ದೇಶ

ನೇಮಕಾತಿ 2022: SBI ನಲ್ಲಿ 1,673 ಪ್ರೊಬೇಷನರಿ ಆಫೀಸರ್ ಹುದ್ದೆಗಳು ಖಾಲಿ, ಕೂಡಲೇ ಅರ್ಜಿ ಸಲ್ಲಿಸಿ

Srinivasamurthy VN

ದೇಶದ ಪ್ರಮುಖ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1673 ಪ್ರೊಬೇಷನರಿ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಪದವೀದರರು ಕೂಡಲೇ ಅರ್ಜಿ ಸಲ್ಲಿಸಬಹುದು.

ವಿವರಗಳು
ಒಟ್ಟು ಹುದ್ದೆಗಳ ಸಂಖ್ಯೆ:
1673

ಅರ್ಹತೆ: ಈ ಹುದ್ದೆಗಳಿಗೆ ಯಾವುದೇ ಪದವಿ (ಡಿಗ್ರಿ) ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಅಂದರೆ ಪದವೀಧರರಿಗೆ ಮಾತ್ರ ಅವಕಾಶ ಇರಲಿದೆ. ಹಾಗೆಯೇ ಅಂತಿಮ ವರ್ಷದ ಪದವಿ ಮಾಡುತ್ತಿರುವ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.

ವಯೋಮಿತಿ: 21 ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

ವೇತನ ಶ್ರೇಣಿ: 41 ಸಾವಿರದಿಂದ 63 ಸಾವಿರದವರೆಗೆ

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಮೂರು ಹಂತಗಳ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಅಭ್ಯರ್ಥಿಗಳ ಆಯ್ಕೆಯ ಹಂತಗಳು ಈ ಕೆಳಗಿನಂತಿವೆ..
-ಹಂತ 1: ಪೂರ್ವಭಾವಿ ಪರೀಕ್ಷೆ
-ಹಂತ 2: ಮುಖ್ಯ ಪರೀಕ್ಷೆ
-ಹಂತ 3: ಸೈಕೋಮೆಟ್ರಿಕ್ ಪರೀಕ್ಷೆ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 12, 2022

ಅರ್ಜಿ ಸಲ್ಲಿಕೆಯ ಲಿಂಕ್
https://bityl.co/Edwd

ಅಧಿಸೂಚನೆ
https://bityl.co/Edxr

SCROLL FOR NEXT