ದೇಶ

ಚೀನಾ ಪಾಲಾಗಿರುವ ಪ್ರದೇಶವನ್ನು ಹೇಗೆ ಹಿಂಪಡೆಯಲಾಗುತ್ತದೆ? ಸರ್ಕಾರ ವಿವರಿಸುತ್ತಾ?: ರಾಹುಲ್ ಗಾಂಧಿ

Srinivas Rao BV

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಹೋರಾಟವೇ ಇಲ್ಲದೇ ಮೋದಿ ಚೀನಾಗೆ 1,000 ಚದರ ಕಿಲೋಮೀಟರ್ ನಷ್ಟು ಭಾರತದ ಭೂಮಿಯನ್ನು ಚೀನಾಗೆ ಒಪ್ಪಿಸಿದ್ದಾರೆ, ಸರ್ಕಾರ ಇದನ್ನು ಹೇಗೆ ಹಿಂಪಡೆಯಲಿದೆ? ಎಂದು ಪ್ರಶ್ನಿಸಿದ್ದಾರೆ.

ಏಪ್ರಿಲ್ 2020 ರಲ್ಲಿದ್ದಂತೆ ಗಡಿಯಲ್ಲಿನ ಸ್ಥಿತಿಯನ್ನು ಮರುಸ್ಥಾಪಿಸುವ ಭಾರತದ ಬೇಡಿಕೆಯನ್ನು ಒಪ್ಪಿಕೊಳ್ಳಲು ಚೀನಾ ನಿರಾಕರಿಸಿದೆ ಎಂದೂ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. 

ಈಶಾನ್ಯ ಲಡಾಖ್ ನ ಪ್ಯಾಟ್ರೋಲಿಂಗ್ ಪಾಯಿಂಟ್ 15 ರಲ್ಲಿ ಸೇನಾ ಹಿಂತೆಗೆತ ಪ್ರಕ್ರಿಯೆ ಪೂರ್ಣಗೊಳ್ಳುತ್ತಿರುವ ಪ್ರಕ್ರಿಯೆಯನ್ನು ಉಭಯ ದೇಶಗಳ ಸೇನೆಗಳು ಪರಿಶೀಲನೆ ನಡೆಸಿದ ಬೆನ್ನಲ್ಲೇ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.

ಚೀನಾ ಭಾರತದ ಭೂಮಿಯನ್ನು ಕಬಳಿಸಿರುವ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಸರ್ಕಾರ ದೇಶದ ಭೂಮಿಯನ್ನು ಹೇಗೆ ವಾಪಸ್ ಪಡೆಯಲಿದೆ ಎಂಬ ಬಗ್ಗೆ ವಿವರಣೆ ನೀಡಲಿದೆಯೇ? ಎಂದು ಪ್ರಶ್ನಿಸಿದ್ದಾರೆ. ಈಶಾನ್ಯ ಲಡಾಖ್ ನಲ್ಲಿ 2020 ರ ಮೇ 05 ರಂದು ಗಡಿ ಭಾಗದಲ್ಲಿ ಸಂಘರ್ಷ ಉಂಟಾಗಿತ್ತು.

SCROLL FOR NEXT