ದೇಶ

ಭಾರತ ‘ಎರಡು ಹಿಂದೂಸ್ತಾನ’ ಆಶಯ ಒಪ್ಪುವುದಿಲ್ಲ: ರಾಹುಲ್ ಗಾಂಧಿ

Nagaraja AB

ಮಲಪ್ಪುರಂ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆ 20ನೇ ದಿನಕ್ಕೆ ಕಾಲಿಟ್ಟಿದ್ದು, ಕೇಂದ್ರದ ಬಿಜೆಪಿಯು ಎರಡು ಹಿಂದೂಸ್ತಾನ ರಚಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಇಂದು ಕೇಂದ್ರ ಬಿಜೆಪಿಯು ದೊಡ್ಡ ಕೈಗಾರಿಕೋದ್ಯಮಿಗಳ ಕೋಟ್ಯಂತರ ಸಾಲ ಮನ್ನಾ ಮಾಡಲಾಗುತ್ತಿದೆ. ಆದರೆ, ರೈತ ಅಥವಾ ಸಣ್ಣ ವ್ಯಾಪಾರಿ ಸಣ್ಣ ಸಾಲವನ್ನೂ ಮರುಪಾವತಿಸಲು ಸಾಧ್ಯವಾಗದಿದ್ದರೆ, ಅವರನ್ನು ‘ಡೀಫಾಲ್ಟರ್’ ಎಂದು ಕರೆದು ಜೈಲಿಗೆ ಹಾಕಲಾಗುತ್ತಿದೆ ಎಂದು ದೂರಿದ್ದಾರೆ.

ಭಾರತ್ ಜೋಡೋ ಯಾತ್ರೆ ಅನ್ಯಾಯದ ವಿರುದ್ಧದ ಹೋರಾಟವಾಗಿದೆ. ಭಾರತವು ಎರಡು ಹಿಂದೂಸ್ತಾನದ ಆಶಯವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.

19ನೇ ದಿನ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಯಾತ್ರೆಯನ್ನು ವಿಭಜಿಸುವ ಪ್ರಯತ್ನ ಕೂಡ ನಡೆಯುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ಮತ್ತು ಆರ್ ಎಸ್ ಎಸ್ ಅವರು ರ್ಯಾಲಿಯನ್ನು ವಿಭಜಿಸಬೇಕೆಂದು, ನೆರೆಹೊರೆಯವರು ಜಗಳವಾಡಬೇಕೆಂದು ಬಯಸುತ್ತಾರೆ. ಅವರಿಗೆ ನದಿ ಬೇಕು. ಆದರೆ ಯಾರಾದರೂ ಬಿದ್ದರೆ ಅವರನ್ನು ಎತ್ತುವುದಿಲ್ಲ. ಎಲ್ಲರೂ ಒಂಟಿಯಾಗುತ್ತಾರೆ. ದೇಶವನ್ನು ವಿಭಜಿಸುವ ಮತ್ತು ದ್ವೇಷವನ್ನು ಹರಡುವ ಮೂಲಕ ದೇಶವನ್ನು ನಡೆಸುತ್ತಾರೆ ಎಂದು ಆರೋಪಿಸಿದರು.

ಮಂಗಳವಾರ ಕೇರಳದ ಮಲಪ್ಪುರಂ ಜಿಲ್ಲೆಗೆ ಪ್ರವೇಶಿಸಿದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯಲ್ಲಿ ನೂರಾರು ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದರು. ಪಾಲಕ್ಕಾಡ್ ಜಿಲ್ಲೆಯ ಕೊಪ್ಪಂನಲ್ಲಿ ಸೋಮವಾರ ದಿನದ ಅಂತ್ಯಗೊಂಡ ನಂತರ ಬೆಳಿಗ್ಗೆ ಪುಲಮಂಹೊಳೆ ಜಂಕ್ಷನ್‌ನಿಂದ ಯಾತ್ರೆ ಪ್ರಾರಂಭವಾಯಿತು.
 

SCROLL FOR NEXT