ದೇಶ

ಅಯೋಧ್ಯೆ ದೀಪೋತ್ಸವದಲ್ಲಿ ರಷ್ಯಾ ತಂಡದಿಂದ ಕಲಾ ಪ್ರದರ್ಶನ 

Srinivas Rao BV

ಅಯೋಧ್ಯೆ: ರಾಮ ಜನ್ಮಭೂಮಿ ಸ್ಥಳವಿರುವ ಅಯೋಧ್ಯೆ ದೀಪೋತ್ಸವಕ್ಕೆ ಸಜ್ಜುಗೊಂಡಿದ್ದು,  ವಿದೇಶಿ ಕಲಾವಿದರ ಕಲಾ ಪ್ರದರ್ಶನಕ್ಕೆ ಉತ್ತರ ಪ್ರದೇಶ ಸರ್ಕಾರ ವೇದಿಕೆ ನೀಡಿದೆ. 

ಮಾಸ್ಕೋದ ಭಾರತ- ರಷ್ಯಾ ಸ್ನೇಹ ಸಂಘ, ದಿಶಾದ ಆಶ್ರಯದಲ್ಲಿ ಪದ್ಮ ಶ್ರೀ ಗೆನ್ನಡಿ ಮಿಖೈಲೋವಿಚ್ ಪೆಚ್ನಿಕೋವ್ ಸ್ಮಾರಕ ರಾಮಲೀಲಾ ದೀಪೋತ್ಸವ ವೇದಿಕೆಯಲ್ಲಿ ಕಲಾ ಪ್ರದರ್ಶನ ನಡೆಯಲಿದೆ. 12 ಕಲಾವಿದರ ತಂಡ ಇದಾಗಿರಲಿದ್ದು, ನಿರ್ದೇಶಕ ಹಾಗೂ ನಿರ್ಮಾಪಕ ರಾಮೇಶ್ವರ್ ಸಿಂಗ್ 1960 ರಿಂದಲೂ ರಷ್ಯಾದಲ್ಲಿ ಪ್ರತಿ ಮಹತ್ವದ ಸಂದರ್ಭಗಳಲ್ಲೂ ರಾಮ್ ಲೀಲಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದಾರೆ.

ರಷ್ಯನ್ ಕಲಾವಿದರ ಪ್ರಕಾರ ರಾಮನ ವ್ಯಕ್ತಿತ್ವವೇ ತಮ್ಮ ಬೆಳವಣಿಗೆಗೆ ಸ್ಪೂರ್ತಿಯಾಗಿದ್ದು, ನಾವು ರಾಮನ ತತ್ವಗಳನ್ನು ಎತ್ತಿ ಹಿಡಿದಿದ್ದೇವೆ ಎಂದು ಕಲಾವಿದರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ರಷ್ಯನ್ ರಾಮಲೀಲಾದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮ್ ಪಾತ್ರವನ್ನು ಇಲ್ದಾರ್ ಖುಸ್ನುಲ್ಲಿನ್ ವಹಿಸಲಿದ್ದಾರೆ. ಸೀತೆಯ ಪಾತ್ರವನ್ನು ಮಿಲಾನಾ ಬೈಕೊನೆಕ್ ನಿರ್ವಹಿಸಲಿದ್ದಾರೆ.

SCROLL FOR NEXT