ದೇಶ

ಮಹಾರಾಷ್ಚ್ರ: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಮಾಣಿಕ್ ರಾವ್ ನಿಧನ

Lingaraj Badiger

ಮುಂಬೈ: ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಮಾಣಿಕ್ ರಾವ್ ಗವಿತ್ ಅವರು ಮಹಾರಾಷ್ಟ್ರದ ನಾಸಿಕ್‌ನ ಆಸ್ಪತ್ರೆಯಲ್ಲಿ ಶನಿವಾರ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ 87 ವರ್ಷದ ಮಾಣಿಕ್ ರಾವ್ ಅವರು ನಾಸಿಕ್ ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲರಾಗಿಯಾಗೆ ಇಂದು ನಿಧನರಾಗಿದ್ದಾರೆ. ಮಾಣಿಕ್ ರಾವ್ ಅವರು ಪುತ್ರಿ, ಮಾಜಿ ಶಾಸಕಿ ನಿರ್ಮಲಾ ಗವಿತ್ ಮತ್ತು ಪುತ್ರ ಭರತ್ ಅವರನ್ನು ಅಗಲಿದ್ದಾರೆ.

ಒಂಬತ್ತು ಬಾರಿ ಲೋಕಸಭಾ ಸಂಸದರಾಗಿದ್ದ ಗವಿತ್ ಅವರು 1980 ರಿಂದ 2009 ರವರೆಗೆ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ನಂದೂರ್ಬಾರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು ಮತ್ತು 2014 ರಲ್ಲಿ ಚುನಾವಣೆಯಲ್ಲಿ ಸೋತಿದ್ದರು.

2019 ರಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ ನಂತರ ಗವಿತ್ ಅವರ ಪುತ್ರ ಭರತ್ ಬಿಜೆಪಿಗೆ ಸೇರ್ಪಡೆಗೊಂಡರೆ, ಇಗತ್ಪುರಿಯಿಂದ ಎರಡು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ಪುತ್ರಿ ನಿರ್ಮಲಾ ಅವರು ಶಿವಸೇನೆಗೆ ಸೇರಿ ತಮ್ಮ ಸ್ಥಾನವನ್ನು ಕಳೆದುಕೊಂಡರು.

ಗವಿತ್ ಅವರು 2004 ರಲ್ಲಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರಾಗಿ ಮತ್ತು 2013 ರಲ್ಲಿ ರಾಜ್ಯ ಸಾಮಾಜಿಕ ನ್ಯಾಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

SCROLL FOR NEXT