ದೇಶ

ಮಹಾರಾಷ್ಟ್ರ: ಬಾಳಾ ಠಾಕ್ರೆಯ ದೀರ್ಘಾವಧಿ ಆಪ್ತರು ಸಿಎಂ ಶಿಂಧೆ ಬಣಕ್ಕೆ ಸೇರ್ಪಡೆ

Lingaraj Badiger

ಥಾಣೆ: ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಅವರ ನಿವಾಸ 'ಮಾತೋಶ್ರೀ'ಯಲ್ಲಿ ಸುಮಾರು ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ ಚಂಪಾ ಸಿಂಗ್ ಥಾಪಾ ಮತ್ತು ಮೊರೇಶ್ವರ್ ರಾಜೇ ಅವರು ಸೋಮವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣ ಸೇರಿದ್ದಾರೆ.

ಥಾಪಾ ಅವರು ಬಾಳಾ ಠಾಕ್ರೆ ಅವರ ಅತ್ಯಂತ ನಂಬಿಕಸ್ಥ ವ್ಯಕ್ತಿಯಾಗಿದ್ದರು. 27 ವರ್ಷಗಳ ಕಾಲ ಶ್ರದ್ಧೆಯಿಂದ ಬಾಳಾ ಠಾಕ್ರೆ ಅವರ ಸೇವೆ ಮಾಡಿದ್ದರು. 

ಇನ್ನು 'ಮಾತೋಶ್ರೀ' ಗೆ ಬರುತ್ತಿದ್ದ ಪ್ರತಿ ಫೋನ್ ಕರೆಗಳನ್ನು ಸ್ವೀಕರಿಸುತ್ತಿದ್ದ ರಾಜೆ ಅವರು ಮುಂಬೈನ ಉಪನಗರ ಬಾಂದ್ರಾದಲ್ಲಿರುವ ಠಾಕ್ರೆ ಅವರ ನಿವಾಸದಲ್ಲಿ ಕನಿಷ್ಠ 35 ವರ್ಷಗಳಿಂದ ಕೆಲಸ ಮಾಡುತ್ತಿದ್ದರು.

ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಥಾಣೆ ಶಾಸಕರು ಥಾಪಾ ಮತ್ತು ರಾಜೇ ಅವರಿಗೆ ಶಾಲು ಹೊದಿಸಿ, ಅಭಿನಂದಿಸುವ ಮೂಲಕ ತಮ್ಮ ಬಣಕ್ಕೆ ಸ್ವಾಗತಿಸಿದರು.

ತಾವು "ನೈಜ" ಶಿವಸೇನೆಯನ್ನು ಪ್ರತಿನಿಧಿಸುವುದರಿಂದ ಸೇನೆಯ ಸಂಸ್ಥಾಪಕ ಬಾಳಾ ಠಾಕ್ರೆ ಅವರ ಹಿಂದುತ್ವದ ಬೋಧನೆಗಳನ್ನು ಸಾಕಾರಗೊಳಿಸುತ್ತಿರುವುದರಿಂದ ಈ ಇಬ್ಬರೂ ತಮ್ಮ ಬಣ ನಿರ್ಧರಿಸಿದ್ದಾರೆ ಎಂದು ಶಿಂಧೆ ಹೇಳಿದ್ದಾರೆ.

SCROLL FOR NEXT