ತೇಜ್ ಪ್ರತಾಪ್ ಯಾದವ್ 
ದೇಶ

ಬಿಹಾರ ಸಚಿವ ತೇಜ್ ಪ್ರತಾಪ್ ಲಗೇಜ್ ಹೊರ ಹಾಕಿದ ವಾರಣಾಸಿ ಹೋಟೆಲ್ ವಿರುದ್ಧ ದೂರು

ವಾರಣಾಸಿಯ ಹೋಟೆಲ್ ಆಡಳಿತ ಮಂಡಳಿ ಬಿಹಾರ ಸಚಿವ ತೇಜ್ ಪ್ರತಾಪ್ ಯಾದವ್ ಅವರು ದೇವರ ದರ್ಶನಕ್ಕೆ ತೆರಳಿದ್ದ ವೇಳೆ, ಅವರ ಅನುಪಸ್ಥಿತಿಯಲ್ಲಿ ಅವರ ಕೊಠಡಿಯಿಂದ ಲಗೇಜ್ ತೆಗೆಯಲಾಗಿದೆ ಎಂದು ಪೊಲೀಸರು ಶನಿವಾರ ಹೇಳಿದ್ದಾರೆ.

ವಾರಣಾಸಿ: ವಾರಣಾಸಿಯ ಹೋಟೆಲ್ ಆಡಳಿತ ಮಂಡಳಿ ಬಿಹಾರ ಸಚಿವ ತೇಜ್ ಪ್ರತಾಪ್ ಯಾದವ್ ಅವರು ದೇವರ ದರ್ಶನಕ್ಕೆ ತೆರಳಿದ್ದ ವೇಳೆ, ಅವರ ಅನುಪಸ್ಥಿತಿಯಲ್ಲಿ ಅವರ ಕೊಠಡಿಯಿಂದ ಲಗೇಜ್ ತೆಗೆಯಲಾಗಿದೆ ಎಂದು ಪೊಲೀಸರು ಶನಿವಾರ ಹೇಳಿದ್ದಾರೆ.

ಈ ಸಂಬಂಧ ಬಿಹಾರ ಸಚಿವರ ಆಪ್ತ ಸಹಾಯಕ ವಿಶಾಲ್ ಸಿನ್ಹಾ ಅವರು ದೂರು ದಾಖಲಿಸಿದ್ದು, ಸಚಿವರಿಗೆ ಮಂಜೂರಾಗಿದ್ದ ಕೊಠಡಿಯನ್ನು ತೆರೆದು ಅವರ ವಸ್ತುಗಳನ್ನು ಮುಟ್ಟುವುದು ಭದ್ರತಾ ದೃಷ್ಟಿಯಿಂದ ಸುರಕ್ಷಿತವಲ್ಲ ಎಂದು ಹೇಳಿದ್ದಾರೆ.

ಶುಕ್ರವಾರ ರಾತ್ರಿ ಯಾದವ್ ಹೋಟೆಲ್‌ಗೆ ಹಿಂತಿರುಗಿದಾಗ, ರಿಸೆಪ್ಷನ್ ನಲ್ಲಿ ಅವರ ಲಗೇಜ್‌ಗಳು ಇದ್ದವು ಎಂದು ಸಿನ್ಹಾ ತಿಳಿಸಿದ್ದಾರೆ.

ಬಿಹಾರದ ಪರಿಸರ ಮತ್ತು ಅರಣ್ಯ ಸಚಿವರ ಆಪ್ತ ಸಹಾಯಕರು ಏಪ್ರಿಲ್ 6 ರಂದು ಒಂದು ದಿನಕ್ಕೆ ಕೊಠಡಿಯನ್ನು ಕಾಯ್ದಿರಿಸಿದ್ದರು ಎಂದು ಹೋಟೆಲ್ ಆಡಳಿತ, ಪೊಲೀಸರಿಗೆ ತಿಳಿಸಿರುವುದಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂತೋಷ್ ಸಿಂಗ್ ಹೇಳಿದ್ದಾರೆ.

ಈ ಕೊಠಡಿಯನ್ನು ಯಾರಿಗಾಗಿ ಕಾಯ್ದಿರಿಸಲಾಗಿದೆ ಎಂದು ಹೋಟೆಲ್ ಆಡಳಿತ ಮಂಡಳಿಗೆ ತಿಳಿದಿಲ್ಲ ಎಂದು ಸಿಂಗ್ ಹೇಳಿದ್ದಾರೆ.

ಮರುದಿನ, ಏಪ್ರಿಲ್ 7 ರಂದು, ಹೋಟೆಲ್ ರೂಮ್ ಅನ್ನು ಬೇರೆಯವರು ಕಾಯ್ದಿರಿಸಿದ್ದಾರೆ, ಆದರೆ ಯಾದವ್ ಅವರು ದೇವರ 'ದರ್ಶನ'ಕ್ಕೆ ಹೋಗಿದ್ದರು ಮತ್ತು ಅವರ ಪರಿಚಾರಕರೊಬ್ಬರು ಹೋಟೆಲ್‌ನಲ್ಲಿಯೇ ಇದ್ದರು. ಯಾದವ್ ಅವರಿಗೆ ಮ್ಯಾನೇಜ್‌ಮೆಂಟ್ ಬಹಳ ಸಮಯ ಕಾಯುತ್ತಿತ್ತು. ಆದರೂ ಅವರ ಬರಲಿಲ್ಲ. ಹೀಗಾಗಿ ಅವರ ವಸ್ತುಗಳನ್ನು ರಿಸೆಪ್ಷನ್ ಇರಿಸಲಾಯಿತು" ಎಂದು ಹೋಟೆಲ್ ಆಡಳಿತ ಮಂಡಳಿ ಹೇಳಿರುವುದಾಗಿ ಸಿಂಗ್ ತಿಳಿಸಿದ್ದಾರೆ.

ಹೋಟೆಲ್‌ಗೆ ಹಿಂತಿರುಗಿದ ನಂತರ, ಅವರು ಸಿಗ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಮತ್ತು ಹೋಟೆಲ್ ಆಡಳಿತದ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಸಿಗ್ರಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ರಾಜು ಸಿಂಗ್ ಅವರು ದೂರು ಸ್ವೀಕರಿಸಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್