ದೇಶ

ಸನ್ಯಾಸಿನಿ ಅತ್ಯಾಚಾರ ಪ್ರಕರಣ: ಉಚ್ಚಾಟಿತ ಸನ್ಯಾಸಿನಿಯಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

Vishwanath S

ವಯನಾಡ್: ಸನ್ಯಾಸಿನಿ ಅತ್ಯಾಚಾರ ಪ್ರಕರಣದಲ್ಲಿ ಬಿಷಪ್ ಫ್ರಾಂಕೋ ಮುಳಕ್ಕಲ್ ವಿರುದ್ಧ ಪ್ರತಿಭಟನೆ ನಡೆಸಿ ಫ್ರಾನ್ಸಿಸ್ಕನ್ ಕ್ಲಾರಿಸ್ಟ್ ಸಭೆಯಿಂದ ಹೊರಹಾಕಲ್ಪಟ್ಟ ಸಿಸ್ಟರ್ ಲೂಸಿ ಕಳಪ್ಪುರ ಅವರು ಇಂದು ಸಮೀಪದ ಮನಂತವಾಡಿಯ ಕಾನ್ವೆಂಟ್ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ತನಗೆ ಸಂಸ್ಥೆಯ ಆಹಾರ ಮತ್ತು ಇತರ ಸೌಲಭ್ಯಗಳನ್ನು ನಿರಾಕರಿಸಲಾಗಿದೆ ಎಂದು ಕಾನ್ವೆಂಟ್ ಅಧಿಕಾರಿಗಳ ವಿರುದ್ಧ ಸನ್ಯಾಸಿನಿ ಗಂಭೀರ ಆರೋಪ ಮಾಡಿದರು. ಅಲ್ಲಿ ಬಿಷಪ್ ವಿರುದ್ಧದ ಪ್ರಕರಣವು ಮುಗಿಯುವವರೆಗೆ ಉಳಿಯಲು ಸ್ಥಳೀಯ ನ್ಯಾಯಾಲಯವು ಅವಕಾಶ ಮಾಡಿಕೊಟ್ಟಿತು.

ಕಾನ್ವೆಂಟ್‌ನ ಸಹೋದ್ಯೋಗಿಗಳಿಂದ ತನ್ನನ್ನು ಪ್ರತ್ಯೇಕಿಸಿ ಅವಮಾನಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಮಾನಂತವಾಡಿ ನ್ಯಾಯಾಲಯವು ಮಧ್ಯಂತರ ಆದೇಶದಂತೆ ಹೊರಡಿಸಿದ ನಿರ್ದೇಶನಗಳನ್ನು ಕಾನ್ವೆಂಟ್ ಅಧಿಕಾರಿಗಳು ಸ್ಪಷ್ಟವಾಗಿ ಉಲ್ಲಂಘಿಸುತ್ತಿದ್ದಾರೆ ಎಂದು ವೆಲ್ಲಮುಂಡ ಠಾಣೆಯ ಪೊಲೀಸರ ತಂಡವು ಇತ್ತೀಚೆಗೆ ಬಂದು ತನ್ನನ್ನು ಮತ್ತು ಕಾನ್ವೆಂಟ್ ಅಧಿಕಾರಿಗಳನ್ನು ಭೇಟಿ ಮಾಡಿದೆ ಎಂದು ಲೂಸಿ ಕಳಪ್ಪುರ ಹೇಳಿದರು.

ಸನ್ಯಾಸಿನಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಬಿಷಪ್ ಫ್ರಾಂಕೋ ಮುಳಕ್ಕಲ್ ಅವರನ್ನು ಬಂಧಿಸುವಂತೆ ಕೋರಿ ಮಿಷನರೀಸ್ ಆಫ್ ಜೀಸಸ್ ಸಭೆಗೆ ಸೇರಿದ ಸನ್ಯಾಸಿನಿಯರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಿಸ್ಟರ್ ಲೂಸಿ ಕಲಪ್ಪುರ (56) ಅವರನ್ನು ರೋಮನ್ ಕ್ಯಾಥೋಲಿಕ್ ಚರ್ಚ್‌ನ ಅಡಿಯಲ್ಲಿ ಎಫ್‌ಸಿಸಿಯಿಂದ 2019 ರ ಆಗಸ್ಟ್ ನಲ್ಲಿ ಹೊರಹಾಕಲಾಯಿತು. ಇದರ ಪರಿಣಾಮವಾಗಿ, ಆಕೆಯ ಕಾನ್ವೆಂಟ್ ಅನ್ನು ಖಾಲಿ ಮಾಡುವಂತೆ ಕೇಳಲಾಯಿತು.

ಆದರೆ ಇಲ್ಲಿನ ನ್ಯಾಯಾಲಯವು ಕಳೆದ ವರ್ಷ ಆಕೆಯನ್ನು ಎಫ್‌ಸಿಸಿ ಕಾನ್ವೆಂಟ್‌ನಲ್ಲಿ ಉಚ್ಚಾಟನೆಗೆ ಸಂಬಂಧಿಸಿದ ಪ್ರಕರಣವನ್ನು ತೀರ್ಮಾನಿಸುವವರೆಗೆ ಇರಲು ಅನುಮತಿ ನೀಡಿತ್ತು.
 

SCROLL FOR NEXT