ದೇಶ

ಎನ್ ಸಿಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಪ್ರಫುಲ್ ಪಟೇಲ್ ನೇಮಕ

Nagaraja AB

ನವದೆಹಲಿ: ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್ ಅವರನ್ನು ಶರದ್ ಪವಾರ್ ನೇತೃತ್ವದ ಎನ್ಸಿಪಿ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಪಕ್ಷ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.

ಟಾಲ್ಕಟೋರಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎನ್ ಸಿಪಿ ರಾಷ್ಟ್ರೀಯ ಸಮಾವೇಶದಲ್ಲಿ 81 ವರ್ಷದ ಶರದ್ ಪವಾರ್ ಪಕ್ಷದ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದರು. ತದನಂತರ ಅವರು ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಹೆಸರನ್ನು ಅಧಿಕೃತಗೊಳಿಸಿದ್ದಾರೆ.

ಎನ್ ಸಿಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರಫುಲ್ ಪಟೇಲ್ ಅವರನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸಂಸದ ಸುನೀಲ್ ತಾಟ್ಕರೆ, ಪಿಪಿ ಮೊಹಮ್ಮದ್ ಫೈಜಲ್, ಹಿರಿಯ ಮುಖಂಡರಾದ ಯೋಗಾನಂದ ಶಾಸ್ತ್ರಿ. ಕೆ. ಕೆ. ಶರ್ಮಾ, ನರೇಂದ್ರ ವರ್ಮಾ ಮತ್ತು ಜೀತೇಂದ್ರ ಅವಾದ್ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ. ಕ್ಲೈಡ್ ಕ್ರಾಸ್ಟೊ ಎನ್ ಸಿಪಿ ರಾಷ್ಟ್ರೀಯ ವಕ್ತಾರ ಹಾಗೂ ಗೋವಾದ ಪಕ್ಷದ ವೀಕ್ಷಕರಾಗಿ ನೇಮಿಸಲಾಗಿದೆ. 

ಪವಾರ್, ಪಟೇಲ್ ಹೊರತುಪಡಿಸಿದಂತೆ, ಸುಪ್ರೀಯಾ ಸುಳೆ, ಅಜಿತ್ ಪವಾರ್, ಪಿ. ಸಿ ಚಾಕೋ ಮತ್ತಿತರನ್ನೊಳಗೊಂಡ 12 ಸದಸ್ಯರ ಎನ್ ಸಿಪಿ ಕಾರ್ಯಕಾರಿ ಸಮಿತಿಯನ್ನು ಅಂತಿಮಗೊಳಿಸಲಾಗಿದೆ. ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಿದ್ದಕ್ಕಾಗಿ 1999ರಲ್ಲಿ ಕಾಂಗ್ರೆಸ್ ನಿಂದ ಉಚ್ಚಾಟಿಸಿದ ನಂತರ ಪವಾರ್ ಎನ್ ಸಿಪಿ ಸ್ಥಾಪಿಸಿದರು.

SCROLL FOR NEXT