ದೇಶ

ಕೋವಿಡ್-19: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 4,912 ಹೊಸ ಪ್ರಕರಣ ಪತ್ತೆ, 38 ಸಾವು

Nagaraja AB

ನವದೆಹಲಿ: ದೇಶದಲ್ಲಿ ಕೊರೋನಾ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 4,912 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 4,45,63,337ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 44,436ಕ್ಕೆ ಕ್ಷೀಣಿಸಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. 

ಇಂದು ಮುಂಜಾನೆ 8 ಗಂಟೆಯವರೆಗೂ ದೊರೆತ ಮಾಹಿತಿ ಪ್ರಕಾರ, ಕೇರಳದಲ್ಲಿ 19 ಸೋಂಕಿತರು ಸಾವು ಒಳಗೊಂಡಂತೆ ದೇಶದಲ್ಲಿ 38 ಮಂದಿ ಸಾವನ್ನಪ್ಪಿದ್ದು, ಒಟ್ಟಾರೇ ಮೃತರ ಸಂಖ್ಯೆ 5,28,487ಕ್ಕೆ ಏರಿಕೆಯಾಗಿದೆ.  ಒಟ್ಟು ಸೋಂಕಿತರಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ ಶೇ 0.10 ರಷ್ಟಿದ್ದು, ರಾಷ್ಟ್ರೀಯ ಚೇತರಿಕೆ ದರ ಶೇ. 98.71ಕ್ಕೆ ಏರಿಕೆಯಾಗಿದೆ. 

ದೈನಂದಿನ ಪಾಸಿಟಿವಿಟಿ ದರ ಶೇ. 1.62 ರಷ್ಟಿದ್ದು, ವಾರದ ಪಾಸಿಟಿವಿಟಿ ದರ ಶೇ. 1.69 ರಷ್ಟಿತ್ತು. ಚೇತರಿಸಿಕೊಂಡವರ ಸಂಖ್ಯೆ 4,39,90,414 ಕ್ಕೆ ಏರಿದೆ ಆದರೆ ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ. ರಾಷ್ಟ್ರವ್ಯಾಪಿ ಕೋವಿಡ್-19 ಲಸಿಕಾ ಅಭಿಯಾನದಡಿ ದೇಶದಲ್ಲಿ ಇದುವರೆಗೆ 217.41 ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿದೆ.

SCROLL FOR NEXT