ದೇಶ

ಹವಾಮಾನ ಬದಲಾವಣೆ, ಪರಿಣಾಮ, ಸವಾಲುಗಳೇನು?: ಕೇರಳದ ಶಾಲೆಗಳಲ್ಲಿ ಹವಾಮಾನ ಕೇಂದ್ರಗಳ ಸ್ಥಾಪನೆ

Sumana Upadhyaya

ಕೊಚ್ಚಿ: ಹವಾಮಾನ ಬದಲಾವಣೆಯು ಮನುಷ್ಯ ಸೇರಿದಂತೆ ಭೂಮಿ ಮೇಲಿರುವ ಎಲ್ಲಾ ಜೀವಿಗಳ ಮೇಲೆ ಪರಿಣಾಮ ಬೀರುತ್ತದೆ. ಭವಿಷ್ಯದಲ್ಲಿ ದೊಡ್ಡ ಸವಾಲಿನ ವಿಚಾರವಾಗಿದೆ. ಈ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಕೇರಳ ಶಾಲೆಗಳಲ್ಲಿ ಹವಾಮಾನ ಕೇಂದ್ರಗಳನ್ನು ಸ್ಥಾಪಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಕೇರಳ ರಾಜ್ಯದಲ್ಲಿ ದೇಶದಲ್ಲಿ ಪ್ರಥಮ ಬಾರಿಗೆ ಈ ವಿನೂತನ ಯೋಜನೆ ಜಾರಿಗೆ ಬರುತ್ತಿದೆ.

ಸಮಗ್ರ ಶಿಕ್ಷ ಕೇರಳದ ಮೂಲಕ ಸಾಮಾನ್ಯ ಶಿಕ್ಷಣ ಇಲಾಖೆಯು ಇದನ್ನು ಪ್ರಾರಂಭಿಸಿದೆ. ಮುಖ್ಯಮಂತ್ರಿಯವರ 100 ದಿನಗಳ ಕ್ರಿಯಾ ಯೋಜನೆಯಲ್ಲಿ ಒಳಗೊಂಡಿರುವ ಗಮನಾರ್ಹ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಇದೂ ಒಂದು ಎಂದು ಸಮಗ್ರ ಶಿಕ್ಷಣ ಕೇಂದ್ರ(SSK) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯೋಜನೆಯಡಿಯಲ್ಲಿ, ರಾಜ್ಯದ 258 ಶಾಲೆಗಳಲ್ಲಿ ಹವಾಮಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಭೂಗೋಳವನ್ನು ಒಂದು ವಿಷಯವಾಗಿ ಹೊಂದಿರುವ ಎಲ್ಲಾ ಸರ್ಕಾರಿ ಹೈಯರ್ ಸೆಕೆಂಡರಿ ಮತ್ತು ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಪ್ರಯೋಗಾಲಯಗಳಲ್ಲಿ ಪ್ರಯೋಗವಾಗಿ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದರು.

ಈ ಶಾಲೆಗಳು ಭೌಗೋಳಿಕವಾಗಿ ಸೂಕ್ತ ಪ್ರದೇಶಗಳಲ್ಲಿ ಇಲ್ಲದಿದ್ದರೆ, ಹತ್ತಿರದ ಅನುದಾನಿತ ಶಾಲೆಗಳಲ್ಲಿ ಹವಾಮಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು, ಉಪಕರಣಗಳನ್ನು ಖರೀದಿಸಲು ಶಾಲೆಗಳಿಗೆ ತಲಾ 50 ಸಾವಿರ ರೂಪಾಯಿ ನೀಡಲಾಗುತ್ತಿದೆ ಎಂದರು.

ಸಾಮಗ್ರಿಗಳಲ್ಲಿ ಮಳೆ ಮಾಪಕ, ಸಿಕ್ಸ್‌ನ ಗರಿಷ್ಠ-ಕನಿಷ್ಠ ಥರ್ಮಾಮೀಟರ್, ಆರ್ದ್ರ ಮತ್ತು ಒಣ ಬಲ್ಬ್ ಥರ್ಮಾಮೀಟರ್, ವಿಂಡ್ ವೇನ್ ಮತ್ತು ಕಪ್ ಕೌಂಟರ್ ಎನಿಮೋಮೀಟರ್ ಸೇರಿವೆ. ವಿದ್ಯಾರ್ಥಿಗಳು ಹವಾಮಾನ ಉಪಕರಣಗಳಿಂದ ರೀಡಿಂಗ್ ಪಡೆದು ಒದಗಿಸಿದ ಹವಾಮಾನ ಡೇಟಾ ಪುಸ್ತಕದಲ್ಲಿ ಅವುಗಳನ್ನು ದಾಖಲಿಸುತ್ತಾರೆ.

ಮಕ್ಕಳು ಶಾಲೆಯ ಆವರಣದಲ್ಲಿ ಮತ್ತು ಸುತ್ತಮುತ್ತಲಿನ ದೈನಂದಿನ ಹವಾಮಾನ ವಿದ್ಯಮಾನವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಶಾಲಾ ಹವಾಮಾನ ವೀಕ್ಷಣಾಲಯಗಳ ಮೂಲಕ ಸಂಗ್ರಹಿಸಲಾದ ಹವಾಮಾನ ಡೇಟಾವನ್ನು ಸಂಶೋಧನಾ ಅಧ್ಯಯನಗಳು ಮತ್ತು ಇತರ ವೈಜ್ಞಾನಿಕ ಆವಿಷ್ಕಾರಗಳಿಗೆ ಬಳಸಬಹುದು. "ವಿಪತ್ತು ಪೀಡಿತ ಪ್ರದೇಶಗಳಲ್ಲಿ ವೈಜ್ಞಾನಿಕ ಅಧ್ಯಯನಕ್ಕೆ ಹವಾಮಾನ ಮಾಹಿತಿ ಅತ್ಯಗತ್ಯವಾದ್ದರಿಂದ, ಈ ಶಾಲಾ ವೀಕ್ಷಣಾಲಯಗಳು ಸಮಾಜಕ್ಕೂ ಪ್ರಯೋಜನಕಾರಿಯಾಗಿವೆ ಎಂದರು. 

ಹವಾಮಾನ ಪರಿಸ್ಥಿತಿಗಳಲ್ಲಿನ ಬದಲಾವಣೆಗಳನ್ನು ನಿಖರವಾಗಿ ಅರ್ಥಮಾಡಿಕೊಳ್ಳಲು ಮತ್ತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವವನ್ನು ಒದಗಿಸಲು ಯೋಜನೆಯು ಗುರಿಯನ್ನು ಹೊಂದಿದೆ ಎಂದು SSK ಅಧಿಕಾರಿ ಹೇಳುತ್ತಾರೆ. 

SCROLL FOR NEXT