ಸಚಿನ್ ಪೈಲಟ್ 
ದೇಶ

ನನ್ನ ಮೇಲೆ ಶೂ ಎಸೆದು ಪೈಲಟ್ ಸಿಎಂ ಆಗುವುದಾದರೆ ಅದನ್ನೇ ಮಾಡಲಿ: ರಾಜಸ್ಥಾನ ಸಚಿವ ಚಂದ್ನಾ

ಗುರ್ಜರ್ ನಾಯಕ ಕಿರೋರಿ ಸಿಂಗ್ ಬೈನ್ಸ್ಲಾ ಅವರ ಚಿತಾಭಸ್ಮವನ್ನು ಪುಷ್ಕರ ಸರೋವರದಲ್ಲಿ  ವಿಸರ್ಜಿಸುವ ಮುನ್ನ ನಡೆದ ಬೃಹತ್ ಸಮಾವೇಶದಲ್ಲಿ ಸೋಮವಾರ ಈ ಘಟನೆ ನಡೆದಿದೆ. ಆದರೆ, ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ.

ಜೈಪುರ: ಸಚಿನ್ ಪೈಲಟ್ ಬೆಂಬಲಿಗರು ತಾವು ಇದ್ದ ವೇದಿಕೆಯತ್ತ ಪಾದರಕ್ಷೆಗಳನ್ನು ಎಸೆದಿದ್ದಕ್ಕೆ ರಾಜಸ್ಥಾನದ ಸಚಿವ ಅಶೋಕ್ ಚಂದ್ನಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ರಾಜ್ಯ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರು ತಮ್ಮ ಮೇಲೆ ಬೂಟುಗಳನ್ನು ಎಸೆದು ಮುಖ್ಯಮಂತ್ರಿಯಾಗಲು ಸಾಧ್ಯವಾದರೆ, ಅವರು ಅದನ್ನು ಮಾಡಲಿ ಎಂದು ಹೇಳಿದ್ದಾರೆ.

ಬೂಟು ಎಸೆದ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಕಾಂಗ್ರೆಸ್ ಮತ್ತು ಬಿಜೆಪಿಯ ಇತರ ನಾಯಕರೊಂದಿಗೆ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ರಾಜೇಂದ್ರ ರಾಥೋಡ್ ಅವರ ವಿರುದ್ದವೂ ವಾಗ್ದಾಳಿ ನಡೆಸಿದ್ದಾರೆ.

ಗುರ್ಜರ್ ನಾಯಕ ಕಿರೋರಿ ಸಿಂಗ್ ಬೈನ್ಸ್ಲಾ ಅವರ ಚಿತಾಭಸ್ಮವನ್ನು ಪುಷ್ಕರ ಸರೋವರದಲ್ಲಿ  ವಿಸರ್ಜಿಸುವ ಮುನ್ನ ನಡೆದ ಬೃಹತ್ ಸಮಾವೇಶದಲ್ಲಿ ಸೋಮವಾರ ಈ ಘಟನೆ ನಡೆದಿದೆ. ಆದರೆ, ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಪೈಲಟ್ ಮತ್ತು ಚಂದ್ನಾ ಇಬ್ಬರೂ ಗುರ್ಜರ್ ಸಮುದಾಯದವರು.

ಕೈಗಾರಿಕಾ ಸಚಿವೆ ಶಕುಂತಲಾ ರಾವತ್, ಕ್ರೀಡಾ ಸಚಿವ ಚಂದ್ನಾ ಮತ್ತು ಇತರ ಕಾಂಗ್ರೆಸ್ ನಾಯಕರು ವೇದಿಕೆಗೆ ಬಂದ ತಕ್ಷಣ, ನೆರೆದಿದ್ದ ಪೈಲಟ್ ಬೆಂಬಲಿಗರು ಮಾಜಿ ಉಪಮುಖ್ಯಮಂತ್ರಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದಿದ್ದಕ್ಕಾಗಿ ಅಸಮಾಧಾನ ವ್ಯಕ್ತಪಡಿಸಿದರು. ಅವರಲ್ಲಿ ಕೆಲವರು ಶೂಗಳನ್ನು ವೇದಿಕೆಯತ್ತ ಎಸೆದರು. ಆದರೆ, ವೇದಿಕೆ ದೂರವಿದ್ದದ್ದರಿಂದ ಪಾದರಕ್ಷೆಗಳು ಯಾರಿಗೂ ಸೋಕಲಿಲ್ಲ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರನ್ನು ಕರೆಸಬೇಕಾಯಿತು.

ಈ ಹಿಂದೆ ಮೀಸಲಾತಿಗಾಗಿ ಗುರ್ಜರ್‌ಗಳ ಚಳುವಳಿಯ ಸಂದರ್ಭದಲ್ಲಿ ಪೋಲೀಸರ ಗುಂಡಿಗೆ ಬಲಿಯಾದ 70 ಕ್ಕೂ ಹೆಚ್ಚು ಜನರ ಕುಟುಂಬ ಸದಸ್ಯರು ವೇದಿಕೆಯಲ್ಲಿದ್ದರು. ಈ ಘಟನೆ ಬಗ್ಗೆ ಚಂದ್ನಾ ಟ್ವಿಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'72 ಮಂದಿಯ ಹತ್ಯೆಗೆ ಆದೇಶ ನೀಡಿದ ಅಂದಿನ ಸಂಪುಟ ಸದಸ್ಯ ರಾಜೇಂದ್ರ ರಾಥೋಡ್ ವೇದಿಕೆ ಮೇಲೆ ಬಂದಾಗ ಚಪ್ಪಾಳೆ ತಟ್ಟಲಾಯಿತು ಮತ್ತು ಯಾರ ಕುಟುಂಬ ಸದಸ್ಯರು ಆಂದೋಲನದಲ್ಲಿ ಬಾಗವಹಿಸಿ ಜೈಲಿಗೆ ಹೋದರೋ ಅಂತವರ ಮೇಲೆ ಶೂ ಎಸೆಯಲಾಯಿತು' ಎಂದು ಸಂಜೆ ಟ್ವೀಟ್ ಮಾಡಿದ್ದಾರೆ. ಇದಾದ ಕೆಲವು ಗಂಟೆಗಳ ನಂತರ, ಅವರು ಪೈಲಟ್‌ಗೆ ಸವಾಲು ಹಾಕುವ ಮತ್ತೊಂದು ಟ್ವೀಟ್ ಮಾಡಿದರು.

'ನನ್ನ ಮೇಲೆ ಶೂ ಎಸೆದು ಸಚಿನ್ ಪೈಲಟ್ ಮುಖ್ಯಮಂತ್ರಿಯಾದರೆ, ಅವರು ಅದನ್ನು ಶೀಘ್ರದಲ್ಲೇ ಮಾಡಬೇಕು. ಏಕೆಂದರೆ ಇಂದು ನನಗೆ ಹೋರಾಡಬೇಕು ಎಂದು ಅನ್ನಿಸುತ್ತಿಲ್ಲ. ನಾನು ಹೋರಾಟಕ್ಕೆ ಬರುವ ದಿನ ಒಬ್ಬನೇ ಉಳಿಯುತ್ತಾರೆ ಮತ್ತು ನನಗೆ ಇದು ಬೇಡ' ಎಂದು ಅವರು ಹೇಳಿದರು. ಈ ವಿವಾದದ ಬಗ್ಗೆ ಪೈಲಟ್‌ ಅವರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ತಮ್ಮನ್ನು ಉಲ್ಲೇಖಿಸಿ ಚಂದ್ನಾ ಅವರು ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯಿಸಿದ ರಾಥೋಡ್, 'ಇತರರನ್ನು ಆರೋಪಿಸುವ ಮೊದಲು, ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ಪರಿಸ್ಥಿತಿ ಏಕೆ ಉದ್ಭವಿಸಿದೆ ಎಂಬುದನ್ನು ನೋಡಬೇಕು. ನೀವು ಇತರರ ಮಾಗಿದ ಬೆಳೆಯನ್ನು ನಿಮ್ಮ ಹೊಲಕ್ಕೆ ಕೊಂಡೊಯ್ದರೆ, ಫಲಿತಾಂಶವು ಹೀಗಿರುತ್ತದೆ. ಈಗ ಮುಂದೆ ನೋಡಿ ಮತ್ತು ಏನಾಗುತ್ತದೆ ಎಂದು ನೋಡಿ' ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಚಂದ್ನಾ, 2007ರ ‘ಗೋಳಿಕಾಂಡ’ ಸರ್ಕಾರದಲ್ಲಿ ನೀವು ಮಂತ್ರಿಯಾಗಿರಲಿಲ್ಲವೇ? ನಿಮ್ಮ ಅನುಭವ ಮತ್ತು ವಯಸ್ಸು ನನಗಿಗಿಂತಲೂ ಹೆಚ್ಚಿದೆ. ಹಾಗಾಗಿ ನಾನು ಪ್ರತಿಕ್ರಿಯಿಸುವುದಿಲ್ಲ, ನಿನ್ನೆ ಬೆಳೆ ಕಟಾವು ಮಾಡಲು ಬಂದವರನ್ನು ಎಲ್ಲರೂ ನೋಡಿದ್ದಾರೆ' ಎಂದಿದ್ದಾರೆ.

ಪೈಲಟ್‌ಗೆ ಸಾಮೂಹಿಕ ಸಭೆಗೆ ಆಹ್ವಾನ ನೀಡಲಾಯಿತು ಆದರೆ ಅವರು ಬರಲಿಲ್ಲ ಎಂದು ಕಿರೋರಿ ಸಿಂಗ್ ಬೈನ್ಸ್ಲಾ ಅವರ ಪುತ್ರ ವಿಜಯ್ ಬೈನ್ಸ್ಲಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT