ಸಾಂದರ್ಭಿಕ ಚಿತ್ರ 
ದೇಶ

ಮಗಳ ಮೇಲೆ ಅತ್ಯಾಚಾರವೆಸಗಿದ ತಂದೆಯನ್ನು ಬಂಧಿಸಿದ ಪೊಲೀಸರು!

16 ವರ್ಷದ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿದ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. 

ಅಂಬಾಲಾ(ಹರಿಯಾಣ): 16 ವರ್ಷದ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿದ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. 

ಕಳೆದ ಎರಡು ವರ್ಷಗಳಲ್ಲಿ ಪತಿ ಮಗಳ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಒಮ್ಮೆ ತನ್ನ ಪತಿ ಅಪ್ರಾಪ್ತ ಬಾಲಕಿಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ತಡೆದಿದ್ದೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ತನ್ನ ಮಗಳೊಂದಿಗೆ ತನ್ನ ಸ್ವಗ್ರಾಮದಿಂದ ಅಂಬಾಲಾಕ್ಕೆ ಹಿಂದಿರುಗಿದಾಗ, ಆರೋಪಿಯು ಮತ್ತೆ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆಯ ಕುಟುಂಬ ಮೂಲತಃ ಬಿಹಾರದವರಾಗಿದ್ದು ಕಳೆದ ಹಲವು ವರ್ಷಗಳಿಂದ ಈ ಕುಟುಂಬ ಅಂಬಾಲಾ ನಗರದಲ್ಲಿ ನೆಲೆಸಿದೆ. ಮಹಿಳೆಯ ದೂರಿನ ಮೇರೆಗೆ ಪೊಲೀಸರು ಆರೋಪಿ ತಂದೆ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸರ ಕ್ರಮದ ಬಗ್ಗೆ ಮಾಹಿತಿ ಪಡೆದ ಆರೋಪಿ ಪರಾರಿಯಾಗಿದ್ದನು ಎಂದು ಮಹಿಳಾ ಠಾಣೆ (ಅಂಬಾಲ) ಎಸ್‌ಎಚ್‌ಒ ಸುರೇಂದ್ರ ಕೌರ್ ಹೇಳಿದ್ದಾರೆ. ಆದರೆ, ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುದ್ಧ ನಮ್ಮದಲ್ಲ: ಶಶಿತರೂರ್ ಬಳಿಕ ಮೋದಿ ಸರ್ಕಾರವನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ

ಸಮುದ್ರದಲ್ಲೇ ಬಿಗ್ ಡೀಲ್‌: ಚೀನಾದತ್ತ ಹೊರಟಿದ್ದ ರಷ್ಯಾದ ತೈಲ ನೌಕೆ ಭಾರತಕ್ಕೆ ಯು-ಟರ್ನ್!

Iran-Israel war- ಇರಾನ್‌ನ ತೈಲ ಘಟಕ ಮೇಲೆ ಇಸ್ರೇಲ್ ದಾಳಿ, ಪ್ರತೀಕಾರವಾಗಿ ಗಲ್ಫ್ ರಾಷ್ಟ್ರಗಳ ಇಂಧನ ಸೌಲಭ್ಯಗಳ ಮೇಲೆ ಟೆಹ್ರಾನ್ ಪ್ರತೀಕಾರ

ATM ತಾಂತ್ರಿಕ ದೋಷ: ಹಣ ವಿತ್ ಡ್ರಾ ಮಾಡಲು ಹೋದ ಗ್ರಾಹಕನಿಗೆ ಶಾಕ್.. 9 ವರ್ಷಗಳ ನಿರಂತರ ಕದನ..10 ಸಾವಿರಕ್ಕೆ ಸಿಕ್ಕಿದ್ದು 3 ಲಕ್ಷ ರೂ!

ಇರಾನ್ ಬಗ್ಗೆ ಜಗತ್ತಿಗೆ ಸುಳ್ಳು ಹೇಳಿತಾ ಅಮೆರಿಕ?: ಖಮೇನಿ ಇರಾನ್ ಅಣ್ವಸ್ತ್ರ ಅಭಿವೃದ್ಧಿ ತಡೆಯುತ್ತಿದ್ದರು: US ಮಾಜಿ ಅಧಿಕಾರಿ ಜೋ ಕೆಂಟ್ ಸ್ಫೋಟಕ ಹೇಳಿಕೆ!

SCROLL FOR NEXT