ದೇಶ

"ಒಳ ಉಡುಪು ಖರೀದಿಗೆ ದೆಹಲಿಗೆ ಹೋಗಿದ್ದೆ": ಗೈರಾಗಿದ್ದನ್ನು ಪ್ರಶ್ನಿಸಿದ್ದಕ್ಕೆ ಜಾರ್ಖಂಡ್ ಸಿಎಂ ಸಹೋದರನ ಉತ್ತರ

Srinivas Rao BV

ಜಾರ್ಖಂಡ್: ಇತ್ತೀಚಿನ ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿರದೇ ಇದ್ದಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಜಾರ್ಖಂಡ್ ಸಿಎಂ ಸಹೋದರ ಬಸಂತ್ ಸೊರೇನ್ ವಿಚಿತ್ರ ಹೇಳಿಕೆ ನೀಡಿದ್ದಾರೆ. 

ಜಾರ್ಖಂಡ್ ನಲ್ಲಿ ರಾಜಕೀಯ ಅಸ್ಥಿರತೆ ಉಂಟಾದಗ ದೆಹಲಿಗೆ ಪ್ರಯಾಣಿಸಿದ್ದರ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನನ್ನ ಬಳಿ ಒಳ ಉಡುಪುಗಳು ಇರಲಿಲ್ಲ. ಆದ್ದರಿಂದ ಅದನ್ನು ಖರೀದಿಸಲು ಹೋಗಿದ್ದೆ ನಾನು ದೆಹಲಿಯಿಂದಲೇ ಒಳ ಉಡುಪುಗಳನ್ನು ಖರೀದಿಸುತ್ತೆನೆ, ರಾಜಕೀಯ ಬಿಕ್ಕಟ್ಟು ಸಾಮಾನ್ಯ. ಬೆಳವಣಿಗೆಗಳು ಸಂಭವಿಸುತ್ತಲೇ ಇರುತ್ತವೆ.

 
ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಹಾಗೂ ದುಮ್ಕಾದ ಶಾಸಕರೂ ಆಗಿರುವ ಬಸಂತ್ ಸೊರೇನ್ ತಮ್ಮ ಕ್ಷೇತ್ರದ ಇಬ್ಬರು ಸಂತ್ರಸ್ತರನ್ನು ಭೇಟಿ ಮಾಡಿದ್ದಾರೆ. ದುಮ್ಕದಲ್ಲಿ ಇತ್ತೀಚೆಗೆ ಎರಡು ಅಹಿತಕರ ಘಟನೆ ಸಂಭವಿಸಿ ಸಾವು ಸಂಭವಿಸಿತ್ತು. 

ಯುವತಿಯೋರ್ವಳ ಮೇಲೆ ಶಾರೂಖ್ ಎಂಬಾತ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರ ಪರಿಣಾಮ ಯುವತಿ ಸಾವನ್ನಪ್ಪಿದರೆ, ಇದೇ ವೇಳೆ 14 ವರ್ಷದ ಬುಡಕಟ್ಟು ಯುವತಿಯ ಮೇಲೆ ಅತ್ಯಾಚಾರ ನಡೆದಿದ್ದು, ಸಂತ್ರಸ್ತೆಯ ಕುಟುಂಬದವರನ್ನು ಭೇಟಿ ಮಾಡಿರುವ ಶಾಸಕರು ಮುಂದಿನ ದಿನಗಳಲ್ಲಿ ತಮ್ಮ ಕ್ಷೇತ್ರದಲ್ಲಿ ಇಂತಹ ಅನಾಹುತ ಆಗಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

SCROLL FOR NEXT