ದೇಶ

ಮಾಲೇಗಾಂವ್ ಸ್ಫೋಟ ಪ್ರಕರಣ: ವಿಶೇಷ ಎನ್ಐಎ ಕೋರ್ಟ್ ನಿಂದ ಎಟಿಎಸ್ ಅಧಿಕಾರಿ ವಿರುದ್ಧ ವಾರೆಂಟ್ 

Srinivas Rao BV

ಮುಂಬೈ: ವಿಶೇಷ ಎನ್ಐಎ ಕೋರ್ಟ್ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಭಯೋತ್ಪಾದನೆ ನಿಗ್ರಹ ತಂಡ (ಎಟಿಎಸ್)ದ ಅಧಿಕಾರಿಯೊಬ್ಬರಿಗೆ ಜಾಮೀನು ಸಿಗಬಹುದಾದ ವಾರೆಂಟ್ ನ್ನು ಜಾರಿಗೊಳಿಸಿದೆ. 

2008 ರ ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದ ವಾರೆಂಟ್ ಇದಾಗಿದ್ದು, ಸಂಬಂಧಪಟ್ಟ ಅಧಿಕಾರಿ ಕೆಲವು ಮಂದಿ ಶಂಕಿತರನ್ನು ಬಂಧಿಸಿ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದರು, ಸ್ವತಃ ಅಧಿಕಾರಿಯೂ ಈ ಪ್ರಕರಣದಲ್ಲಿ ಸಾಕ್ಷಿಯಾಗಿದ್ದರು

ಹಲವು ಸಮನ್ಸ್ ಗಳನ್ನು ನಿರ್ಲಕ್ಷ್ಯಿಸಿದ್ದ ಕಾರಣಕ್ಕಾಗಿ 5,000 ರೂಪಾಯಿಗಳ ಜಾಮೀನು ನೀಡಬಹುದಾದ ವಾರೆಂಟ್ ನ್ನು ಕೋರ್ಟ್ ಅಧಿಕಾರಿ ವಿರುದ್ಧ ಜಾರಿಗೊಳಿಸಿದೆ ಎಂದು ವಕೀಲರು ಹೇಳಿದ್ದಾರೆ.

ನಾಸಿಕ್ ನಲ್ಲಿ ಮಸೀದಿಯೊಂದರ ಬಳಿ 2008 ರ ಸೆ.29 ರಂದು ನಡೆದಿದ್ದ ಸ್ಫೋಟ ಪ್ರಕರಣದಲ್ಲಿ 6 ಮಂದಿ ಸಾವನ್ನಪ್ಪಿ 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 260 ಸಾಕ್ಷ್ಯಗಳನ್ನು ಪರೀಕ್ಷಿಸಲಾಗಿದೆ.

SCROLL FOR NEXT