ದೇಶ

ದೇಶದ್ರೋಹದ ಪ್ರಕರಣದಲ್ಲಿ ಶರ್ಜಿಲ್ ಇಮಾಮ್ ಗೆ ಜಾಮೀನು, ಆದರೂ ಬಿಡುಗಡೆ ಭಾಗ್ಯ ಇಲ್ಲ

Lingaraj Badiger

ನವದೆಹಲಿ: 2019ರಲ್ಲಿ ನಡೆದ ಜಾಮಿಯಾ ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ದಾಖಲಾಗಿದ್ದ ದೇಶದ್ರೋಹ ಪ್ರಕರಣದಲ್ಲಿ ಜೆಎನ್‌ಯು ಮಾಜಿ ವಿದ್ಯಾರ್ಥಿ ಶರ್ಜಿಲ್ ಇಮಾಮ್‌ಗೆ ದೆಹಲಿ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅನುಜ್ ಅಗರವಾಲ್ ಅವರು ಶರ್ಜಿಲ್ ಇಮಾಮ್‌ಗೆ ಜಾಮೀನು ನೀಡಿದ್ದು,
ನ್ಯಾಯಾಲಯದ ವಿವರವಾದ ಆದೇಶಕ್ಕಾಗಿ ಕಾಯಲಾಗುತ್ತಿದೆ.

ಆದಾಗ್ಯೂ, ಜನವರಿ 2020 ರಿಂದ ನ್ಯಾಯಾಂಗ ಬಂಧನದಲ್ಲಿರುವ  ಶರ್ಜಿಲ್ ಇಮಾಮ್, ದೆಹಲಿ ಗಲಭೆ ಸಂಚಿನ ಪ್ರಕರಣದಲ್ಲಿ ಇನ್ನೂ ಜಾಮೀನು ಪಡೆಯದ ಕಾರಣ ಅವರ ಜೈಲುವಾಸ ಮುಂದುವರೆಯಲಿದೆ.

ಡಿಸೆಂಬರ್ 13, 2019 ರಂದು ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಇಮಾಮ್ ಅವರನ್ನು ಬಂಧಿಸಿ, ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿತ್ತು.

SCROLL FOR NEXT