ದೇಶ

ಜಮ್ಮು ಮತ್ತು ಕಾಶ್ಮೀರ: ಲಷ್ಕರ್ ಉಗ್ರ ಜಾಲ ಪತ್ತೆ, ಇಬ್ಬರ ಬಂಧನ

Srinivasamurthy VN

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶುಕ್ರವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಲಷ್ಕರ್-ಇ-ತೊಯ್ಬಾ ಉಗ್ರ ಜಾಲವನ್ನು ಪತ್ತೆ ಮಾಡಿದ್ದು, ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಸೋಪೋರ್‌ನಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಸೋಪೋರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಗೌಸಿಯಾಬಾದ್ ಚೌಕ್ ಚಿಂಕಿಪೋರಾದಲ್ಲಿ ಸೇನೆ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಗಳ ಸಮನ್ವಯದಲ್ಲಿ ಜಂಟಿ ನಾಕಾ (ಚೆಕ್‌ಪಾಯಿಂಟ್) ಅನ್ನು ಸ್ಥಾಪಿಸಲಾಗಿದೆ. ತಪಾಸಣೆಯ ಸಮಯದಲ್ಲಿ, ಡೇಂಜರ್‌ಪೋರಾದಿಂದ ಚಿಂಕಿಪೋರಾ ಕಡೆಗೆ ಬರುತ್ತಿದ್ದ ಇಬ್ಬರು ವ್ಯಕ್ತಿಗಳ ಅನುಮಾನಾಸ್ಪದ ಚಲನವಲನವನ್ನು ಗಮನಿಸಲಾಯಿತು. ನಂತರ ಅವರನ್ನು ನಿಲ್ಲಿಸಿ ವಿಚಾರಿಸಿದಾಗ ಅವರು ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದರು. ಈ ವೇಳೆ ನಂತರ ಭದ್ರತಾ ಪಡೆಗಳು ಇಬ್ಬರನ್ನು ಬಂಧಿಸಿದ್ದಾರೆ.

ಅಂತೆಯೇ ಅವರ ಬಳಿಯಿದ್ದ ಎರಡು ಗ್ರೆನೇಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಬಂಡಿಪೋರಾ ನಿವಾಸಿ ಶಾಕಿರ್ ಅಕ್ಬರ್ ಗೋಜ್ರೆ ಮತ್ತು ಬಾರಾಮುಲ್ಲಾ ನಿವಾಸಿ ಮೊಹ್ಸಿನ್ ವಾನಿ ಎಂದು ಗುರುತಿಸಲಾಗಿದೆ. ಬಂಧಿತರು ನಿಷೇಧಿತ ಸಂಘಟನೆ ಎಲ್‌ಇಟಿ ಸಂಘಟನೆಯ ಸ್ಥಳೀಯ ಕಾರ್ಮಿಕರಾಗಿದ್ದು, ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ದಾಳಿ ನಡೆಸಲು ನಿರಂತರ ಅವಕಾಶದ ಹುಡುಕಾಟದಲ್ಲಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅದರಂತೆ, ಸಂಬಂಧಿತ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಸೋಪೋರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಯ ಸಂದರ್ಭದಲ್ಲಿ, ಬಂಧಿತ ಜೋಡಿಯು ಇತರೆ ಶಂಕಿತ ಉಗ್ರರ ಹೆಸರುಗಳನ್ನು ಬಹಿರಂಗಪಡಿಸಿವೆ. ಇದರಲ್ಲಿ ಒಂದು ಚೈನೀಸ್ ಪಿಸ್ತೂಲ್, ಒಂದು ಪಿಸ್ತೂಲ್ ಮ್ಯಾಗಜೀನ್, ಏಳು ಸುತ್ತು ಜೀವಂತ ಗುಂಡುಗಳು,AK 47 ಬಂದೂಕಿನ  25 ಸುತ್ತು ಗುಂಡುಗಳು ಮತ್ತು ಸ್ಫೋಟಕಗಳು ಸೇರಿವೆ.
 

SCROLL FOR NEXT