ದೇಶ

ತ್ರಿಪುರಾ: ಆಡಳಿತಾರೂಢ ಬಿಜೆಪಿಗೆ ಮತ್ತೊಂದು ಆಘಾತ; ಪಕ್ಷ ತೊರೆದ ಕರ್ಬೂಕ್ ಶಾಸಕ

Lingaraj Badiger

ಗುವಾಹಟಿ: ತ್ರಿಪುರಾದಲ್ಲಿ ಶುಕ್ರವಾರ ಆಡಳಿತಾರೂಢ ಬಿಜೆಪಿಯ ಮತ್ತೊಂದು ವಿಕೆಟ್ ಪತನವಾಗಿದ್ದು, ಕಾರ್ಬುಕ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಬುರ್ಬಾ ಮೋಹನ್ ತ್ರಿಪುರಾ ಅವರು ಪಕ್ಷಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಈ ವರ್ಷ ಕೇಸರಿ ಪಕ್ಷ ತೊರೆದ ಶಾಸಕರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ಹಿರಿಯ ನಾಯಕ ಬುರ್ಬಾ ಮೋಹನ್ ಅವರು ಬುಡಕಟ್ಟು ಮೂಲದ ಪಕ್ಷ ತಿಪ್ರಾಹ ಸ್ಥಳೀಯ ಪ್ರಗತಿಶೀಲ ಪ್ರಾದೇಶಿಕ ಒಕ್ಕೂಟ(ಟಿಪ್ರಾ) ಸೇರಲಿದ್ದಾರೆ.

ಟಿಪ್ರಾ ಮುಖ್ಯಸ್ಥ ಮತ್ತು ಮಾಜಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಪ್ರದ್ಯೋತ್ ಬಿಕ್ರಮ್ ಮಾಣಿಕ್ಯ ದೇಬ್ ಬರ್ಮನ್ ಅವರೊಂದಿಗೆ ಬುರ್ಬಾ ಅವರು ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ರತನ್ ಚಕ್ರವರ್ತಿ ಅವರಿಗೆ ಸಲ್ಲಿಸಿದರು.

ದೇಬ್ ಬರ್ಮನ್ ಅವರು ಬುರ್ಬಾ ಅವರು ಟಿಪ್ರಾ ಸೇರುವುದನ್ನು ಖಚಿತಪಡಿಸಿದ್ದಾರೆ.

“ಬುರ್ಬಾ ಅವರು ಬಿಜೆಪಿ ಮತ್ತು ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಲು ನಾನು ಅವರ ಜೊತೆಗಿದ್ದೆ. ಅವರು ಈಗ ಟಿಪ್ರಾ ಸೇರುತ್ತಾರೆ ”ಎಂದು ದೇಬ್ ಬರ್ಮನ್ ಪತ್ರಕರ್ತರಿಗೆ ತಿಳಿಸಿದ್ದಾರೆ.

ಬುರ್ಬಾ ಮೋಹನ್ ತ್ರಿಪುರಾ ಅವರ ರಾಜೀನಾಮೆ ನಂತರ, 60 ಸದಸ್ಯ ಬಲದ ತ್ರಿಪುರಾ ವಿಧಾಸಭೆಯಲ್ಲಿ ಬಿಜೆಪಿಯ ಸಂಖ್ಯಾ ಬಲ 35ಕ್ಕೆ ಇಳಿದಿದೆ.

SCROLL FOR NEXT