ಪ್ರಾತಿನಿಧಿಕ ಚಿತ್ರ 
ದೇಶ

ಕೇರಳ: ಓಣಂ ಸಂದರ್ಭ ಒಂದು ವಾರದಲ್ಲಿ 624 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟ ಮಾಡಿದ ಬೆವ್ಕೋ

ಈ ಓಣಂ ಋತುವಿನಲ್ಲಿ ಕೇರಳ ರಾಜ್ಯದ ಬೊಕ್ಕಸಕ್ಕೆ 624 ಕೋಟಿ ರೂಪಾಯಿಗಳನ್ನು ಬೆವ್ಕೊ ಎಂದೂ ಕರೆಯಲಾಗುವ ಕೇರಳ ರಾಜ್ಯ ಪಾನೀಯಗಳ ನಿಗಮ (ಕೆಎಸ್‌ಬಿಸಿ) ನೀಡಿದ್ದು, ಸೆಪ್ಟೆಂಬರ್ 1-7 ರವರೆಗೆ ದಾಖಲೆಯ ಮದ್ಯ ಮಾರಾಟವಾಗಿದೆ.

ತಿರುವನಂತಪುರಂ: ಈ ಓಣಂ ಋತುವಿನಲ್ಲಿ ಕೇರಳ ರಾಜ್ಯದ ಬೊಕ್ಕಸಕ್ಕೆ 624 ಕೋಟಿ ರೂಪಾಯಿಗಳನ್ನು ಬೆವ್ಕೊ ಎಂದೂ ಕರೆಯಲಾಗುವ ಕೇರಳ ರಾಜ್ಯ ಪಾನೀಯಗಳ ನಿಗಮ (ಕೆಎಸ್‌ಬಿಸಿ) ನೀಡಿದ್ದು, ಸೆಪ್ಟೆಂಬರ್ 1-7 ರವರೆಗೆ ದಾಖಲೆಯ ಮದ್ಯ ಮಾರಾಟವಾಗಿದೆ.

ಕೇರಳದ ಐದು ಮಳಿಗೆಗಳಾದ ಕೊಲ್ಲಂನ ಆಶ್ರಮಮ್, ತಿರುವನಂತಪುರಂನ ಪವರ್ ಹೌಸ್ ರಸ್ತೆ, ತ್ರಿಶ್ಶೂರ್‌ನ ಇರಿಂಜಲಕುಡ, ಚೆರ್ತಲದ ಕೋರ್ಟ್ ಜಂಕ್ಷನ್ ಮತ್ತು ಕಣ್ಣೂರಿನ ಪಯ್ಯನ್ನೂರ್‌ಗಳಲ್ಲಿ ಸೆಪ್ಟೆಂಬರ್ 7 ರ 'ಉತ್ರಾಡಮ್ ದಿನ'ದಂದು ಅಂದರೆ ಓಣಂಗೂ ಒಂದು ದಿನ ಮೊದಲು ತಲಾ ಒಂದು ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ.

ಆಶ್ರಮಮ್ ಔಟ್ಲೆಟ್‌ನಲ್ಲಿ ಬುಧವಾರದಂದು 1.06 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದ್ದು, ಇದು ರಾಜ್ಯದಲ್ಲಿಯೇ ಅತಿ ಹೆಚ್ಚು ಎನ್ನಲಾಗಿದೆ.

ಈ ಉತ್ರಾಡಮ್ ದಿನದಂದು ಬೆವ್ಕೋ ದಾಖಲೆಯ 118 ಕೋಟಿ ರೂಪಾಯಿಯ ಮದ್ಯ ಮಾರಾಟ ಮಾಡಿದೆ. ಕಳೆದ ವರ್ಷ ಇದು 81 ಕೋಟಿ ರೂಪಾಯಿ ಆಗಿತ್ತು. ಅಂದು ಕೆಲವು ಮಳಿಗೆಗಳಲ್ಲಿ 10,000ಕ್ಕೂ ಹೆಚ್ಚು ಜನರು ಸೇರಿದ್ದರು. ಸೆಪ್ಟೆಂಬರ್ 1 ರಿಂದ 11 ರವರೆಗೆ ಓಣಂ ಸೀಸನ್. ಹೀಗಾಗಿ ಸೆಪ್ಟೆಂಬರ್ 1 ರಿಂದ 7 ರ ಅವಧಿಯಲ್ಲಿ ನಾವು ದಾಖಲೆಯ 624 ಕೋಟಿ ರೂಪಾಯಿಯ ಮಾರಾಟವನ್ನು ಹೊಂದಿದ್ದೇವೆ ಎಂದು ಬೆವ್ಕೊ ಸಿಎಂಡಿ ಯೋಗೇಶ್ ಗುಪ್ತಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಕಳೆದ ವರ್ಷ ಓಣಂ ಋತುವಿನಲ್ಲಿ 561 ಕೋಟಿ ರೂ. ಆಗಿತ್ತು. ಆದರೆ, ಈ ಬಾರಿ ಓಣಂ ಸೀಸನ್ ಮುಗಿಯದಿದ್ದರೂ ಈಗಾಗಲೇ 634 ಕೋಟಿ ರೂಪಾಯಿಯ ಮದ್ಯ ಮಾರಾಟವಾಗಿದೆ. 'ಕಳೆದ ವರ್ಷಕ್ಕೆ ಹೋಲಿಸಿದರೆ ಈಗಾಗಲೇ ಶೇ 30 ರಷ್ಟು ಹೆಚ್ಚಳವಾಗಿದ್ದು, ಈ ಓಣಂ ಋತುವಿನ ಅಂತ್ಯದ ವೇಳೆಗೆ ನಾವು 750 ಕೋಟಿ ರೂಪಾಯಿಗಳ ಮಾರಾಟವನ್ನು ನಿರೀಕ್ಷಿಸಿದ್ದೇವೆ' ಎಂದು ಗುಪ್ತಾ ಹೇಳಿದರು.

ರಾಜ್ಯಾದ್ಯಂತ 301 ಸರ್ಕಾರಿ ಮದ್ಯದಂಗಡಿಗಳಿವೆ. 2020 ರಲ್ಲಿ ಸರ್ಕಾರವು ಹೆಚ್ಚುವರಿ ಆದಾಯವನ್ನು ಪಡೆಯಲು ಮದ್ಯದ ಬೆಲೆಯನ್ನು ಶೇ 10-35 ರಷ್ಟು ಹೆಚ್ಚಿಸಿತು.

ಸದ್ಯ ಐಎಂಎಲ್‌ಎಫ್ (ಭಾರತೀಯ ನಿರ್ಮಿತ ವಿದೇಶಿ ಮದ್ಯ) ಮೇಲಿನ ಮಾರಾಟ ತೆರಿಗೆಯು 400 ರೂ.ವರೆಗಿನ ಬ್ರಾಂಡ್‌ಗಳಿಗೆ ಶೇ 237 ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಮದ್ಯಕ್ಕೆ ಶೇ 247 ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್