ದೇಶ

ಬಿಹಾರದಲ್ಲಿ ಅಮಿತ್ ಶಾ ಗಲಭೆಯನ್ನು ಪ್ರಚೋದಿಸುತ್ತಾರೆ; ಜೆಡಿಯು 

Srinivas Rao BV

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಹಾರದಲ್ಲಿ ಗಲಭೆಯನ್ನು ಪ್ರಚೋದಿಸಲು ಯತ್ನಿಸುತ್ತಾರೆ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಆರೋಪಿಸಿದ್ದಾರೆ. 

ಈ ತಿಂಗಳಾಂತ್ಯಕ್ಕೆ ಅಮಿತ್ ಶಾ ಬಿಹಾರಕ್ಕೆ ಭೇಟಿ ನೀಡಲಿದ್ದಾರೆ. ಅಮಿತ್ ಶಾ ಭೇಟಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಅಮಿತ್ ಶಾ ಬಿಜೆಪಿಗೆ ಲಾಭವಾಗುವಂತೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಅಮಿತ್ ಶಾ ಇಲ್ಲಿಗೆ ಭೇಟಿ ನೀಡಿದಾಗ ಅವರು ಕೋಮು ಗಲಭೆಗಳನ್ನು ಪ್ರಚೋದಿಸಲು ಯತ್ನಿಸುತ್ತಾರೆ. ಆದರೆ ಬಿಹಾರದ ಮಂದಿ ಎಚ್ಚರಿಕೆಯಿಂದ ಇರಲಿದ್ದಾರೆ. ಅಮಿತ್ ಶಾ ಕೋಮು ಧ್ರುವೀಕರಣದಲ್ಲಿ ವಿಫಲರಾಗಲಿದ್ದಾರೆ ಎಂದು ರಾಜೀವ್ ರಂಜನ್ ಸಿಂಗ್ ಹೇಳಿದ್ದಾರೆ. ಅಮಿತ್ ಶಾ ಸೆ.23-24 ರಂದು ಮುಸ್ಲಿಮರು ಹೆಚ್ಚಿರುವ ಕಿಶನ್ ಗಂಜ್, ಪುರ್ನಿಯಾಗಳಿಗೆ ಭೇಟಿ ನೀಡಲಿದ್ದಾರೆ. 

ಬಿಹಾರದಲ್ಲಿ ನಿತೀಶ್ ಕುಮಾರ್ ಏಕಾ ಏಕಿ ಎನ್ ಡಿಎಯೊಂದಿಗಿನ ಮೈತ್ರಿ ಮುರಿದು ಆರ್ ಜೆಡಿ, ಕಾಂಗ್ರೆಸ್ ಜೊತೆ ಸೇರಿ ಹೊಸ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದರು. ಇದರಿಂದ ಬಿಜೆಪಿಗೆ ತೀವ್ರ ಹಿನ್ನೆಡೆಯುಂಟಾಗಿದ್ದು, ಪಕ್ಷದಲ್ಲಿ ರಾಜಕೀಯ ತಂತ್ರಗಾರಿಕೆಗೆ ಖ್ಯಾತಿ ಪಡೆದಿರುವ ಅಮಿತ್ ಶಾ ಈಗ ಭೇಟಿ ನೀಡುತ್ತಿರುವುದು ಚುನಾವಣೆಗಳ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.
 
ಈ ನಡುವೆ ಬಿಹಾರ ಸಿಎಂ, ಅರವಿಂದ್ ಕೇಜ್ರಿವಾಲ್ ಮತ್ತು ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರನ್ನು ಆ.04 ರಂದು ಭೇಟಿ ಮಾಡಲಿದ್ದಾರೆ. 

SCROLL FOR NEXT