ಪತ್ನಿ ಮೇಲೆ ಕಾರು ಹತ್ತಿಸಿದ ಚಿತ್ರ ನಿರ್ಮಾಪಕ 
ದೇಶ

ಭೀಕರ ವೀಡಿಯೋ: ಪರಸ್ತ್ರೀ ಸಂಗ ಬಯಲು ಮಾಡಿದ ಪತ್ನಿ ಮೇಲೆ ಕಾರು ಹತ್ತಿಸಿದ ಚಿತ್ರ ನಿರ್ಮಾಪಕ!

ಪತಿಯ ಪರಸ್ತ್ರೀ ಸಂಗ ಬಯಲು ಮಾಡಿದ ಪತ್ನಿ ಮೇಲೆ ನಿರ್ಮಾಪಕನೋರ್ವ ಕಾರುಹತ್ತಿಸಲು ಮುಂದಾದ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈ: ಪತಿಯ ಪರಸ್ತ್ರೀ ಸಂಗ ಬಯಲು ಮಾಡಿದ ಪತ್ನಿ ಮೇಲೆ ನಿರ್ಮಾಪಕನೋರ್ವ ಕಾರುಹತ್ತಿಸಲು ಮುಂದಾದ ಘಟನೆ ಮುಂಬೈನಲ್ಲಿ ನಡೆದಿದೆ.

ಚಲನಚಿತ್ರ ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ ಅವರು ತಮ್ಮ ಪತ್ನಿ ಮೇಲೆ ಕಾರು ಹತ್ತಿಸಿದ ಆರೋಪ ಹೊತ್ತಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಇದೇ ಅಕ್ಟೋಬರ್ 19 ರಂದು ಉಪನಗರ ಅಂಧೇರಿಯಲ್ಲಿ (ಪಶ್ಚಿಮ) ವಸತಿ ಕಟ್ಟಡದ ಪಾರ್ಕಿಂಗ್ ಪ್ರದೇಶದಲ್ಲಿ ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ ಬೇರೆ ಹುಡುಗಿಯೊಂದಿಗೆ ಕಾರಿನಲ್ಲಿದ್ದರು. ಈ ವೇಳೆ ತನ್ನ ಪತಿಯನ್ನು ಹುಡುಕುತ್ತಾ ಬಂದ ಪತ್ನಿ ಇದನ್ನು ನೋಡಿದ್ದಾರೆ. ಈ ವೇಳೆ ಆಕೆ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಮುಂದಾಗಿದ್ದು ತಪ್ಪಿಸಿಕೊಳ್ಳುವ ಭರದಲ್ಲಿ ಆಕೆಯ ಮೇಲೆಯೇ ಕಾರು ಹತ್ತಿಸಲು ಮುಂದಾಗಿದ್ದಾರೆ. ಈ ವೇಳೆ ಅವರ ಕೈ ಕಾಲು ಮತ್ತು ತಲೆಗೆ ಗಾಯಗಳಾಗಿವೆ ಎನ್ನಲಾಗಿದೆ.

ಇದೀಗ ನಿರ್ಮಾಪಕರ ಪತ್ನಿ ಪೊಲೀಸ್ ದೂರು ನೀಡಿದ್ದು, ನಿರ್ಮಾಪಕ ಕಮಲ್ ಮಿಶ್ರಾ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ 279 (ಅಪವೇಗದ ಚಾಲನೆ) ಮತ್ತು 337 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯದಿಂದ ನೋವುಂಟುಮಾಡುವುದು) ಸೇರಿದಂತೆ ಅಂಬೋಲಿ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಕಮಲ್ ಮಿಶ್ರಾ ಹಿಂದಿಯ 'ದೇಹತಿ ಡಿಸ್ಕೋ' ಚಿತ್ರದ ನಿರ್ಮಾಪಕರಾಗಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಶ್ನೆಪತ್ರಿಕೆ ಸೋರಿಕೆ,'ಚಂದಾ ಚೋರಿ' ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ; 'ವಂದೇ ಮಾತರಂ'ನ ಎರಡು ಪ್ಯಾರಾ ಮಾತ್ರ ಹಾಡಲು ನಿರ್ಣಯ!

illegal gold mine: ಮಧ್ಯ ಆಫ್ರಿಕಾದಲ್ಲಿ ಭಯಾನಕ ದುರಂತ, ಚಿನ್ನದ ಗಣಿಯಲ್ಲಿ ಕುಸಿತ,100 ಮಂದಿ ದುರ್ಮರಣ! Video

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ರೋಚಕ ಪಂದ್ಯದಲ್ಲಿ ಭಾರತ 5-3 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿ ವಿಶ್ವಕಪ್‌ನಿಂದ ಹೊರದೂಡಿದೆ!

ಬಾಲಿವುಡ್ ನಟ ಗೋವಿಂದಾ ದಾಂಪತ್ಯ ಕಿತ್ತಾಟದಲ್ಲಿ ಸ್ಫೋಟಕ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ ಸುನೀತಾ ಅಹುಜಾ!