ದೇಶ

ರೆಸಾರ್ಟ್‌ಗೆ 'ಹುಡುಗಿಯರನ್ನು ಕರೆಸಿಕೊಳ್ಳುತ್ತಿದ್ದರು': ಪುಲ್ಕಿತ್ ಆರ್ಯ ವಿರುದ್ಧ ರೆಸಾರ್ಟ್‌ನ ಮಾಜಿ ಉದ್ಯೋಗಿ ಆರೋಪ!

Vishwanath S

ಡೆಹ್ರಾಡೂನ್: ಅಂಕಿತಾ ಭಂಡಾರಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ನಾಯಕನ ಪುತ್ರ ಪುಲ್ಕಿತ್ ಆರ್ಯ ಬಗ್ಗೆ ಹಲವು ವಿಷಯಗಳು ಹೊರಬೀಳುತ್ತಿವೆ. ರಿಷಿಕೇಶದ ವನಾಂತರ ರೆಸಾರ್ಟ್‌ ನ ಮಾಜಿ ಉದ್ಯೋಗಿಯೊಬ್ಬರು ಅನೇಕ ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. 

ರೆಸಾರ್ಟ್‌ನ ನಿರ್ವಾಹಕ ಪುಲ್ಕಿತ್ ಆರ್ಯ ಮಹಿಳಾ ಉದ್ಯೋಗಿಗಳನ್ನು ಕೆಟ್ಟದಾಗಿ ಬಳಸಿಕೊಳ್ಳುವ ಉದ್ದೇಶ ಹೊಂದಿದ್ದರು ಎಂದು ಮಾಜಿ ಉದ್ಯೋಗಿ ಹೇಳಿದ್ದಾರೆ. ಅಲ್ಲದೇ ನೌಕರರಿಗೆ ಥಳಿಸುತ್ತಿದ್ದರು. ಅದೇ ಸಮಯದಲ್ಲಿ ಸಂಬಳ ಕೇಳುತ್ತಿದ್ದವರ ಮೇಲೆ ಕಳ್ಳತನದ ಆರೋಪ ಹೊರಿಸಿ ಕೆಲಸದಿಂದ ಹೊರಹಾಕುತ್ತಿದ್ದರು ಎಂದು ಹೇಳಿದ್ದಾರೆ.

ಪುಲ್ಕಿತ್ ಆರ್ಯ ಮತ್ತು ಅಂಕಿತ್ ಅಲಿಯಾಸ್ ಪುಲ್ಕಿತ್ ಗುಪ್ತಾ ಅವರ ಅನುಚಿತ ವರ್ತನೆಯಿಂದ ರೆಸಾರ್ಟ್‌ನಲ್ಲಿ ಕೆಲಸ ಮಾಡುವ ಇನ್ನೊಬ್ಬ ಮಹಿಳಾ ಉದ್ಯೋಗಿ ಕೂಡ ತುಂಬಾ ಅಸಮಾಧಾನಗೊಂಡಿದ್ದರು ಎಂದು ಮಾಜಿ ಉದ್ಯೋಗಿ ಹೇಳಿದ್ದಾರೆ. ಅಲ್ಲದೆ ಅನೇಕ ಹುಡುಗಿಯರನ್ನು ರೆಸಾರ್ಟ್‌ಗೆ ಕರೆಸಿಕೊಳ್ಳುತ್ತಿದ್ದರು. ಪುಲ್ಕಿತ್ ಆರ್ಯ ಮತ್ತು ಅಂಕಿತ್ ಈ ಹುಡುಗಿಯರನ್ನು ರಿಜಿಸ್ಟರ್‌ನಲ್ಲಿ ನಮೂದಿಸಲು ನಿರಾಕರಿಸುತ್ತಿದ್ದರು. ಈ ಹುಡುಗಿಯರನ್ನು ಗ್ರಾಹಕರ ಕೋಣೆಗಳಿಗೆ ಕಳುಹಿಸಲಾಗುತ್ತಿತ್ತು ಎಂದರು ಹೇಳಿದ್ದಾರೆ. ಇನ್ನು ರೆಸಾರ್ಟ್ ಗೆ ಬರುವ ವಿಐಪಿಗಳ ವಿವರಗಳನ್ನು ಸಹ ರಿಜಿಸ್ಟರ್‌ನಲ್ಲಿ ನಮೂದಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.

ವಂತರಾ ರೆಸಾರ್ಟ್‌ನ ಮಾಜಿ ಮಹಿಳಾ ಉದ್ಯೋಗಿಯೊಬ್ಬರು, 'ನಾನು ಮೇ ತಿಂಗಳಲ್ಲಿ ಋಷಿಕೇಶದ ವಂತರಾ ರೆಸಾರ್ಟ್‌ನಲ್ಲಿ ಕೆಲಸ ಪ್ರಾರಂಭಿಸಿದೆ. ಆದರೆ ಜುಲೈನಲ್ಲಿ ಅಲ್ಲಿಂದ ಕೆಲಸ ಬಿಟ್ಟೆ. ಅಲ್ಲಿ ಅಂಕಿತ್ ಗುಪ್ತಾ ಮತ್ತು ಪುಲ್ಕಿತ್ ಆರ್ಯ ಹುಡುಗಿಯರನ್ನು ನಿಂದಿಸುವುದರ ಜೊತೆಗೆ ಕಿರುಕುಳ ನೀಡುತ್ತಿದ್ದರು. ಅವರು ಅಸಹ್ಯಕರ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಹೇಳಿದ್ದಾರೆ.

8 ತಿಂಗಳಿಂದ ಮತ್ತೊಬ್ಬ ಬಾಲಕಿ ನಾಪತ್ತೆ
ಈ ಕೊಲೆ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರಂತೆ. ಅದೇ ರೀತಿ ಹೊಸ ವಿಷಯಗಳು ಹೊರ ಬರುತ್ತಿವೆ. ಅಂಕಿತಾ ಅವರನ್ನು ಹೊರತುಪಡಿಸಿ, ಈ ರೆಸಾರ್ಟ್‌ನಿಂದ ಅನುಮಾನಾಸ್ಪದ ಸಂದರ್ಭಗಳಲ್ಲಿ ಇನ್ನೋರ್ವ ಬಾಲಕಿ ನಾಪತ್ತೆಯಾಗಿದ್ದಳು. ಅಂಕಿತಾ ಅವರಂತೆಯೇ ಈ ಹುಡುಗಿಯೂ ಪೌರಿ ಗರ್ವಾಲ್‌ನವಳು ಎಂದು ಹೇಳಲಾಗುತ್ತಿದೆ. 8 ತಿಂಗಳ ಹಿಂದೆಯಷ್ಟೇ ಇಲ್ಲಿಂದ ನಾಪತ್ತೆಯಾಗಿದ್ದಳು. ಆ ವೇಳೆ ಪುಲ್ಕಿತ್ ಆರ್ಯ, ಬಾಲಕಿ ಹಣ ಮತ್ತು ವಸ್ತುಗಳನ್ನು ಕದ್ದು ಓಡಿ ಹೋಗಿದ್ದಾಳೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಇದೀಗ ಅಂಕಿತಾ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಬಾಲಕಿ ಏಕಾಏಕಿ ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ತನಿಖೆಗೆ ಆದೇಶಿಸಿದ್ದಾರೆ.

ಸೆಪ್ಟೆಂಬರ್ 23ರಂದು ಅಂಕಿತಾ ಭಂಡಾರಿ ಹತ್ಯೆ ಪ್ರಕರಣದಲ್ಲಿ ಪುಲ್ಕಿತ್ ಆರ್ಯ ಜೊತೆಗೆ ರೆಸಾರ್ಟ್‌ನ ಮ್ಯಾನೇಜರ್ ಮತ್ತು ಸಹಾಯಕ ವ್ಯವಸ್ಥಾಪಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ಪುಲ್ಕಿತ್ ಆರ್ಯ ತಂದೆ ವಿನೋದ್ ಆರ್ಯ ಮತ್ತು ಸಹೋದರ ಅಂಕಿತ್ ಆರ್ಯ ಅವರನ್ನು ಬಿಜೆಪಿ ಉಚ್ಚಾಟಿಸಿದೆ.

ಶನಿವಾರ ಬಾಲಕಿಯ ಶವ ಚಿಲಾ ನಾಲೆಯಿಂದ ಪತ್ತೆ
ವನಂತರಾ ರೆಸಾರ್ಟ್‌ನಲ್ಲಿ ರಿಸೆಪ್ಷನಿಸ್ಟ್ ಆಗಿರುವ ಅಂಕಿತಾ ಭಂಡಾರಿ ಸೆಪ್ಟೆಂಬರ್ 18ರಂದು ನಾಪತ್ತೆಯಾಗಿದ್ದಳು. ಇದಾದ ಬಳಿಕ 5 ದಿನಗಳ ಬಳಿಕ ಶನಿವಾರ ಚಿಲಾ ನಾಲೆಯಿಂದ ಆತನ ಶವ ಪತ್ತೆಯಾಗಿತ್ತು. ಅಂಕಿತಾ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಮುಖಂಡನ ಪುತ್ರ ಪುಲ್ಕಿತ್ ಆರ್ಯ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದರು. ಶನಿವಾರ, ಎಲ್ಲಾ ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

SCROLL FOR NEXT