ದೇಶ

ರಾಜ್ ಪತ್ ಈಗ ಇತಿಹಾಸ, 'ಕರ್ತವ್ಯ ಪಥದ ರೂಪದಲ್ಲಿ ಹೊಸ ಯುಗ ಆರಂಭ': ಪ್ರಧಾನಿ ಮೋದಿ

Lingaraj Badiger

ನವದೆಹಲಿ: ರಾಜ್ ಪಥ್ ಗುಲಾಮಿತನದ ಸಂಕೇತವಾಗಿತ್ತು. ಕಿಂಗ್ಸ್ ವೇ ಇತಿಹಾಸ ಪುಟ ಸೇರಿದೆ. ಈಗ ಕರ್ತವ್ಯ ಪಥದ ರೂಪದಲ್ಲಿ ಹೊಸ ಯುಗ ಆರಂಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಇಂದು ಸಂಜೆ ದೆಹಲಿಯ ಹೃದಯಭಾಗದಲ್ಲಿರುವ ಇಂಡಿಯಾ ಗೇಟ್‌ನಲ್ಲಿ ಸ್ಥಾಪಿಸಲಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 28 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಬಳಿಕ ನವೀಕೃತಗೊಂಡ ಕರ್ತವ್ಯ ಪಥ್(ಹಿಂದೆ ರಾಜ್ ಪಥ್ ಎಂದು ಕರೆಯಲಾಗುತ್ತಿತ್ತು) ಮಾರ್ಗವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ ಪಥ್ ದಬ್ಬಾಳಿಕೆ ಮತ್ತು ಗುಲಾಮಗಿರಿಯ ಸಂಕೇತವಾಗಿದೆ. ಇಂದು ವಾಸ್ತುಶೈಲಿ ಬದಲಾಗಿದೆ. ಈಗ ಸಂಸದರು, ಸಚಿವರು ಕರ್ತವ್ಯದ ಹಾದಿಯಲ್ಲಿ ನಡೆದಾಗ ಅವರಿಗೆ ತಮ್ಮ ಕರ್ತವ್ಯದ ಪ್ರಜ್ಞೆ ಮೂಡುತ್ತದೆ" ಎಂದು ಹೇಳಿದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಅಖಂಡ ಭಾರತದ ಮೊದಲ ಪ್ರಧಾನಿಯಾಗಿದ್ದು, ಅವರು 1947 ಕ್ಕಿಂತ ಮುಂಚೆಯೇ ಅಂಡಮಾನ್ ಅನ್ನು ವಿಮೋಚನೆಗೊಳಿಸಿದ್ದರು ಮತ್ತು ತ್ರಿವರ್ಣ ಧ್ವಜವನ್ನು ಹಾರಿಸಿದ್ದರು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಸ್ವಾತಂತ್ರ್ಯದ ನಂತರ ಭಾರತವು ನೇತಾಜಿ ಅವರ ಮಾರ್ಗವನ್ನು ಅನುಸರಿಸಿದ್ದರೆ ಇಂದು ದೇಶವು ಇನ್ನೂ ಉನ್ನತ ಸ್ಥಾನದಲ್ಲಿರುತ್ತಿತ್ತು. ಆದರೆ ದುರದೃಷ್ಟವಶಾತ್, ಸ್ವಾತಂತ್ರ್ಯದ ನಂತರ ನಮ್ಮ ಈ ಮಹಾನ್ ವೀರನನ್ನು ಮರೆತುಬಿಡಲಾಯಿತು. ಅವರ ಚಿಂತನೆಗಳ, ಅವರಿಗೆ ಸಂಬಂಧಿಸಿದ ಚಿಹ್ನೆಗಳನ್ನು ಸಹ ನಿರ್ಲಕ್ಷಿಸಲಾಗಿದೆ" ಎಂದು ಪ್ರಧಾನಿ ಹೇಳಿದರು.

SCROLL FOR NEXT