ಸಾಂದರ್ಭಿಕ ಚಿತ್ರ 
ದೇಶ

ಹುಡುಗರೇ ಹುಷಾರ್, ಹುಡುಗಿಯರನ್ನು 'ಐಟಂ' ಅಂತಾ ಕರೆಯೋದು ಅವಹೇಳನಾಕಾರಿ; ಜೈಲೂಟ ಗ್ಯಾರಂಟಿ!

ಹುಡುಗಿಯರನ್ನು 'ಐಟಂ'' ಅಂತಾ ಕರೆಯೋದು ಅವಹೇಳನಾಕಾರಿ ಎಂದು ಹೇಳಿರುವ ಇಲ್ಲಿನ ವಿಶೇಷ ನ್ಯಾಯಾಲಯವೊಂದು ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ವ್ಯಕ್ತಿಯೊಬ್ಬರಿಗೆ ಒಂದೂವರೆ ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

ಮುಂಬೈ: ಹುಡುಗಿಯರನ್ನು 'ಐಟಂ'' ಅಂತಾ ಕರೆಯೋದು ಅವಹೇಳನಾಕಾರಿ ಎಂದು ಹೇಳಿರುವ ಇಲ್ಲಿನ ವಿಶೇಷ ನ್ಯಾಯಾಲಯವೊಂದು ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ವ್ಯಕ್ತಿಯೊಬ್ಬರಿಗೆ ಒಂದೂವರೆ ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

ಅಕ್ಟೋಬರ್ 20 ರಂದು ಆರೋಪಿಗೆ ಮೃಧುತ್ವ ತೋರಿಸಲು ನಿರಾಕರಿಸಿದ ನ್ಯಾಯಾಲಯ ಈ ಆದೇಶ  ನೀಡಿದ್ದು, ಇಂತಹ ರಸ್ತೆ ಬದಿಯ ರೊಮಿಯೋಗಳಿಗೆ ಇಂತಹ ಅನಪೇಕ್ಷಿತ ವರ್ತನೆಯಿಂದ ಮಹಿಳೆಯರನ್ನು ರಕ್ಷಿಸಲು ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಹೇಳಿದರು. ಪೊಕ್ಸೊ ಕಾಯ್ದೆಯಡಿ ಪ್ರಕರಣಗಳ ವಿಚಾರಣೆಗೆ ನಿಯೋಜಿತವಾಗಿರುವ ವಿಶೇಷ ನ್ಯಾಯಾಧೀಶ ಎ ಜೆ ಅನ್ಸಾರಿ,  25 ವರ್ಷದ ವ್ಯಕ್ತಿಗೆ ಜೈಲು ಶಿಕ್ಷೆ ಪ್ರಕಟಿಸಿದ್ದಾರೆ.

16 ವರ್ಷದ ಹದಿಹರೆಯದ ಬಾಲಕಿಗೆ ಐಟಂ ಎಂದು ಕರೆದು ಆಕೆಯ ಕೂದಲು ಹಿಡಿದು ತನ್ನ ಮನೆಯವರೆಗೂ ಕರೆದೊಯ್ದ ಆರೋಪಕ್ಕೆ ಯುವಕ ಗುರಿಯಾಗಿದ್ದ. ಆರೋಪಿ ವರ್ತನೆ ಸಂಪೂರ್ಣವಾಗಿ ಅನುಚಿತವಾಗಿದೆ ಎಂದು ಹೇಳಿದ ನ್ಯಾಯಾಲಯ, ಆರೋಪಿ ಆಕೆಯನ್ನುದ್ದೇಶಿಸಿ ಐಟಂ ಎಂಬ ಪದ ಬಳಸಿದ್ದಾನೆ. ಇದು ಸಾಮಾನ್ಯವಾಗಿ ಹುಡುಗರು ಹುಡುಗಿಯರನ್ನು ಅವಹೇಳನಕಾರಿ ಶೈಲಿಯಲ್ಲಿ ಸಂಬೋಧಿಸಲು ಬಳಸುವ ಪದವಾಗಿದ್ದು ಲೈಂಗಿಕ ರೀತಿಯಲ್ಲಿ ವಸ್ತುನಿಷ್ಠವಾಗಿದೆ. ಇದು ಆಕೆಯ ನಮ್ರತೆಯನ್ನು ಅತಿರೇಕಗೊಳಿಸುವ ಉದ್ದೇಶವನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಯಾವುದೇ ಹುಡುಗಿಯನ್ನು ಸಂಬೋಧಿಸಲು 'ಐಟಂ' ಎಂಬ ಪದವನ್ನು ಬಳಸುವುದು ನಿಸ್ಸಂಶಯವಾಗಿ ಅವಮಾನಕರವಾಗಿದೆ ಆರೋಪಿಯ ಕೃತ್ಯ ನಿಸ್ಸಂಶಯವಾಗಿ ಲೈಂಗಿಕ ಉದ್ದೇಶದಿಂದ ಮಾಡಲ್ಪಟ್ಟಿದೆ. ಏಕೆಂದರೆ 'ಐಟಂ' ಎಂಬ ಪದವು ಅವಳನ್ನು ಲೈಂಗಿಕವಾಗಿ ಆಕ್ಷೇಪಿಸಲು ಮಾತ್ರ ಬಳಸಲ್ಪಡುತ್ತದೆ ಮತ್ತು ಬೇರೇನೂ ಅಲ್ಲ ಎಂದು ನ್ಯಾಯಾಧೀಶರು ಹೇಳಿದರು.

ಜುಲೈ 14, 2015 ರಂದು, ಸಂತ್ರಸ್ತೆ ಶಾಲೆಯಿಂದ ಹಿಂತಿರುಗುತ್ತಿದ್ದಾಗ, ಆರೋಪಿ ಆಕೆಗೆ 'ಐಟಂ' ಎಂದು ಕರೆದಿದ್ದ. ತನಗೆ ಕಿರುಕುಳ ನೀಡಬೇಡಿ ಎಂದು ಬಾಲಕಿ ಕೇಳಿಕೊಂಡರೂ, ಆರೋಪಿ ಅವಳನ್ನು ಐಟಂ ಎಂದು ಕರೆದು ನಿಂದಿಸಿದ್ದ ಮತ್ತು ಆಕೆಯ ಕೂದಲು ಹಿಡಿದು ಆತನ ಮನೆಯವರೆಗೂ ಎಳೆದೊಯ್ದಿದ್ದ. ನಂತರ ಬಾಲಕಿ ಪೊಲೀಸ್ ಸಹಾಯವಾಣಿ ಸಂಖ್ಯೆ 100ಕ್ಕೆ ಕರೆ ಮಾಡಿ ಸಹಾಯ ಕೋರಿದ್ದಳು. ಆದರೆ ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದ.

ನಂತರ ಮುಂಬೈನ ಸಕಿನಾಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಆರೋಪಿಯನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT