ಸಿಜೆಐ ಯುಯು ಲಲಿತ್ 
ದೇಶ

ನ್ಯಾಯಾಧೀಶರ ನಡುವೆ ಭಿನ್ನಾಭಿಪ್ರಾಯ: ವರದಿ ತಳ್ಳಿ ಹಾಕಿದ ಸಿಜೆಐ ಲಲಿತ್

ಹೊಸ ಪ್ರಕರಣಗಳ ಪಟ್ಟಿ ವ್ಯವಸ್ಥೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ನಡುವಿನ ಯಾವುದೇ ಭಿನ್ನಾಭಿಪ್ರಾಯವನ್ನು ಸಿಜೆಐ ಯುಯು ಲಲಿತ್ ಗುರುವಾರ ತಳ್ಳಿ ಹಾಕಿದ್ದಾರೆ ಮತ್ತು 'ಎಲ್ಲ ನ್ಯಾಯಾಧೀಶರು ಒಂದೇ ಅಭಿಪ್ರಾಯ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.

ನವದೆಹಲಿ: ಹೊಸ ಪ್ರಕರಣಗಳ ಪಟ್ಟಿ ವ್ಯವಸ್ಥೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ನಡುವಿನ ಯಾವುದೇ ಭಿನ್ನಾಭಿಪ್ರಾಯವನ್ನು ಸಿಜೆಐ ಯುಯು ಲಲಿತ್ ಗುರುವಾರ ತಳ್ಳಿ ಹಾಕಿದ್ದಾರೆ ಮತ್ತು 'ಎಲ್ಲ ನ್ಯಾಯಾಧೀಶರು ಒಂದೇ ಅಭಿಪ್ರಾಯ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.

ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಸಿಜೆಐ ಲಲಿತ್, ನಾವು ಪಟ್ಟಿ ಮಾಡಲು ಹೊಸ ಮಾರ್ಗವನ್ನು ತೆಗೆದುಕೊಂಡಿದ್ದೇವೆ. ವರದಿ  ಸರಿಯಾದ ಸ್ಥಿತಿಯಲ್ಲಿ ಇಲ್ಲ. ಎಲ್ಲಾ ನ್ಯಾಯಾಧೀಶರು ಸಂಪೂರ್ಣವಾಗಿ ಒಂದೇ ಅಭಿಪ್ರಾಯ ಹೊಂದಿದ್ದಾರೆ. ಹೊಸ ಪಟ್ಟಿ ವ್ಯವಸ್ಥೆ ಪ್ರಗತಿಯಲ್ಲಿದೆ. ಇದು ಪರಿಚಯಿಸಿದಾಗಿನಿಂದ 5,200 ಪ್ರಕರಣಗಳನ್ನು ಇತ್ಯರ್ಥಪಡಿಸಿರುವ ಭರವಸೆಯಿದೆ ಎಂದು ಅವರು ವಿವರಿಸಿದರು.

ಹೊಸ ಪಟ್ಟಿ ವ್ಯವಸ್ಥೆಯು ವಿಚಾರಣೆಗೆ ನಿಗದಿಪಡಿಸಿದ ವಿಷಯಗಳನ್ನು ತೆಗೆದುಕೊಳ್ಳಲು ಸಾಕಷ್ಟು ಸಮಯವನ್ನು ನೀಡುವುದಿಲ್ಲ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಬುಧವಾರ ಟೀಕಿಸಿದ್ದರು. ಮಧ್ಯಾಹ್ನ' ಅಧಿವೇಶನದ ಅವಧಿಯಲ್ಲಿ ಹಲವಾರು ವಿಷಯಗಳಿರುವುದರಿಂದ ಅನೇಕ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಲ್ಲ ಎಂದು ನ್ಯಾಯಮೂರ್ತಿ ಅಭಯ್ ಓಕಾ ಅವರನ್ನೊಳಗೊಂಡ ಪೀಠವು ಹೇಳಿದೆ.

ಸಿಜೆಐ ಹುದ್ದೆ ವಹಿಸಿಕೊಂಡ ನಂತರ, ವಿವಿಧ ದಿನಗಳಲ್ಲಿ ಉನ್ನತ ನ್ಯಾಯಾಲಯದಲ್ಲಿ ಪ್ರಕರಣಗಳ ವಿಚಾರಣೆ ಲಲಿತ್  ಪರಿಚಯಿಸಿದ ಬದಲಾವಣೆಗಳಲ್ಲಿ ಒಂದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!