕ್ಷಕ್ಕೆ ತೀವ್ರ ಹೊಡೆತ ಬಿದ್ದಿದೆ.

ಟಿಆರ್‌ಎಸ್‌ನ ಕಾರ್ಯಾಧ್ಯಕ್ಷ ಹಾಗೂ ರಾಜ್ಯ ಸಚಿವ ಕೆಟಿ ರಾಮರಾವ್ ಅವರ ಸಮ್ಮುಖದಲ್ಲಿ ಗೌಡ್ ಮತ್ತು ದಾಸೋಜು ಅವರು ಟಿಆರ್‌ಎಸ್‌ಗೆ ಮರು ಸೇರ್ಪಡೆಯಾದರು. ಈ ಹಿಂದೆ ಇವರಿಬ್ಬರೂ ಟಿಆರ್ ಎಸ್ ನಲ್ಲಿದ್ದರಿಂದ ಇವರಿಬ್ಬರೂ ಇದೀಗ ತಮ್ಮ ಮನೆಗೆ ವಾಪಸ್ಸಾದರು.

ರಾಜ್ಯ ವಿಧಾನ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಗೌಡ್ ಅವರು 2020 ರಲ್ಲಿ ಟಿಆರ್ ಎಸ್ ತೊರೆದ ನಂತರ ಬಿಜೆಪಿ ಸೇರಿದ್ದರು. ಕಳೆದ ಎರಡು ತಿಂಗಳ ಹಿಂದೆ ಕಾಂಗ್ರೆಸ್‌ನಲ್ಲಿದ್ದ ದಾಸೋಜು ಬಿಜೆಪಿ ಸೇರಿದ್ದರು. ಕಾಂಗ್ರೆಸ್‌ನಲ್ಲಿ ಕೆಲಸ ಮಾಡುವ ಮೊದಲು ದಾಸೋಜು ಟಿಆರ್‌ಎಸ್‌ನಲ್ಲಿದ್ದರು.

ಎರಡು ದಿನಗಳ ಹಿಂದೆ ಟಿಆರ್‌ಎಸ್‌ನ ಮಾಜಿ ಸಂಸದ, ಹಿಂದುಳಿದ ವರ್ಗಗಳ ಮುಖಂಡ ಬೂರ ನರಸಯ್ಯಗೌಡ ಟಿಆರ್‌ಎಸ್ ತೊರೆದು ಬಿಜೆಪಿ ಸೇರಿದ್ದರು. ಆದರೆ, ಹಿಂದುಳಿದ ವರ್ಗಗಳಿಗೆ ಸೇರಿದ ಸ್ವಾಮಿಗೌಡ ಮತ್ತು ಶ್ರವಣ ದಾಸೋಜು ಅವರು ಟಿಆರ್‌ಎಸ್‌ಗೆ ಸೇರ್ಪಡೆಯಾಗಿರುವುದರಿಂದ  ನವೆಂಬರ್ 3 ರಂದು ನಡೆಯಲಿರುವ ಮುನುಗೋಡು ಉಪಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ನೆರವಾಗಬಹುದು.  

ಟಿಆರ್‌ಎಸ್‌ನ ಕುಟುಂಬ ಆಡಳಿತದ ವಿರುದ್ಧ ಹೋರಾಡಲು ಹಾಲಿ ಕಾಂಗ್ರೆಸ್ ಶಾಸಕ ಕೋಮಟಿರೆಡ್ಡಿ ರಾಜ್‌ಗೋಪಾಲ್ ರೆಡ್ಡಿ  ಬಿಜೆಪಿ ಸೇರಿದ್ದರಿಂದ ಅವರು ರಾಜೀನಾಮೆಯಿಂದ ಉಪಚುನಾವಣೆ ಅನಿವಾರ್ಯವಾಗಿದೆ. ನವೆಂಬರ್ 6 ರಂದು ಮತ ಎಣಿಕೆ ನಡೆಯಲಿದೆ.

SCROLL FOR NEXT