ದೇಶ

ದೆಹಲಿಯಲ್ಲಿ ಕಸದ ಸಮಸ್ಯೆ: ಎಂಸಿಡಿ ವಿರುದ್ಧ ಎಎಪಿ ನಾಯಕರಿಂದ ಪ್ರತಿಭಟನೆ

Lingaraj Badiger

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿನ ಕಸದ ಸಮಸ್ಯೆಗೆ ಸಂಬಂಧಿಸಿದಂತೆ ದೆಹಲಿ ಮಹಾನಗರ ಪಾಲಿಕೆ(ಎಂಸಿಡಿ) ವಿರುದ್ಧ ಆಮ್ ಆದ್ಮಿ ಪಕ್ಷದ ಮುಖಂಡರು ದೆಹಲಿಯ ಹಲವು ಕ್ಷೇತ್ರಗಳಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಸರಿಯಾಗಿ ತ್ಯಾಜ್ಯ ನಿರ್ವಹಣೆ ಮಾಡದ ಎಂಸಿಡಿ ವಿರುದ್ಧ ಎಎಪಿ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು ತಮ್ಮ ಕ್ಷೇತ್ರಗಳಲ್ಲಿ ಫಲಕಗಳನ್ನು ಹಿಡಿದು ಭಾರತೀಯ ಜನತಾ ಪಾರ್ಟಿ(ಬಿಜೆಪಿ) ವಿರುದ್ಧ ಘೋಷಣೆಗಳನ್ನು ಕೂಗಿದರು.

ಗೋವಿಂದಪುರಿ ಮೆಟ್ರೋ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ ಕಲ್ಕಾಜಿ ಶಾಸಕಿ ಅತಿಶಿ, ಎಂಸಿಡಿ ಇಡೀ ನಗರವನ್ನು "ಡಂಪಿಂಗ್ ಗ್ರೌಂಡ್" ಆಗಿ ಪರಿವರ್ತಿಸಿದೆ ಮತ್ತು ಬಿಜೆಪಿಯು ನಗರದಾದ್ಯಂತ "ಇನ್ನೂ 16 ಲ್ಯಾಂಡ್ ಫಿಲ್ ಸೈಟ್" ಗಳನ್ನು ರೂಪಿಸಲಿದೆ ಎಂದು ಆರೋಪಿಸಿದರು.

"ಬಿಜೆಪಿಯು ಕಲ್ಕಾಜಿಯ ಮುಖ್ಯ ದ್ವಾರದಲ್ಲಿಯೇ ಕಸದ ಬೆಟ್ಟವನ್ನು ನಿರ್ಮಿಸಿದೆ. ಈ ಸ್ಥಳವು ಶೀಘ್ರದಲ್ಲೇ ಭೂಕುಸಿತದ ತಾಣವಾಗಿ ಬದಲಾಗಲಿದೆ. ಕಲ್ಕಾಜಿ ನಿವಾಸಿಗಳು ಸಹ ಎಂಸಿಡಿಯಿಂದ ಅಸಮಾಧಾನಗೊಂಡಿದ್ದಾರೆ. ಬಿಜೆಪಿ ನೇತೃತ್ವದ ಎಂಸಿಡಿ ಇಡೀ ದೆಹಲಿಯನ್ನು "ಡಂಪಿಂಗ್ ಗ್ರೌಂಡ್" ಆಗಿ ಮಾರ್ಪಡಿಸಿದೆ ಎಂದು ವಾಗ್ದಾಳಿ ನಡೆಸಿದರು.

ತಿಲಕ್ ನಗರ ಪ್ರದೇಶದಲ್ಲಿ ಕಸದ ರಾಶಿಯ ಬಳಿ ಪ್ರತಿಭಟನೆ ನಡೆಸಿದ ಶಾಸಕ ಜರ್ನೈಲ್ ಸಿಂಗ್, ನಗರದಿಂದ ಕಸದ ಬೆಟ್ಟಗಳನ್ನು ತೆಗೆದುಹಾಕಲು ಎಂಸಿಡಿಯಿಂದ ಬಿಜೆಪಿಯನ್ನು"ತೆಗೆದುಹಾಕಬೇಕು" ಎಂದು ಹೇಳಿದರು.

SCROLL FOR NEXT